Site icon Vistara News

ಕಳ್ಳತನ ಮಾಡಲು ಬಂದಿದ್ದವ ಮಹಡಿಯಿಂದ ಬಿದ್ದು ಸಾವು

Davanagere KTJ Nagara

ದಾವಣಗೆರೆ:ಕೆಟಿಜೆ ನಗರದ ಮನೆಯೊಂದಕ್ಕೆ ಕಳವು ಮಾಡಲು ಬಂದಿದ್ದ ಮೂವರು ಕಳ್ಳರಲ್ಲಿ ಓರ್ವ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ.

ನಗರದ ನಿವಾಸಿ ಪರುಶುರಾಮ ಮೃತ ಕಳ್ಳ. ಬುಧವಾರ ಬೆಳಗಿನ ಜಾವ 3 ಗಂಟೆಗೆ ಕಳವು ಮಾಡಲು ಬಂದಿದ್ದರು. ಈ ವೇಳೆ ಮನೆ ಮಾಲೀಕನಿಗೆ ಎಚ್ಚರವಾಗಿ ಕೂಗಿದ್ದಾರೆ. ತಮ್ಮನ್ನು ಹಿಡಿಯಲು ಆಗಮಿಸುತ್ತಿದ್ದಾರೆ ಎಂದು ಕಳ್ಳರು ಬೆದರಿದ್ದಾರೆ.

ಕೂಡಲೆ ಕಳ್ಳತನ ಮಾಡುವುದನ್ನು ಬಿಟ್ಟು ಪರಾರಿಯಾಗಲು ಮುಂದಾಗಿದ್ದಾರೆ. ಮೂವರಲ್ಲಿ ಇಬ್ಬರು ಯಶಸ್ವಿಯಾಗಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಮೂರನೇ ಕಳ್ಳನೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಮಹಡಿ ಮೇಲಿನಿಂದ ರಸ್ತೆಗೆ ಜಿಗಿದು ಓಡಲು ಮುಂದಾಗಿದ್ದಾನೆ.

ಕೆಳಕ್ಕೆ ಜಿಗಿದಿದ್ದಾನಾದರೂ ಈ ವೇಲೆ ತಲೆಗೆ ಪೆಟ್ಟಾಗಿ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ‌ ಎಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಟಿಜೆ‌ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಕುರಿ ಕಳ್ಳತನ ಮಾಡಲು ಬಂದು ರೈತನನ್ನೇ ಕೊಂದವರು ಅರೆಸ್ಟ್‌

Exit mobile version