ಬೆಂಗಳೂರು: ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ಪ್ರಧಾನಿಗೆ ನಾವು ಗೌರವ ಕೊಡುತ್ತೇವೆ. ಆದರೆ, ಕೇಂದ್ರ ಸರ್ಕಾರವೇ ನಮಗೆ ಬರುವುದು ಬೇಡ ಎಂದು ಹೇಳಿತ್ತು. ಪ್ರಧಾನಿ ಕಚೇರಿಯಿಂದಲೂ (Modi in Bangalore) ನಮಗೆ ಪೋನ್ ಬಂದಿತ್ತು. ರಾಜಕೀಯ ಪ್ರಜ್ಞೆ, ಸಮಯ ಪ್ರಜ್ಞೆ ಎಲ್ಲವೂ ನಮಗೆ ಇದೆ. ಯಾರಿಗೆ ಎಷ್ಟು ಗೌರವ ಕೋಡಬೇಕು ಎಂಬುವುದು ನಮಗೆ ಗೊತ್ತಿದೆ. ನಾವು ಸರ್ಕಾರದ ವತಿಯಿಂದ ಸ್ವಾಗತ ಮಾಡಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ರಾಜ್ಯ ಸರ್ಕಾರ ಶಿಷ್ಟಾಚಾರ ಉಲ್ಲಂಘಿಸಿದೆ ಎಂಬ ಮಾಜಿ ಸಚಿವ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ರಾಜಕಾರಣಿಗಳು ಬರುವುದು ಬೇಡ ಎಂದು ಪ್ರಧಾನಿ ಕಾರ್ಯಾಲಯ ಹೇಳಿತ್ತು. ಈ ಬಗ್ಗೆ ಅಧಿಕೃತವಾಗಿ ಪತ್ರ ನೀಡುವಂತೆ ಹೇಳಿದ್ದೆವು, ಅವರು ಲೆಟರ್ ಕೊಟ್ಟಿದ್ದಾರೆ. ನಮ್ಮ ಸಂಸ್ಕೃತಿ ಬೇರೆ ರಾಜ್ಯಗಳ ರೀತಿಯಲ್ಲ, ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ಪ್ರಧಾನಿಗೆ ಗೌರವ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | PM Narendra Modi: ಮೋದಿ ಸ್ವಾಗತಕ್ಕೆ ಬಾರದ ಸಿಎಂ; ಪಿಎಂ ಕಚೇರಿ ಸೂಚನೆ; ಮುಖ್ಯ ಕಾರ್ಯದರ್ಶಿಯಿಂದ ಸ್ವಾಗತ
ರೇಣುಕಾಚಾರ್ಯ, ಶಿವರಾಮ್ ಹೆಬ್ಬಾರ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಕ್ಷೇತ್ರದ ಸಮಸ್ಯೆ, ಜನರ ಸಮಸ್ಯೆ ಇರುತ್ತದೆ. ಅದಕ್ಕಾಗಿ ಬಂದು ಭೇಟಿ ಮಾಡಿದ್ದಾರೆ. ಅಧಿಕಾರದಲ್ಲಿರುವ ನಾಯಕರ ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಇದರಲ್ಲಿ ತಪ್ಪೇನಿದೆ. ಸೋಮಶೇಖರ್ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇವತ್ತು ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಕನಕಪುರ ರಸ್ತೆಯಲ್ಲಿ ನೀರಿನ ಸಮಸ್ಯೆ ಇದೆ. ಸಮಸ್ಯೆ ಇದ್ದಾಗ ನಾವು ಪರಿಹರಿಸಬೇಕು, ಅದನ್ನು ಮಾಡುತ್ತಿದ್ದೇವೆ ಅಷ್ಟೇ ಎಂದು ಹೇಳಿದರು.
ಇದನ್ನೂ ಓದಿ | PM Narendra Modi : ಗುಲಾಮರಿಗೆ ಇದು ಅರ್ಥ ಆಗಲ್ಲ; ಸಾಮ್ರಾಟರೆಲ್ಲ ಬೀದಿಪಾಲಾಗಿದ್ದಾರೆಂಬ ಕಾಂಗ್ರೆಸ್ ಗೇಲಿಗೆ ಬಿಜೆಪಿ ಪ್ರತ್ಯುತ್ತರ
ಹಾಲಿ ಶಾಸಕರದ್ದು ಏನೇನೋ ಸಮಸ್ಯೆ ಇರುತ್ತೆ. ಅದನ್ನು ಮಾಧ್ಯಮಗಳ ಮುಂದೆ ಹೇಳಲು ಆಗಲ್ಲ. ಪ್ರೀತಿ, ಸ್ನೇಹ, ಬಾಂಧವ್ಯ, ರಾಜಕೀಯ ಇರುತ್ತದೆ. ಬೇರೆ ಬೇರೆ ವಿಚಾರಗಳೂ ಇರುತ್ತವೆ. ಅದನ್ನು ಸಾರ್ವಜನಿಕವಾಗಿ ಹೇಳಲು ಆಗಲ್ಲ. ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ. ನಾವು ಆಪರೇಷನ್ ಹಸ್ತ ಮಾಡಲ್ಲ ಎಂದ ಅವರು, ಜನರಿಗೆ ಸಾಕಷ್ಟು ನಿರೀಕ್ಷೆ ಇರುತ್ತವೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಎಲ್ಲ ಯೋಜನೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಮಾಡಲು ಆಗುತ್ತಾ? 1.30 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ನೋಂದಣಿ ಮಾಡಿಸಿದ್ದಾರೆ. ಬರೀ ಕಾಂಗ್ರೆಸ್ಸಿಗರಿಗೆ ಮಾತ್ರವಲ್ಲ, ಎಲ್ಲರಿಗೂ ಯೋಜನೆ ಸಿಗುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಕೂಡಾ ಬರುವುದು ಬೇಕಾಗಿಲ್ಲ ಎಂದಿದ್ದ ಪ್ರಧಾನಿ ಕಚೇರಿ
ಬೆಂಗಳೂರು: ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ (pm narendra modi) ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಈ ವೇಳೆ ರಾಜ್ಯ ಪೋಲಿಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಪೋಲಿಸ್ ಆಯುಕ್ತ ದಯಾನಂದ್ ಹಾಜರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಾಗಲೀ ಶಾಸಕರಾಗಲೀ ಎಲ್ಲೂ ಕಾಣಿಸಲಿಲ್ಲ. ರಾಜ್ಯ ಸರ್ಕಾರದ ರಾಜಕೀಯ ಪ್ರತಿನಿಧಿಗಳ ಅಹ್ವಾನ ಬೇಡ ಎಂದು ಪಿಎಂ ಕಚೇರಿಯಿಂದ ಮಾಹಿತಿ ನೀಡಲಾಗಿದೆ ಎನ್ನಲಾಗಿದ್ದು, ಹೀಗಾಗಿ ಅಧಿಕಾರಿಗಳನ್ನು ಮಾತ್ರ ರಾಜ್ಯ ಸರ್ಕಾರ ಕಳುಹಿಸಿ ಕೊಟ್ಟಿದೆ.
ಇದನ್ನೂ ಓದಿ | Karnataka Politics : ಸರ್ವಾಧಿಕಾರಿ ಮರ್ಜಿ ಮುಂದೆ ಬೀದಿಪಾಲಾದ ಬಿಜೆಪಿ ನಾಯಕರು; ವ್ಯಂಗ್ಯವಾಡಿದ ಕಾಂಗ್ರೆಸ್
ಪಿಎಂ ಸ್ವಾಗತ ಮಾಡಲು ಹೋಗುವಂತೆ ಪರಮೇಶ್ವರ್ ಅವರಿಗೆ ಸೂಚಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಕೊನೆಯ ಕ್ಷಣದಲ್ಲಿ ಪಿಎಂ ಕಚೇರಿಯಿಂದ ಮಾಹಿತಿ ಹೋಗಿದ್ದು, ರಾಜ್ಯಪಾಲರು ಮತ್ತು ಸಿಎಂ ಸಹ ಸ್ವಾಗತ ಕೋರುವ ಅವಶ್ಯಕತೆ ಇಲ್ಲ ಎಂದು, ಕೇವಲ ಸರ್ಕಾರಿ ಅಧಿಕಾರಿಗಳಿಂದ ಮಾತ್ರ ಸ್ವಾಗತ ಕೋರುವಂತೆ ಸಂದೇಶ ರವಾನೆಯಾಗಿದೆ. ಹೀಗಾಗಿ ಸ್ವಾಗತ ಕೋರಲು ರಾಜ್ಯ ಸರ್ಕಾರದ ಸಚಿವರು ತೆರಳಿಲ್ಲ.