Site icon Vistara News

ಪೊಲೀಸ್‌ ನಿಯಮಾವಳಿಯಲ್ಲಿ ಮೇಲ್ಮನವಿ ಅವಕಾಶ, ವಿಸ್ತಾರ ನ್ಯೂಸ್‌ ವರದಿ ಬೆನ್ನಲ್ಲೇ ಆರಗ ಜ್ಞಾನೇಂದ್ರ ಸ್ಪಷ್ಟನೆ

Police

ಬಳ್ಳಾರಿ: ಪೊಲೀಸ್ ಶಿಸ್ತು ನಡಾವಳಿ ನಿಯಮಗಳಿಗೆ ತಿದ್ದುಪಡಿಯಲ್ಲಿ ಯಾವುದೋ ಕಾರಣಕ್ಕೆ ದಂಡನೆಗೊಳಗಾದ ಸಿಬ್ಬಂದಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕು ಮೊಟಕುಗೊಳಿಸಿದೆ ಎನ್ನುವ ಸುದ್ದಿಗೆ ಸಚಿವ ಆರಗ ಜ್ಞಾನೇಂದ್ರ ಅವರು ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. “ಮೇಲ್ಮನವಿಗೆ ಅವಕಾಶವಿಲ್ಲ ಎಂಬ ತಪ್ಪಾರ್ಥ ಸರಿಪಡಿಸಲಾಗುತ್ತದೆ” ಎಂದು ಬರೆದುಕೊಂಡಿರುವುದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯು ನಿಟ್ಟುಸಿರು ಬಿಟ್ಟಿದ್ದಾರೆ.

ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ನಲ್ಲಿ “ಪೊಲೀಸ್ ನಿಯಮಾವಳಿಯಲ್ಲಿ ಮೇಲ್ಮನವಿಗೆ ಅವಕಾಶವಿಲ್ಲ: ಡಿಜಿಪಿ ವಿರುದ್ಧ ಸಿಡಿದೆದ್ದ ಅಧಿಕಾರಿ, ಆಡಿಯೊ ವೈರಲ್” ಬರಹದ ಅಡಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯು ನಿಯಮ ತಿದ್ದುಪಡಿಯಿಂದಾಗಿ ಆಗುತ್ತಿರುವ ಸಮಸ್ಯೆಯ ಬಗ್ಗೆ ಆಡಿಯೊ ಸಹಿತ ವರದಿ ಪ್ರಕಟಿಸಲಾಗಿತ್ತು. ವರದಿ ಪ್ರಕಟವಾದ ಕೂಡಲೇ ಇಲಾಖೆಯು ಎಚ್ಚೆತ್ತುಕೊಂಡಿದೆ.

ಪೊಲೀಸ್ ಶಿಸ್ತು ನಡಾವಳಿ ನಿಯಮಗಳಿಗೆ ತಿದ್ದುಪಡಿ ತರುವ ಪ್ರಕ್ರಿಯೆ ಇನ್ನೂ ಕರಡು ರಚನೆಯ ಹಂತದಲ್ಲಿದೆ. ಇದರಲ್ಲಿ ದಂಡನೆಗಳಿಗೆ ಮೇಲ್ಮನವಿ ಸಲ್ಲಿಸುವ ಅವಕಾಶ ನಿರಾಕರಿಸಲಾಗುತ್ತಿದೆ ಎಂಬ ಅರ್ಥ ಕಂಡು ಬರುತ್ತಿದೆ ಎಂದು ಹಲವು ಪೊಲೀಸ್ ಅಧಿಕಾರಿಗಳು ಹಾಗು ಹಿರಿಯ ಸಿಬ್ಬಂದಿ ಗಮನ ಸೆಳೆದಿದ್ದಾರೆ. ಅದು ಇನ್ನೂ ಕರಡು ಹಂತದಲ್ಲೇ ಇದ್ದು, ಅಂತಿಮಗೊಳ್ಳುವವರೆಗೂ ಜಾರಿಗೆ ಬರುವುದಿಲ್ಲ. ನಿಯಮಗಳಲ್ಲಿ ತಪ್ಪಾರ್ಥ ಬಿಂಬಿಸುವ ಪ್ರಸ್ತಾವನೆಯನ್ನು ಸರಿಪಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಕರಡು ಪ್ರತಿಯಲ್ಲಿ ಟೈಪಿಂಗ್ ದೋಷವಿರುವುದು ಕಂಡು ಬಂದಿದ್ದು, ಅದನ್ನು ಸರಿಪಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವಂತೆ ದೊಡ್ಡ ಅಥವಾ ಸಣ್ಣ ಶಿಕ್ಷೆಗಳಿಗೆ ಮೇಲ್ಮನವಿಯನ್ನು ತೆಗೆದುಹಾಕುವಂತಹ ಪ್ರಸಾಪ್ತವಿಲ್ಲ ಎಂದು ಕರ್ನಾಟಕ ಸ್ಟೇಟ್ ಪೊಲೀಸ್ ಫ್ಯಾಕ್ಟ್ ಚೆಕ್ ಎಂಬ ಟ್ವಿಟರ್ ಖಾತೆಯಲ್ಲಿ ಸ್ಟಷ್ಟಪಡಿಸಿದೆ.

ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದಂತೆ ಕರ್ನಾಟಕ ರಾಜ್ಯ ಪೊಲೀಸ್ ಕೆಎಸ್‌ಪಿ (ಡಿಪಿ) ಅಮೆಡ್‌ಮೆಂಟ್ ರೂಲ್ಸ್ ೨೦೨೨ ಡ್ರಾಫ್ಟ್‌ ರೂಲ್ಸ್ಅನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ್ದು ಮೇಲ್ಮನವಿ ಅವಕಾಶವನ್ನು ತೆಗೆದುಹಾಕುವ ಬಗ್ಗೆ ಹಲವಾರು ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತಿದೆ. ಸರ್ಕಾರವು ಮುಂದಿನ ದಿನಗಳಲ್ಲಿ ಸರಿಯಾದ ಆವೃತ್ತಿಯನ್ನು ಪ್ರಕಟಿಸುವವರಿಗೆ ಕಾಯುವಂತೆ ವಿನಂತಿಸಿದ ಮಾಹಿತಿಯನ್ನು ಟ್ವಟರ್‌ನಲ್ಲಿ ಹಾಕಿಕೊಂಡಿದೆ.

ಇದನ್ನೂ ಓದಿ | ಪೊಲೀಸ್‌ ನಿಯಮಾವಳಿಯಲ್ಲಿ ಮೇಲ್ಮನವಿಗೆ ಅವಕಾಶ ಇಲ್ಲ: ಡಿಜಿಪಿ ವಿರುದ್ಧ ಸಿಡಿದೆದ್ದ ಅಧಿಕಾರಿ, ಆಡಿಯೊ ವೈರಲ್‌

Exit mobile version