Site icon Vistara News

ವಿಸ್ತಾರ TOP 10 NEWS : ರೂಪಾ- ರೋಹಿಣಿ ಗಲಾಟೆಗೆ ಸಿಎಂ ಗರಂ, ಸಂತರ ಜತೆ ಜೆ.ಪಿ ನಡ್ಡಾ ಮಾತುಕತೆ ಮತ್ತಿತರ ದಿನದ ಪ್ರಮುಖ ಸುದ್ದಿಗಳಿವು

The major news of the day ranged from CM's response to Rupa-Rohini row, JP Nadda's talk with Saints.

#image_title

1. ರೂಪಾ- ಸಿಂಧೂರಿ ಜಗಳಕ್ಕೆ ಸಿಎಂ ಬೊಮ್ಮಾಯಿ ಗರಂ, ಇಬ್ಬರಿಗೂ ಎಚ್ಚರಿಕೆ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ
ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (Sindhuri Vs Roopa) ಅವರ ನಡುವೆ ಕಳೆದ ೨೪ ಗಂಟೆಗಳಿಂದ ನಿರಂತರವಾಗಿ ನಡೆಯುತ್ತಿರುವ ಜಟಾಪಟಿ, ಸಾರ್ವಜನಿಕ ತೇಜೋವಧೆಗಳಿಗೆ ಸಂಬಂಧಿಸಿ ಕಡೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಧ್ಯ ಪ್ರವೇಶ ಮಾಡಿದ್ದಾರೆ. ಘಟನಾವಳಿಗಳು, ಇಬ್ಬರ ನಡುವಿನ ಜಗಳದಿಂದ ಸಾರ್ವಜನಿಕ ವಲಯದಲ್ಲಿ ಸರ್ಕಾರದ ಬಗ್ಗೆ ಮೂಡುತ್ತಿರುವ ಅಭಿಪ್ರಾಯಗಳಿಂದ ಎಚ್ಚೆತ್ತಿರುವ ಸಿಎಂ ಬೊಮ್ಮಾಯಿ ಅವರು ಈ ಇಬ್ಬರ ನಡುವಿನ ಜಗಳಕ್ಕೆ ಇತಿಶ್ರೀ ಹಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

2. ರೂಪಾಗೆ ರೋಹಿಣಿ ತಿರುಗೇಟು; ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ ಸಿಂಧೂರಿ ದಂಪತಿ
ಐಪಿಎಸ್‌ ಅಧಿಕಾರಿಯಾಗಿರುವ ಡಿ. ರೂಪಾ ಅವರು ಮಾಡಿರುವ ಆರೋಪ, ವೈಯಕ್ತಿಕ ತೇಜೋವಧೆಗಳಿಗೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಲು ರೋಹಿಣಿ ಸಿಂಧೂರಿ ದಂಪತಿ ಮುಂದಾಗಿದ್ದಾರೆ. ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್‌ ರೆಡ್ಡಿ ಅವರು ಡಿ. ರೂಪಾ ಅವರ ವಿರುದ್ಧ ದೂರು ನೀಡುವುದಕ್ಕಾಗಿ ಬಾಗಲಕುಂಟೆ ಪೊಲೀಸ್‌ ಠಾಣೆಗೆ ತೆರಳಿದ್ದಾರೆ. ಈ ನಡುವೆ, ಕರಕುಶಲ ನಿಗಮದ ವ್ಯವಸ್ಥಾಪನಾ ನಿರ್ದೇಶಕರಾಗಿರುವ ರೋಹಿಣಿ ಸಿಂಧೂರಿ ಅವರು ಸೋಮವಾರ ತಮ್ಮ ಕಚೇರಿಗೆ ತೆರಳಿ ಕರ್ತವ್ಯ ನಿರತರಾಗಿದ್ದಾರೆ. ಕಚೇರಿಗೆ ತೆರಳುವ ಮುನ್ನ ಅವರು ಕಳೆದ ಎರಡು ದಿನಗಳಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಮುಖಾಮುಖಿ ಆಗಿದ್ದು ʻಗೆಟ್‌ ವೆಲ್‌ ಸೂನ್‌ʼ ಎಂದು ಡಿ. ರೂಪಾ ಅವರಿಗೆ ಸಂದೇಶ ರವಾನಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

3. ಕರ್ನಾಟಕ ಸೇರಿ ಒಟ್ಟು 14 ರಾಜ್ಯಗಳಿಗೆ ಗಂಡಾಂತರ! ವಿಶ್ವದಲ್ಲೇ ಅಪಾಯದಲ್ಲಿರುವ ರಾಜ್ಯಗಳಿವು
ವಿಶ್ವದಲ್ಲಿ ಹವಾಮಾನ ಅಪಾಯದಲ್ಲಿರುವ (Climate Danger) ಟಾಪ್ 100 ರಾಜ್ಯಗಳ ಪಟ್ಟಿಯನ್ನು ಆಸ್ಟ್ರೇಲಿಯಾ ಮೂಲದ ಎಕ್ಸ್.ಡಿ.ಐ ಸಂಸ್ಥೆ ತಯಾರಿಸಿದೆ. ‘ದೇಶೀಯ ಹವಾಮಾನ ಅಪಾಯ’ (Gross Domestic Climate Risk) ಹೆಸರಿನಲ್ಲಿ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಕರ್ನಾಟಕ ಸೇರಿ ಭಾರತದ ಒಟ್ಟು 14 ರಾಜ್ಯಗಳು ಕಾಣಿಸಿಕೊಂಡಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

4. ಕರ್ನಾಟಕದ ಕೈ ತಪ್ಪಿದ ಓಲಾದ ಭಾರಿ ಹೂಡಿಕೆ, ರಾಜ್ಯ ಸರ್ಕಾರಕ್ಕೆ ಮೋಹನ್‌ದಾಸ್‌ ಪೈ ಚಾಟಿ
ಓಲಾ ಕಂಪನಿಯು (Ola) ಎಲೆಕ್ಟ್ರಿಕ್‌ ವಾಹನ ಉತ್ಪಾದನೆಗೆ ಭಾರಿ ಹೂಡಿಕೆಯನ್ನು ತಮಿಳುನಾಡಿನಲ್ಲಿ ಮಾಡಲು ಉದ್ದೇಶಿಸಿದೆ. ಈ ಹೂಡಿಕೆಯನ್ನು ಸೆಳೆಯುವಲ್ಲಿ (Mohandas Pai ) ಕರ್ನಾಟಕ ಸರ್ಕಾರ ವಿಫಲವಾಗಿದೆ. ಹೀಗಾಗಿ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಇನ್ಫೋಸಿಸ್‌ನ ಮಾಜಿ ನಿರ್ದೇಶಕ ಮತ್ತು ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ನ ಅಧ್ಯಕ್ಷ ಮೋಹನ್‌ದಾಸ್‌ ಪೈ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರಿ ಹೂಡಿಕೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಕಾಳಜಿ ಇದ್ದಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

5. ಸಮಾನ ನಾಗರಿಕ ಸಂಹಿತೆ ಜಾರಿ : ಕರಾವಳಿಯ ಸಂತರಿಂದ ಜೆ.ಪಿ. ನಡ್ಡಾ ಮುಂದೆ ಬೇಡಿಕೆ
ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ, ಗೋ ಹತ್ಯಾ ನಿಷೇಧವನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು (Karnataka Election 2023) ಮುಂದಿಟ್ಟಿದ್ದಾರೆ. ಕರಾವಳಿಯ ಸಾಧು ಸಂತರು. ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸೋಮವಾರ ಉಡುಪಿಯಲ್ಲಿ ಸಾಧು ಸಂತರ ಜತೆ ನಡೆಸಿದ ಮಾತುಕತೆಯ ವೇಳೆ ಈ ಬೇಡಿಕೆಯನ್ನು ಮುಂದಿಡಲಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

6. ಎಲ್ಲ ಪಕ್ಷಗಳಲ್ಲಿ ಕುಟುಂಬ ರಾಜಕಾರಣವಿದೆ, ಆದ್ರೆ ಬಿಜೆಪಿಗೆ ಕಾರ್ಯಕರ್ತರೇ ಕುಟುಂಬ: ಜೆ.ಪಿ.ನಡ್ಡಾ
ಎಲ್ಲಾ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಿವೆ. ಕಾಂಗ್ರೆಸ್‌ನಲ್ಲಿ ಕುಟುಂಬವೇ ರಾಜಕಾರಣ ಮಾಡುತ್ತಿದೆ. ಅಮ್ಮ, ಮಗ, ಮಗಳು ಎಲ್ಲರೂ ಕುಟುಂಬ ರಾಜಕಾರಣ ‌ಮಾಡುತ್ತಿದ್ದಾರೆ. ದೇಶದ ಬಹುತೇಕ ಎಲ್ಲಾ ಪಾರ್ಟಿಗಳು ಕುಟುಂಬ ರಾಜಕಾರಣ (Karnataka Election) ಮಾಡುತ್ತಿವೆ. ಆದರೆ, ಭಾರತೀಯ ಜನತಾ ಪಾರ್ಟಿಗೆ ಕಾರ್ಯಕರ್ತರೇ ಕುಟುಂಬ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ

7. ಸಮರಪೀಡಿತ ಉಕ್ರೇನ್‌ಗೆ ಜೋ ಬೈಡೆನ್‌ ಅಚ್ಚರಿಯ ಭೇಟಿ, ಹೆಚ್ಚಿನ ಶಸ್ತ್ರಾಸ್ತ್ರ ನೆರವಿನ ಭರವಸೆ
ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಆರಂಭಿಸಿ ಒಂದು ವರ್ಷ ತುಂಬಲು ಕೆಲವೇ ದಿನ ಬಾಕಿ ಇರುವ ಮೊದಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಉಕ್ರೇನ್‌ ರಾಜಧಾನಿ ಕೀವ್‌ಗೆ (Joe Biden Visits Kyiv) ಅಚ್ಚರಿಯ ಭೇಟಿ ನೀಡಿದ್ದಾರೆ. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಜತೆ ಹೆಜ್ಜೆಹಾಕಿದ ಬೈಡೆನ್‌, ಮುಂದಿನ ದಿನಗಳಲ್ಲಿ ಹೆಚ್ಚಿನ ಶಸ್ತ್ರಾಸ್ತ್ರಗಳ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೆಯೇ, ೫೦೦ ದಶಲಕ್ಷ ಡಾಲರ್‌ ಮೊತ್ತವನ್ನೂ ಬೈಡೆನ್‌ ಘೋಷಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

8. ಖ್ಯಾತ ಚಿತ್ರ ನಿರ್ದೇಶಕ ಎಸ್‌.ಕೆ. ಭಗವಾನ್‌ ಇನ್ನಿಲ್ಲ
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ ಎಸ್‌.ಕೆ. ಭಗವಾನ್‌ ಅವರು ನಿಧನರಾಗಿದ್ದಾರೆ. 93 ವರ್ಷಗಳ‌ ತುಂಬು ಜೀವನ ನಡೆಸಿದ ಹಿರಿಯ ನಿರ್ದೇಶಕ ವಯೋಸಹಜ ಕಾಯಿಲೆಯಿಂದ‌ ಬಳಲುತ್ತಿದ್ದರು. ನಿನ್ನೆ ತಡರಾತ್ರಿ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಡಾ. ರಾಜ್‌ಕುಮಾರ್‌ ಅವರ ಜತೆಗೆ ಸಾಲುಸಾಲಾಗಿ ಹಿಟ್ ಚಿತ್ರಗಳನ್ನು ಅವರು ಕೊಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ

9. ಕೆ ಎಲ್​ ರಾಹುಲ್​ ವಿರುದ್ಧ ಮಗದೊಮ್ಮೆ ಟೀಕೆಗಳ ಪ್ರಹಾರ ನಡೆಸಿದ ವೆಂಕಟೇಶ್​ ಪ್ರಸಾದ್​
ಮುಂಬಯಿಯ ಮಾಜಿ ಕ್ರಿಕೆಟಿಗರು ತಮ್ಮ ರಾಜ್ಯದ ಕ್ರಿಕೆಟಿಗರೇನಾದರೂ ತಂಡದಲ್ಲಿ ವೈಫಲ್ಯ ಎದುರಿಸುತ್ತಿದ್ದರೆ ಅವರ ಬೆಂಬಲವಾಗಿ ನಿಂತು ತಂಡದಿಂದ ತೆಗೆಯದೇ ಇನ್ನಷ್ಟು ಅವಕಾಶಗಳನ್ನು ನೀಡಬೇಕು ಎಂದು ವಾದ ಮಂಡಿಸುತ್ತಾರೆ. ಅದರೆ, ಕನ್ನಡಿಗ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್ (Venkatesh Prasad) ಅವರು ಈ ವಿಚಾರದಲ್ಲಿ ನಿಷ್ಪಕ್ಷಪಾತಿ!. ಕನ್ನಡಿಗರೇ ಆಗಿರುವ ಕೆ. ಎಲ್​ ರಾಹುಲ್ (KL Rahul)​ ಫಾರ್ಮ್ ಕಳೆದುಕೊಂಡು ಒದ್ದಾಡುತ್ತಿರುವ ನಡುವೆಯೇ ಅವರ ಮೇಲೆ ಟೀಕೆಗಳ ಬಾಣಗಳನ್ನು ಹೂಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ (INDvsAUS) ರಾಹುಲ್​ ಸರಿಯಾಗಿ ಬ್ಯಾಟಿಂಗ್​ ಮಾಡದಿರುವುದನ್ನು ಉಲ್ಲೇಖಿಸಿ ಅವರಿಗೆ ತಂಡದಲ್ಲಿ (Team India) ಅವಕಾಶ ನೀಡಬಾರದು ಎಂದು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಟೀಕೆ ಮಾಡಿದ್ದ ಅವರು ಫೆಬ್ರವರಿ 20ರಂದು ಹಲವು ಟ್ವೀಟ್​ಗಳನ್ನು ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

10. ಜೈಲ್ ಅಧಿಕಾರಿಗಳ ತಪಾಸಣೆಗೆ ಹೆದರಿ ಮೊಬೈಲ್ ಫೋನ್ ಅನ್ನೇ ನುಂಗಿದ ಕೈದಿ!
ಕೆಲವರು ಆಕಸ್ಮಿಕವಾಗಿ ಏನೇನನ್ನೋ ನುಂಗಿ ಒದ್ದಾಡುವ ವಿಚಾರಗಳು ಸುದ್ದಿಯಾಗುತ್ತಿರುತ್ತವೆ. ಆದರೆ ಬಿಹಾರದಲ್ಲಿ ಕೈದಿಯೊಬ್ಬ ಜೈಲಧಿಕಾರಿಗಳ ತಪಾಸಣೆಗೆ ಹೆದರಿ ಮೊಬೈಲ್ ಫೋನ್ ಅನ್ನೇ ನುಂಗಿರುವ ವಿಚಿತ್ರ ಘಟನೆ (Viral News) ನಡೆದಿದೆ. ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. ಚಿಕ್ಕಮಗಳೂರಿನಲ್ಲಿ ಬೈಕಲ್ಲಿ ತೆರಳುತ್ತಿದ್ದವರ ಮೇಲೆ ಗುಂಡಿನ ದಾಳಿ; ಸ್ಥಳದಲ್ಲಿಯೇ ಇಬ್ಬರ ಮೃತ್ಯು
  2. ರಾಮನ ಬಾಣ ರಾವಣನ ಕೈಯಲ್ಲಿರುವುದು ಭೂಷಣ ಅಲ್ಲ’, ಉದ್ಧವ್‌ ಠಾಕ್ರೆ ವ್ಯಂಗ್ಯ
  3. ಗೋಧ್ರಾ ರೈಲು ಹತ್ಯಾಕಾಂಡ ದೋಷಿಗಳಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಿ: ಸುಪ್ರೀಂ ಕೋರ್ಟ್‌ಗೆ ಗುಜರಾತ್ ಸರ್ಕಾರ ಮನವಿ
  4. 150 ಕೋಟಿ ರೂ. ಬೆಲೆ ಬಾಳುವ ಮನೆಯನ್ನು ಪೋಷಕರಿಗೆ ಗಿಫ್ಟ್‌ ಮಾಡಿದ ಧನುಷ್‌: ಫೋಟೊಗಳು ಇಲ್ಲಿವೆ!
  5. ಮಕ್ಕಳ ಕಥೆ: ಕುರಿ ಮತ್ತು ಮೇಕೆಯ ಜಗತ್‌ ಪರ್ಯಟನೆ
  6. ದೇವರ ಮುಂದೆ ಕುಳಿತ ಕಂದನ ಪ್ರಾರ್ಥನೆಯಲ್ಲಿ ದೇವರೇ ಬಂದಿದ್ದ!
  7. ರಾಜ ಮಾರ್ಗ ಅಂಕಣ: ರವೀಂದ್ರ ಜಡೇಜಾ ಎಂಬ ಫೈಟಿಂಗ್ ಸ್ಪಿರಿಟ್! ದೈತ್ಯ ಸಂಹಾರಿಯ ಗ್ರೇಟ್‌ ಕಮ್‌ ಬ್ಯಾಕ್!
Exit mobile version