ಬಳ್ಳಾರಿ: ಜಿಲ್ಲೆಯ ಚೇಳ್ಳಗುರ್ಕಿ (Chellagurki) ಗ್ರಾಮದ ಹಿರಿಯ ರಂಗ ಕಲಾವಿದ (Theater artist) ಅಂಗಡಿ ಲಕ್ಷ್ಮೀಶ ಅವರು ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿನ ಲಕ್ಷ್ಮೀಪುರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರು ಗ್ರಾಮದ ರಂಗಕಲಾವಿದನಾಗಿ ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಹಾಗೂ ಬಯಲಾಟ ಕಲಾವಿದನಾಗಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಲ್ಲದೆ ಇತ್ತೀಚಿಗೆ ಬಿಡುಗಡೆಯಾದ ಚೇಳ್ಳಗುರ್ಕಿ ಎರ್ರಿತಾತ ಮಹಿಮೆ ಎಂಬ ಭಕ್ತಿ ಪ್ರಧಾನ ಸಿನಿಮಾದಲ್ಲಿ ಅಭಿನಯಿಸಿ, ಪ್ರೇಕ್ಷಕರ ಮನಸೂರೆಗೊಳಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು, ಹಾಗೂ ಮೂವರು ಕಿರಿಯ ಸಹೋದರರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ಶನಿವಾರ (ಆ.19ರಂದು ) ಲಕ್ಷ್ಮೀಪುರ ರುದ್ರಭೂಮಿಯಲ್ಲಿ 11 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.