Site icon Vistara News

Textbook Revision: ಪಠ್ಯ ಪುಸ್ತಕ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ; ಯಾವ ಪಾಠಗಳಿಗೆ ಕೊಕ್‌?

amending the textbook

#image_title

ಬೆಂಗಳೂರು: ಬಿಜೆಪಿ ನಾಯಕರ ವಿರೋಧದ ನಡುವೆ ಪಠ್ಯ ಪುಸ್ತಕ ಪರಿಷ್ಕರಣೆ (Textbook Revision) ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 6 ರಿಂದ 10ನೇ ತರಗತಿಯ ಕನ್ನಡ ಭಾಷೆ ಪಾಠ ಹಾಗೂ ಸಮಾಜ ವಿಜ್ಞಾನ ಪುಸ್ತಕಗಳಲ್ಲಿ ಕೆಲ ಪರಿಷ್ಕರಣೆ ಮಾಡಲಾಗಿದೆ.

ಪ್ರಮುಖವಾಗಿ 10ನೇ ತರಗತಿಯ ಕನ್ನಡ ಭಾಷಾ ಪುಸ್ತಕದಲ್ಲಿ ಕೇಶವ ಬಲಿರಾಂ ಹೆಡಗೇವಾರ್‌ ರಚನೆಯ ʼನಿಜವಾದ ಆದರ್ಶ ಪುರುಷ ಯಾರಾಗಬೇಕುʼ ಎಂಬ ಗದ್ಯಕ್ಕೆ ಬದಲಾಗಿ ಶಿವಕೋಟ್ಯಾಚಾರ್ಯರ ʼಸುಕುಮಾರ ಸ್ವಾಮಿಯ ಕಥೆʼ ಸೇರ್ಪಡೆ ಮಾಡಲಾಗಿದೆ. ಅದೇ ರೀತಿ ಚಕ್ರವರ್ತಿ ಸೂಲಿಬೆಲೆ ರಚನೆಯ ʼತಾಯಿ ಭಾರತೀಯ ಅಮರ ಪುತ್ರರುʼ ಗದ್ಯ ಪೂರ್ಣವಾಗಿ ಕೈಬಿಡಲಾಗಿದೆ.

ಇದನ್ನೂ ಓದಿ | Rice Politics: ತೆಲಂಗಾಣದಲ್ಲೂ ಅಕ್ಕಿ ಇಲ್ವಂತೆ; 7-8 ಕೆಜಿಗೆ ಇಳಿಯುತ್ತಾ ಅನ್ನಭಾಗ್ಯ?

2023-24ನೇ ಸಾಲಿನ ಪಠ್ಯಪುಸ್ತಕಗಳಲ್ಲಿ ಸರ್ಕಾರದ ಆದೇಶದ ಮೇರೆಗೆ ವಿಷಯ ತಜ್ಞರು ಪರಿಶೀಲನೆ ನಡೆಸಿ, ಕೆಲವು ಮಾರ್ಪಾಡುಗಳಿಗೆ ಸೂಚಿಸಿದ್ದಾರೆ. ಅದರಂತೆ ರಾಜ್ಯ ಸರ್ಕಾರ ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ಮುಂದಾಗಿದೆ. ಕನ್ನಡ ಭಾಷೆಯಲ್ಲಿ 9 ಪಾಠ ಕೈಬಿಟ್ಟು ಅವುಗಳ ಸ್ಥಾನಕ್ಕೆ ಹೊಸ ಗದ್ಯ ಸೇರ್ಪಡೆ ಮಾಡಿದ್ದು, ಸಮಾಜ ವಿಜ್ಞಾನ ಪುಸ್ತಕಗಳಲ್ಲಿ 9 ಪಾಠಗಳಲ್ಲಿ ಕೆಲ ವಾಕ್ಯಗಳಿಗೆ ತಿದ್ದುಪಡಿ ಮಾಡಲಾಗಿದೆ.

Exit mobile version