ಬೆಳಗಾವಿ: ಯುದ್ಧದಲ್ಲಿ ದೇಶದ ರಕ್ಷಣೆಗೆ ಪ್ರಾಣತ್ಯಾಗ ಮಾಡಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ. ಆದರೆ, ಜಿಲ್ಲೆಯ ಚಿಕ್ಕೋಡಿ ನಿಪ್ಪಾಣಿ ಪಟ್ಟಣದಲ್ಲಿರುವ ಹುತಾತ್ಮ ಸ್ತಂಭಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರಿಂದ ಗೌರವ ಸಲ್ಲಿಸುವ ವೇಳೆ ಅಗೌರವ ಆಗಿದ್ದು,ಈ ನಡೆ ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ನಿಪ್ಪಾಣಿ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಉದ್ಘಾಟನೆಗಾಗಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಆಗಮಿಸಿದ್ದರು. ಉದ್ಘಾಟನೆಗೆ ಮುನ್ನ ಹುತಾತ್ಮ ಸ್ವತಂತ್ರ ಯೋಧರ ಸ್ಮಾರಕ ಸ್ತಂಭಕ್ಕೆ ಗೌರವ ಸಮರ್ಪಣೆ ಮಾಡಲು ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಜೊತೆಗೆ ಗೃಹ ಸಚಿವರು ತೆರಳಿದ್ದರು.
ಹುತಾತ್ಮ ಸ್ವತಂತ್ರ ಯೋಧರ ಸ್ಮಾರಕ ಸ್ತಂಭಕ್ಕೆ ಹೂಗುಚ್ಛ ಇರಿಸಿ ನಮನ ಸಲ್ಲಿಸಲು ತೆರಳಿದಾಗ ಗೃಹ ಸಚಿವ ಆರಗ, ಸಚಿವೆ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಪಾದರಕ್ಷೆ ಧರಿಸಿಯೇ ನಮಿಸಿದ್ದಾರೆ. ರಿಂದ ಅಗೌರವ. ಪೊಲೀಸ್ ಅಧಿಕಾರಿಗಳು ಶೂ ತೆಗೆದು ಹೋಗಿದ್ದನ್ನು ನೋಡಿಯೂ ಸಹ ಇವರು ಪಾದರಕ್ಷೆಯನ್ನು ಕಳಚಿ ಹೋಗದೇ ಇರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ| ಕನ್ನಡಿಗ ಹುತಾತ್ಮ ಯೋಧನ ಶೌರ್ಯ ಪ್ರಶಸ್ತಿ ನೀಡಲು ಸ್ವತಃ ರಾಷ್ಟ್ರಪತಿ ವೇದಿಕೆ ಇಳಿದು ಬಂದರು