Site icon Vistara News

Theerthahalli News: ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ಕರ್ನಾಟಕ ರಾಜ್ಯ ದಲಿತ ಸಂಘರ್ಷದಿಂದ ಪ್ರತಿಭಟನೆ

Dalit conflict theerthahalli Kimmane Ratnakar

#image_title

ತೀರ್ಥಹಳ್ಳಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ (State Dalit conflict) ತೀರ್ಥಹಳ್ಳಿ ಶಾಖೆಯ ವತಿಯಿಂದ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ತೀರ್ಥಹಳ್ಳಿಯಲ್ಲಿ ಪಾದಯಾತ್ರೆ ಹಾಗೂ ಪ್ರತಿಭಟನೆ ಸೋಮವಾರ (ಮಾ.26) ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಪ್ರಕಾಶ್ ಜಿಗಡೆ, “ಕಿಮ್ಮನೆ ರತ್ನಾಕರ್ ಅವರು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಸರಿತಾ ಅವರನ್ನು ದಲಿತರು ಎನ್ನುವ ಕಾರಣಕ್ಕೆ ಹಠ ಹಿಡಿದು ವರ್ಗಾವಣೆ ಮಾಡಿಸಿದ್ದು, ಇದು ಖಂಡನೀಯ. ದಲಿತ ಅಧಿಕಾರಿಗಳೇ ವಿರಳ. ಸರಿತಾ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಆದರೆ ಕಿಮ್ಮನೆ ರತ್ನಾಕರ್ ಹಿಂಬಾಲಕರ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಅವರ ವರ್ಗಾವಣೆ ಆಗಿದೆ. ಮುಂದಿನ ದಿನಗಳಲ್ಲಿ ಕಿಮ್ಮನೆ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: T20 Cricket : ಒಡಿಐನಲ್ಲಿ ದಾಖಲೆ ಬರೆದಿದ್ದ ದಕ್ಷಿಣ ಆಫ್ರಿಕಾ ಟಿ20 ಪಂದ್ಯದಲ್ಲೂ ಮಾಡಿತು ವರ್ಲ್ಡ್​ ರೆಕಾರ್ಡ್​

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಾಸರವಳ್ಳಿ ಶ್ರೀನಿವಾಸ್ ಮಾತನಾಡಿ, “ಕಿಮ್ಮನೆಯವರ ಕಾಂಗ್ರೆಸ್ ಹಿಂಬಾಲಕರ ಅಕ್ರಮ ಸೈಟು, ಮರಳು, ಕಲ್ಲು ದಂಧೆಗೆ ಸರಿತಾ ಅವರು ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಅವರು ಅಲ್ಲಿ ಅಧಿಕಾರವಹಿಸಿಕೊಂಡ ದಿನದಿಂದ ಕಿರುಕುಳ ನೀಡಲಾಗಿತ್ತು. ಇದರ ಹಿಂದೆ ಕಿಮ್ಮನೆಯವರ ದಲಿತ ವಿರೋಧಿ ಧೋರಣೆ ಕೆಲಸ ಮಾಡಿದೆ. ಹಿಂದೆ ಅವರು ಹೊನ್ನಾನಿ ಗ್ರಾಮದಲ್ಲಿ ದಲಿತರಿಗೆ ಮಂಜೂರು ಮಾಡಿದ ಜಮೀನು ವಶಪಡಿಸಿಕೊಳ್ಳಲು ಹೋದಾಗ ಅವರ ವಿರುದ್ಧವೇ ಕೇಸು ಹಾಕಿಸಿದ್ದರು. ದಲಿತರನ್ನು ಅವಮಾನಿಸುವುದು ಕಾಂಗ್ರೆಸ್ ಧೋರಣೆ ಆಗಿದೆ” ಎಂದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡ ಕಿಗಡಿ ಕೃಷ್ಣಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಿಂದ ತಾಲೂಕು ಕಚೇರಿ ತನಕ ಪ್ರತಿಭಟನಾಕಾರರು ಪಾದಯಾತ್ರೆ ನಡೆಸಿದರು.

ಇದನ್ನೂ ಓದಿ: Corruption case: ಮಧ್ಯಂತರ ಜಾಮೀನು ಸಂಬಂಧ ಬಿಜೆಪಿ ಶಾಸಕ ಮಾಡಾಳುಗೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್

Exit mobile version