Site icon Vistara News

Theerthahalli News: ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್ ಕಾಲದ ಹಗರಣ ಲೋಕಾಯುಕ್ತ ತನಿಖೆಗೆ ಒಳಪಡಲಿ: ಆರ್.ಎಂ. ಮಂಜುನಾಥ್ ಗೌಡ

R. M. Manjunath Gowda KPCC Co-operative Wing Convenor

ತೀರ್ಥಹಳ್ಳಿ: ಆರಗ ಜ್ಞಾನೇಂದ್ರ ಈಗ ಗೃಹ ಸಚಿವರಾಗಿದ್ದು, ಸಿಐಡಿ ಮತ್ತು ಸಿಒಡಿ ಅವರ ಇಲಾಖೆ ಅಡಿಯಲ್ಲಿ ಬರುತ್ತದೆ. ಹಾಗಾಗಿ ಸ್ಯಾಂಟ್ರೋ ರವಿ ಹಗರಣ, ಪಿಎಸ್‌ಐ ಹಗರಣ ಹಾಗೂ ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಮಂತ್ರಿ ಆಗಿದ್ದಾಗ ನಡೆದಿದೆ ಎನ್ನಲಾದ ಶಿಕ್ಷಕರ ಅಕ್ರಮ ನೇಮಕಾತಿ ಹಗರಣವನ್ನು ಲೋಕಾಯುಕ್ತಕ್ಕೆ ವಹಿಸಿ ಕಳಂಕದಿಂದ ಹೊರಗಡೆ ಬರಲಿ ಎಂದು ಕೆಪಿಸಿಸಿ ಸಹಕಾರ ವಿಭಾಗ ಸಂಚಾಲಕ ಆರ್.ಎಂ. ಮಂಜುನಾಥ್ ಗೌಡ ಸವಾಲು ಹಾಕಿದ್ದಾರೆ.

ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣದಲ್ಲಿ ಸಿಲುಕಿದಾಗ ಇಬ್ಬರು ಕೂಡ ನಿರಂತರ ಅಪಪ್ರಚಾರ ಮಾಡಿದ್ದರು. ಈಗ ಅವರಿಬ್ಬರೂ ನ್ಯಾಯಯುತ ತನಿಖೆ ಎದುರಿಸಿ ಸಾಚಾತನ ತೋರಲಿ. ಅದು ಬಿಟ್ಟು ಆರಗ ಜ್ಞಾನೇಂದ್ರ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಹೇಳುವುದನ್ನು ಬಿಡಲಿ. ಅವರು ಅಂತಹ ಹೇಳಿಕೆಯು ಆ ಸ್ಥಾನಕ್ಕೆ ತಕ್ಕುದಲ್ಲ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಪರೀತ ಜನ ವಿರೋಧಿಯಾಗಿ ನಡೆದುಕೊಳ್ಳುತ್ತಿವೆ. ಅವರ ಪರ ಇರುವ ದೃಶ್ಯ ಮಾಧ್ಯಮಗಳು ಭಾರತವನ್ನು ಪಾಕಿಸ್ತಾನಕ್ಕೆ ಹೋಲಿಸಿ ಜನರನ್ನು ಮರಳು ಮಾಡುತ್ತಿವೆ. ಆದರೆ, ವಾಸ್ತವದಲ್ಲಿ ಭಾರತ ಕೂಡ ದಿವಾಳಿ ಹಾದಿಯಲ್ಲಿದೆ. ಮನಮೋಹನ್ ಸಿಂಗ್ ಅಂತಹ ಆರ್ಥಿಕ ತಜ್ಞರು ಮತ್ತೆ ಬಂದರೂ ದೇಶವನ್ನು ಸುಧಾರಿಸುವುದು ಕಷ್ಟ ಎಂದು ಅವರು ಹೇಳಿದರು.

ಇದನ್ನೂ ಓದಿ | Happy marriage tips: ಇದು ಪ್ರೀತಿಯ ಭಾಷೆ: ಪ್ರೀತಿ ಸದಾ ಜಾರಿಯಲ್ಲಿರಲು 5 ಸೂತ್ರಗಳು!

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಚ್. ಪದ್ಮನಾಭ, ಕಟ್ಟೆಹಕ್ಲು ಕಿರಣ್, ಸುಶೀಲ ಶೆಟ್ಟಿ, ಟಿ.ಎಲ್. ಸುಂದರೇಶ್, ರಾಘವೇಂದ್ರ ಶೆಟ್ಟಿ, ಯಲ್ಲಪ್ಪ, ರಹಮತ್ ಉಲ್ಲಾ ಅಸಾದಿ, ಜಿನಾ ವಿಕ್ಟರ್, ಮಟ್ಟಿನಮನೆ ರಾಮಚಂದ್ರ, ನಾಗರಾಜ್ ಪೂಜಾರಿ, ರಫಿ, ಶಬನಮ್ ಹೊರಬೈಲು ರಾಮಕೃಷ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Exit mobile version