Happy marriage tips: ಇದು ಪ್ರೀತಿಯ ಭಾಷೆ: ಪ್ರೀತಿ ಸದಾ ಜಾರಿಯಲ್ಲಿರಲು 5 ಸೂತ್ರಗಳು! - Vistara News

ಲೈಫ್‌ಸ್ಟೈಲ್

Happy marriage tips: ಇದು ಪ್ರೀತಿಯ ಭಾಷೆ: ಪ್ರೀತಿ ಸದಾ ಜಾರಿಯಲ್ಲಿರಲು 5 ಸೂತ್ರಗಳು!

ಪ್ರೀತಿಯ ಭಾಷೆ ಅರ್ಥೈಸಿಕೊಂಡಷ್ಟೇ ಬಳಸಲೂ ಗೊತ್ತಿರಬೇಕು. ಪಡೆದುಕೊಂಡಷ್ಟೇ ನೀಡುವ ಬಗ್ಗೆಯೂ ಅರಿವಿರಬೇಕು. ಆಗಷ್ಟೇ ಇಬ್ಬರ ಪ್ರೀತಿಯ ಪಯಣ ಆನಂದಮಯವಾಗುವುದು. ಹಾಗೆ ಪ್ರೀತಿಸುವವರಿಗಾಗಿ ಇಲ್ಲಿದೆ ಪ್ರೀತಿಯ ಭಾಷೆಯನ್ನು ಬಳಸಿಕೊಳ್ಳಬಹುದಾದ ಐದು ವಿಧಾನಗಳು!

VISTARANEWS.COM


on

couple tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರೀತಿಗೊಂದು ಅದರದ್ದೇ ಆದ ಭಾಷೆಯಿದೆ. ಪ್ರೀತಿಯಲ್ಲಿ ಬಿದ್ದವರಿಗೆ ಮಾತ್ರ ಆ ಭಾಷೆ ಯಾರೂ ಹೇಳಿಕೊಡದೆ ಸುಲಭವಾಗಿ ಬಂದುಬಿಡುತ್ತದೆ. ಮೀನಿಗೆ ಈಜು ಬಂದ ಹಾಗೆ, ಹಕ್ಕಿ ಆಗಸದಲ್ಲಿ ರೆಕ್ಕೆ ಬಡಿದು ಬಡಿದು ಹಾರಿದ ಹಾಗೆ. ಅಲ್ಲಿ ಆಗಸದಲ್ಲಿ ಹಾರುವಾತನ ಸುಖವನ್ನು ಕೆಳಗೆ ನಿಂತು ನೋಡುವವನಿಗೆ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ. ಮೀನಿನ ಈಜಿನ ಸುಖ ತನಗೆ ಗೊತ್ತು ಎಂದು ದಡದಲ್ಲಿದ್ದವನು ಹೇಳಿದರೂ ಅದು ಖಂಡಿತಾ ನೀರಿಗೆ ಬೀಳದ ಹೊರತು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ.  ಪ್ರೀತಿಯೂ ಹಾಗೆಯೇ. ಪ್ರೀತಿಯಲ್ಲಿ ಬೀಳದ ಹೊರತು ಅದರ ಸುಖವನ್ನು ಅರಿತವರಿಲ್ಲ. ಹಾಗಾದರೆ, ಈ ಪ್ರೀತಿಯಲ್ಲಿರುವ ಸುಖ ಒಬ್ಬರೇ ಅನುಭವಿಸುವುದಕ್ಕೋ? ಖಂಡಿತಾ ಅಲ್ಲ. ಪ್ರೀತಿಯ ಭಾಷೆ ಅರ್ಥೈಸಿಕೊಂಡಷ್ಟೇ ಬಳಸಲೂ ಗೊತ್ತಿರಬೇಕು. ಪಡೆದುಕೊಂಡಷ್ಟೇ ನೀಡುವ ಬಗ್ಗೆಯೂ ಅರಿವಿರಬೇಕು. ಆಗಷ್ಟೇ ಇಬ್ಬರ ಪ್ರೀತಿಯ ಪಯಣ ಆನಂದಮಯವಾಗುವುದು. ಹಾಗೆ ಪ್ರೀತಿಸುವವರಿಗಾಗಿ ಇಲ್ಲಿದೆ ಪ್ರೀತಿಯ ಭಾಷೆಯನ್ನು ಬಳಸಿಕೊಳ್ಳಬಹುದಾದ ಐದು ವಿಧಾನಗಳು!

೧. ಸಮಯ ಕೊಡಿ: ಎಷ್ಟೇ ಬ್ಯುಸಿಯಾಗಿದ್ದರೂ ಆಗಾಗ ಸಂಗಾತಿಗೆ, ಪ್ರೀತಿಸುವವರಿಗೆ ಸಮಯ ಕೊಡುವುದು ಬಹಳ ಮುಖ್ಯ. ಪ್ರೀತಿಸುವವರು ಪರಸ್ಪರ ಎಷ್ಟೇ ಅರ್ಥ ಮಾಡಿಕೊಂಡಿರಲಿ, ಪರಸ್ಪರ ಸಮಯ ಕೊಡುಕೊಳ್ಳುವಿಕೆಯಿಂದಲೇ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಪ್ರೀತಿ ಬೆಳೆಯುವುದು. ಆ ಪ್ರೀತಿ ಸದಾ ಜಾರಿಯಲ್ಲಿರಬೇಕೆಂದರೆ, ಅದು ಹಳತಾಗದಂತೆ ಕಾಪಾಡುವುದೂ ಇಬ್ಬರ ಜವಾಬ್ದಾರಿ. ಹಾಗಾಗಿ ಆಗಾಗ ಇಬ್ಬರಲ್ಲೊಂದು ನವಿರು ಭಾವನೆ ಮೂಡಲು, ರಾತ್ರಿಯ ಡಿನ್ನರ್‌ಗೆ ಜೊತೆಗೇ ಹೋಗುವುದು, ಸಣ್ಣದೊಂದು ಸಂಜೆಯ ವಾಕ್‌ ಮಾಡಿ ಚಾಟ್‌ ತಿಂದು ಬರುವುದು, ಸಿನೆಮಾ ಜೊತೆಯಾಗಿ ನೋಡುವುದು, ಆಗಾಗ ಸಣ್ಣಪುಟ್ಟ ಸರ್‌ಪ್ರೈಸ್‌ ನೀಡುವುದು ಇತ್ಯಾದಿ ಭಾವುಕ ಗಳಿಗೆಗಳು ಬೇಕಾಗುತ್ತವೆ. ನಮ್ಮ ಸಂಬಂಧ ಗಟ್ಟಿಯಿದೆ ಎಂದು ಹೇಳುತ್ತಾ ಇದಾವುದರ ಅಗತ್ಯ ಇಲ್ಲ ಎಂದುಕೊಳ್ಳುವುದು ಮೂರ್ಖತನ. ಪ್ರೀತಿಯ ದೀಪ ಹಚ್ಚಲು ಸದಾ ಎಣ್ಣೆ ಹಾಕುತ್ತಲೇ ಇರಬೇಕು.

೨. ದೈಹಿಕ ಸಾಂಗತ್ಯವಿರಲಿ: ಪ್ರೀತಿಯಲ್ಲಿ ದೈಹಿಕ ಸಾಂಗತ್ಯವೂ ಅತ್ಯಂತ ಅಗತ್ಯ. ಎಷ್ಟೇ ದೈಹಿಕವಾಗಿ ಹತ್ತಿರವಾಗಿದ್ದರೂ ಎದ್ದ ಕೂಡಲೇ ಕೊಡುವ ಹಗ್‌, ಕೆನ್ನೆಯ ಮೇಲೊಂದು ಸಣ್ಣ ಮುತ್ತು ಕೊಡುವ ಸ್ಪರ್ಶಸುಖವೂ ಪ್ರೀತಿಯ ಭಾಷೆಗಳಲ್ಲಿ ಒಂದು. ಮಾತಿನ ನಡುವೆ ಸಂಗಾತಿಯ ಕೈ ಹಿಡಿಯುವುದು, ಬಾಯ್‌ ಹೇಳುವಾಗ ಒಂದು ಹಗ್‌, ತುಂಟತನದಿಂದ ಕೆನ್ನೆ ಚಿವುಟುವುದು, ತಲೆಯ ಮೇಲೆ ಮೊಟಕುವುದು, ಕಿವಿ ಹಿಂಡುವುದು ಎಲ್ಲವೂ ಪ್ರೀತಿಯ ಭಾಷೆಯೇ. ಎಲ್ಲವೂ ಒಂದು ಚೌಕಟ್ಟಿನಲ್ಲಿ ನಡೆಯುತ್ತಾ ನಿಧಾನವಾಗಿ ಪ್ರೀತಿಯ ಒಂದೊಂದೇ ಮೆಟ್ಟಿಲು ಹತ್ತುವುದರಲ್ಲೇ ಸುಖವಿರುವುದು.

೩. ಲವ್ಯೂ ಹೇಳಿ: ನಾನು ನಿನ್ನನ್ನು ಪ್ರೀತಿಸುವೆ ಎಂದು ಹೇಳುವುದು ಕಷ್ಟ ಅಂತನಿಸಬಹುದು. ಎಲ್ಲವೂ ಗೊತ್ತಿದ್ದ ಮೇಲೆ ಹೇಳುವ ಅಗತ್ಯವೇನಿದೆ ಅನಿಸಬಹುದು. ಆದರೆ, ಕೆಲವೊಮ್ಮೆ ಈ ವಾಕ್ಯಕ್ಕೆ ಇರುವ ಶಕ್ತಿ ಬೇರೆಯೇ! ಪ್ರೀತಿಯನ್ನು ವಾಕ್ಯದಲ್ಲಿ ಹಿಡಿದು ಅದನ್ನು ಕೃತಕವಾಗಿ ಹೇಳುವುದು ಕಷ್ಟ ಅಂತ ಅನಿಸಿದರೂ, ಶಬ್ದಗಳಲ್ಲಿ ಪ್ರೀತಿಯ ಭಾವ ಹೇಗೆ ಬಿಚ್ಚಿಡುವುದು ಅಂತ ಅನಿಸಿದರೂ ಆಗಾಗ ಲವ್ಯೂ ಅಂತ ಹೇಳುತ್ತಿರುವುದೂ ಕೂಡ ಪ್ರೀತಿಸುವವರ ಹೃದಯ ತುಂಬಿ ಬರಲು ಸಾಕಾಗುತ್ತದೆ. ಮನೆ ಲಾಕ್‌ ಮಾಡುವ ಮೊದಲು ಫ್ರಿಡ್ಜ್‌ ಮೇಲೆ ಅಂಟಿಸಿಟ್ಟ ಪುಟ್ಟದೊಂದು ಚೀಟಿ ಕೂಡಾ ಮನೆಗೆ ಬಂದು ಬಾಗಿಲು ತೆಗೆದ ಸಂಗಾತಿಯ ಮುಖದಲ್ಲಿ ನಗು ಜಿನುಗಿಸಬಹುದು. ಇಂಥ ನವಿರು ಪ್ರೀತಿಗಳು ಸಂಬಂಧವನ್ನು ಸದಾ ಹಸಿಯಾಗಿಟ್ಟಿರುತ್ತದೆ. ಇವೆಲ್ಲವೂ ಪ್ರೀತಿ ಭಾಷೆಗಳೇ.‌

ಇದನ್ನೂ ಓದಿ | ಸುಖಿ ದಾಂಪತ್ಯ | ಪ್ರೀತಿಯೇ ಉಸಿರಾಗಿರುವ ಪರ್ಫೆಕ್ಟ್‌ ಫ್ಯಾಮಿಲಿಗೆ 10 ಗುಟ್ಟುಗಳು!

೪. ಸಣ್ಣಪುಟ್ಟ ಸಹಾಯ ಮಾಡಿ: ಪ್ರೀತಿ ಹೆಚ್ಚಾಗುವುದು ಪುಟ್ಟ ಪುಟ್ಟ ವಿಷಯಗಳಲ್ಲೇ. ಬದುಕಿನಲ್ಲಿ ನಿತ್ಯ ಜೀವನದಲ್ಲಿ ಬಂದು ಹೋಗುವ ಸಣ್ಣಪುಟ್ಟ ಸಂಗತಿಗಳಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವುದೇ ನಿಮ್ಮ ಪ್ರೀತಿಯನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಬಲ್ಲದು. ಸಂಗಾತಿಗೆ ಇಷ್ಟದ ತಿನಿಸನ್ನು ಮಾಡುವುದು, ತಲೆನೋವಿನ ಸಂದರ್ಭ ತಲೆಒತ್ತುವುದು, ಬ್ಯುಸಿಯಾಗಿ ಕೆಲಸ ಮಾಡುತ್ತಿರುವಾಗ ಕಾಫಿ ಮಾಡಿ ಕೈಗಿಡುವುದು, ಸಂಗಾತಿ ಗಡಿಬಿಡಿಯಲ್ಲಿ ವಾರ್ಡ್‌ರೋಬಿನಲ್ಲಿ ಚಲ್ಲಾಪಿಲ್ಲಿ ಮಾಡಿಟ್ಟುಹೋದ ಬಟ್ಟೆಗಳನ್ನು ಮಡಚಿಟ್ಟು ಒಪ್ಪ ಮಾಡುವುದು ಹೀಗೆ ಸಣ್ಣ ಪುಟ್ಟ ಸಹಾಯಗಳು ಪ್ರೀತಿಯನ್ನು ಇನ್ನಷ್ಟು ಚಂದ ಮಾಡುತ್ತವೆ. ಇದು ಒಬ್ಬರೇ ಇನ್ನೊಬ್ಬರಿಗೆ ಮಾಡುತ್ತಾ ಬಂದಲ್ಲಿ ಅಲ್ಲೊಂದು ಏಕತಾನತೆ ಸೃಷ್ಠಿಯಾಗುತ್ತದೆ. ಎಂತಹ ಪ್ರೀತಿಯಲ್ಲೂ ಸಣ್ಣದೊಂದು ನಿಟ್ಟುಸಿರು ಕೇಳಬಹುದು. ಪರಸ್ಪರ ಇಂತಹ ಪುಟ್ಟಪುಟ್ಟ ಸಹಾಯಗಳು, ಪ್ರೀತಿಯ ತೋರ್ಪಡಿಸುವಿಕೆಗಳು ಮುಖ್ಯ.

೫. ಗಿಫ್ಟ್‌ ಕೊಡಿ: ಉಡುಗೊರೆಗಳು ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರೀತಿಯಲ್ಲಿ ಆಗಾಗ ಉಡುಗೊರೆಗಳೂ ಮುಖ್ಯವೆನಿಸುತ್ತದೆ. ಇಬ್ಬರ ಖುಷಿಯ ಘಳಿಗೆಗಳನ್ನು ಇನ್ನಷ್ಟು ಸಂತಸಮಯವನ್ನಾಗಿಸಲು ಪ್ರೀತಿಯ ಭಾಷೆಗೆ ವಸ್ತುರೂಪದ ಕಾಣಿಕೆ ನಿಮ್ಮ ಉಡುಗೊರೆಯಾಗಬಹುದು. ಕ್ರಿಯಾಶೀಲ ಉಡುಗೊರೆಗಳು ನಿಮ್ಮ ಮಧುರ ಘಳಿಗೆಗಳನ್ನು ಇನ್ನಷ್ಟು ಮೃದುವಾಗಿಸುತ್ತವೆ.

ಇದನ್ನೂ ಓದಿ | Viral Video: ಕೇರಳದಿಂದ ಕಾಶ್ಮೀರದವರೆಗೆ; ಒಮ್ಮೆ ಕ್ವಿಕ್​ ಆಗಿ ಪ್ರವಾಸಕ್ಕೆ ಹೋಗಿಬರೋಣ ಬನ್ನಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Summer Fashion: ನೇಲ್‌ ಆರ್ಟ್‌ನಲ್ಲಿ ಟ್ರೆಂಡಿಯಾದ ಸನ್‌ ಕಲರ್‌ ಶೇಡ್ಸ್‌

ಇದೀಗ ಈ ಸೀಸನ್‌ನ ನೇಲ್‌ ಆರ್ಟ್‌ ಫ್ಯಾಷನ್‌ನಲ್ಲಿ (Summer Fashion) ಸನ್‌ ಕಲರ್ಸ್‌ ನುಸುಳಿದೆ. ಹಳದಿ ಕಲರ್‌ ಎಂದು ಹೀಗೆಳೆಯುತ್ತಿದ್ದ ಮಾನಿನಿಯರು ಕೂಡ ಈ ಶೇಡ್‌ಗಳನ್ನು ತಮ್ಮ ನೇಲ್‌ ಆರ್ಟ್ ನಲ್ಲಿ ಸೇರಿಸಿಕೊಂಡಿದ್ದಾರೆ. ಹಾಗಾದಲ್ಲಿ, ಏನಿದು ಸನ್‌ ಕಲರ್‌ ನೇಲ್‌ ಆರ್ಟ್?‌ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Summer Fashion
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸನ್‌ ಕಲರ್‌ ನೇಲ್‌ ಆರ್ಟ್‌ (Summer Fashion) ಇದೀಗ ಟ್ರೆಂಡಿಯಾಗಿದೆ. ಹೌದು. ಇದೀಗ ಈ ಸೀಸನ್‌ನಲ್ಲಿ ನೇಲ್‌ ಆರ್ಟ್‌ನಲ್ಲಿ ನಾನಾ ಶೇಡ್‌ನ ಸನ್‌ ಕಲರ್‌ಗಳು ನುಸುಳಿವೆ. ಈ ಹಿಂದೆ ಹಳದಿ ಕಲರ್‌ ಎಂದು ಹೀಗೆಳೆಯುತ್ತಿದ್ದ ಮಾನಿನಿಯರು ಕೂಡ ಈ ಶೇಡ್‌ಗಳನ್ನು ತಮ್ಮ ನೇಲ್‌ ಆರ್ಟ್‌ನಲ್ಲಿ ಬಳಸತೊಡಗಿದ್ದಾರೆ. ಇದಕ್ಕೆ ಹೊಸ ರೂಪ ನೀಡಿ ಟ್ರೆಂಡಿಯಾಗಿಸಿದ್ದಾರೆ. ಮಿಕ್ಸ್‌ ಮ್ಯಾಚ್‌ ಮಾಡಿ ಹೊಸ ನೇಲ್‌ ಆರ್ಟ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ ಎನ್ನುತ್ತಾರೆ ನೇಲ್‌ ಆರ್ಟ್‌ ಡಿಸೈನರ್ಸ್.‌

Summer Fashion

ಟ್ರೆಂಡಿಯಾಗಲು ಕಾರಣ

“ನೇಲ್‌ ಆರ್ಟ್‌ ಆಯಾ ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಅದರಲ್ಲೂ ಈ ಸಮ್ಮರ್‌ ಸೀಸನ್‌ನಲ್ಲಿ ಲೈಟ್‌ ಹಾಗೂ ಪಾಸ್ಟೆಲ್‌ ಶೇಡ್‌ಗಳು ಹೆಚ್ಚು ಟ್ರೆಂಡಿಯಾಗಿವೆ. ಇನ್ನು ನೇಲ್‌ ಆರ್ಟ್‌ನಲ್ಲೂ ಅಷ್ಟೇ! ಡಾರ್ಕ್‌ ಕಲರ್‌ಗಳಿಗಿಂತ ಲೈಟ್‌ ಕಲರ್‌ಗಳನ್ನು ಹೆಚ್ಚು ಬಳಸಲಾಗುತ್ತಿದೆ. ಅದೇ ರೀತಿ ಈ ಸೀಸನ್‌ನಲ್ಲಿ ಅತಿ ಹೆಚ್ಚು ಯೆಲ್ಲೋ ಶೇಡ್‌ಗಳು, ಅದರಲ್ಲೂ ಹೆಚ್ಚು ಎದ್ದು ಕಾಣುವಂತಹ ಸನ್‌ ಕಲರ್‌ ಶೇಡ್‌ಗಳನ್ನು ಬಳಸಲಾಗುತ್ತಿದೆ. ಈ ಕಲರ್‌ಗಳು ಯುವತಿಯರಿಗೆ ಪ್ರಿಯವಾಗತೊಡಗಿವೆ. ಹಾಗಾಗಿ ಈ ಶೇಡ್ಸ್‌ ಟ್ರೆಂಡಿಯಾಗಲು ಕಾರಣವಾಗಿದೆ” ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Summer Fashion

ಏನಿದು ಸನ್‌ ಕಲರ್‌ ನೇಲ್‌ ಶೇಡ್ಸ್‌

ಹಳದಿಯ ನಾನಾ ಶೇಡ್‌ಗಳನ್ನು ಸನ್‌ ಕಲರ್‌ಗಳೆಂದು ಪರಿಗಣಿಸಲಾಗುತ್ತದೆ. ಸೂರ್ಯನ ಪ್ರಖರ ಕಿರಣಗಳಂತೆ ಕಾಣುವ ಈ ಕಲರ್‌ಗಳನ್ನು ಸನ್‌ ಕಲರ್‌ಗಳೆಂದು ಹೇಳಲಾಗುತ್ತದೆ. ಇದು ಉಡುಪಿನ ಬಣ್ಣವಾಗಬಹುದು ಅಥವಾ ಇತರೇ ಶೇಡ್ಸ್‌ ಆಗಬಹುದು. ಇದನ್ನು ನೇಲ್‌ ಆರ್ಟ್‌ನಲ್ಲಿ ಮೊದಲೆಲ್ಲಾ ಬಳಕೆ ಮಾಡುತ್ತಿದ್ದದ್ದು ತೀರಾ ಕಡಿಮೆಯಾಗಿತ್ತು. ಇದೀಗ ಈ ಶೇಡ್‌ ಕೂಡ ನೇಲ್‌ ಆರ್ಟ್‌ನಲ್ಲಿ ಸ್ಥಾನಗಳಿಸಿ, ಪಾಪುಲರ್‌ ಆಗಿದೆ.

Summer Fashion

ಟ್ರೆಂಡಿಯಾಗಿರುವ ಸನ್‌ ನೇಲ್‌ ಆರ್ಟ್‌

ಸನ್‌ ಶೇಡ್ಸ್‌ ಅಂದರೇ, ಹಳದಿ ಬಣ್ಣವನ್ನು ಬ್ಯಾಕ್‌ಗ್ರೌಂಡ್‌ ವರ್ಣವಾಗಿಸಿ ಪೊಲ್ಕಾ ಡಾಟ್ಸ್‌ ರಚಿಸುವುದು, ಸೂರ್ಯನ ಕಿರಣಗಳನ್ನು ಸೃಷ್ಟಿಸುವುದು, ಸನ್‌ ಫ್ಲವರ್‌ ಹೂಗಳ ಚಿತ್ತಾರ, ಸೇವಂತಿ, ಬಿಸಿಲಿನ ಪ್ರಖರ ಕಿರಣಗಳು, ಹಳದಿಯ ನಾನಾ ಕಿರಣಗಳಂತೆ ಬಿಂಬಿಸುವುದು. ಕಾಮನಬಿಲ್ಲು, ಜೇಡರ ಬಲೆ ಹೀಗೆ ನಾನಾ ಬಗೆಯ ಚಿತ್ರಗಳನ್ನು ರಚಿಸುವುದು ಈ ನೇಲ್‌ ಆರ್ಟ್‌ನಲ್ಲಿ ಸೇರಿದೆ. ಹಳದಿ ಬಣ್ಣ ಎದ್ದು ಕಾಣಿಸುವುದರಿಂದ ಈ ಚಿತ್ತಾರಗಳನ್ನು ಮೂಡಿಸುವುದು ಸುಲಭ ಎನ್ನುತ್ತಾರೆ ನೇಲ್‌ ಡಿಸೈನರ್‌ ರಕ್ಷಿತಾ. ಅವರ ಪ್ರಕಾರ, ಈ ಕಲರ್‌ ಮನಸ್ಸಿನ ಉಲ್ಲಾಸವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: Sequins Partywear Fashion: ಪಾರ್ಟಿಪ್ರಿಯರಿಗೆ ಬಂತು ಮಿರಮಿರ ಮಿನುಗುವ ಸಿಕ್ವೀನ್ಸ್‌ ಔಟ್‌ಫಿಟ್ಸ್‌

ನೀವೂ ನೇಲ್‌ ಆರ್ಟ್‌ ಮಾಡಿ ನೋಡಿ

ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ! ನೇಲ್‌ ಕಿಟ್‌ ನಿಮ್ಮ ಬಳಿ ಇರಲಿ. ಜೊತೆಗೆ ಟ್ರೆಂಡಿಯಾಗಿರುವ ಎಲ್ಲಾ ಶೇಡ್‌ಗಳ ಕಲೆಕ್ಷನ್ಸ್‌ ನಿಮ್ಮ ಬಳಿಯಿರಲಿ. ಡಿಸೈನ್ಸ್‌ಗಾಗಿ ನೀವೂ ಅಂತರ್ಜಾಲ ಜಾಲಾಡಬಹುದು. ನೀವೂ ಕೂಡ ನಿಮ್ಮ ಕೈ ಬೆರಳುಗಳ ಉಗುರುಗಳಿಗೆ ಅಥವಾ ನಿಮ್ಮ ಆಪ್ತರ ಕೈಗಳಿಗೆ ಸಿಂಗಾರ ಮಾಡಬಹುದು. ಉಗುರಿಗೆ ಕೋಟ್‌ ನೇಲ್‌ಪಾಲಿಶ್‌ ಹಾಕಿದ ನಂತರ ಸನ್‌ ಕಲರ್‌ ಹಚ್ಚಿ. ಪೊಲ್ಕಾ ಡಾಟ್ಸ್‌ ಅಥವಾ ನೆಟ್‌, ಸ್ಪೈಡರ್‌ನಂತಹ ಡಿಸೈನನ್ನು ನೀವೇ ಖುದ್ದು ಡಿಸೈನ್‌ ಮಾಡಿ. ಆನ್‌ಲೈನ್‌ ಟ್ಯೂಷನ್‌ನಲ್ಲೂ ಈ ಕುರಿತ ವಿಡಿಯೋಗಳು ಲಭ್ಯ ಎಂದು ಟಿಪ್ಸ್‌ ನೀಡುತ್ತಾರೆ ನೇಲ್‌ ಡಿಸೈನರ್ಸ್.‌

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಆರೋಗ್ಯ

Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

ನುಗ್ಗೆ ಸೊಪ್ಪನ್ನು (Moringa Leaves Health Benefits) ಬೇಸಿಗೆಯಲ್ಲೂ ತಿನ್ನುವುದಕ್ಕೆ ಯೋಗ್ಯ. ಆದರೆ ಎಷ್ಟು ತಿನ್ನಬಹುದು? ಇದರಲ್ಲಿ ಏನಿವೆ ಅಂಥ ತಿನ್ನಲೇಬೇಕಾದ ಸತ್ವಗಳು? ಉಳಿದೆಲ್ಲ ಸೊಪ್ಪುಗಳಂತೆ ಅಲ್ಲವೇ ಇದು ಸಹ? ಅಂಥ ಗುಣಗಳು ಏನಿವೆ ಇದರಲ್ಲಿ? ಇದನ್ನೇಕೆ ಸೂಪರ್‌ಫುಡ್‌ ಎಂದು ಕರೆಯಬೇಕು? ಇದನ್ನು ಎಷ್ಟು ತಿಂದರೆ ಒಳ್ಳೆಯದು? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Moringa Leaves Health Benefits
Koo

ನುಗ್ಗೆ ಸೊಪ್ಪು (Moringa Leaves Health Benefits) ಎನ್ನುತ್ತಿದ್ದಂತೆ ಅದರ ಪಾಕದ ಘಮಕ್ಕೆ ಮೂಗರಳಿಸುವವರು ಹಲವರಿದ್ದಾರು. ಭಾರತದ ಉದ್ದಗಲಕ್ಕೆ ನುಗ್ಗೆ ಜನಪ್ರಿಯ. ಆದರೆ ಬೇಸಿಗೆಯಲ್ಲಿ ಇದು ದೇಹದ ಉಷ್ಣತೆ ಹೆಚ್ಚಿಸುತ್ತದೆ ಎಂದು ಇದನ್ನು ದೂರ ಮಾಡಿ, ಮಳೆಗಾಲ-ಚಳಿಗಾಲದಲ್ಲಿ ಮಾತ್ರವೇ ಬಳಸುವ ಕ್ರಮ ಹಲವೆಡೆಗಳಲ್ಲಿದೆ. ಆದರೆ ಈ ಎಲೆಗಳಲ್ಲಿ ಸಾಕಷ್ಟು ನೀರಿನಂಶವೂ ಇರುವುದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವಂಥ ಸೂಪರ್‌ ಫುಡ್‌ ಇದು ಎಂಬುದು ಗೊತ್ತೇ? ಉಳಿದೆಲ್ಲ ಸೊಪ್ಪುಗಳಂತೆ ಅಲ್ಲವೇ ಇದು ಸಹ? ಅಂಥ ಗುಣಗಳು ಏನಿವೆ ಇದರಲ್ಲಿ? ಇದನ್ನೇಕೆ ಸೂಪರ್‌ಫುಡ್‌ ಎಂದು ಕರೆಯಬೇಕು? ಇದನ್ನು ಎಷ್ಟು ತಿಂದರೆ ಒಳ್ಳೆಯದು?

Moringa Leaves Medicinal Leaves

ಸತ್ವಗಳೇನಿವೆ?

ಇದರಲ್ಲಿ ಉಳಿದೆಲ್ಲ ಸೊಪ್ಪುಗಳಿಗಿಂತ ಪ್ರೊಟೀನ್‌ ಸಾಂದ್ರವಾಗಿದೆ. 18 ಬಗೆಯ ಅಮೈನೊ ಆಮ್ಲಗಳು ಇದರಲ್ಲಿವೆ. ಇದರಲ್ಲದೆ, ವಿಟಮಿನ್‌ ಎ, ವಿಟಮಿನ್‌ ಸಿ, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಕಬ್ಬಿಣದ ಅಂಶಗಳು ಇದರಲ್ಲಿ ಹೇರಳವಾಗಿದೆ. ಇವೆಲ್ಲವುಗಳಿಂದ ಸ್ನಾಯುಗಳು ದೃಢಗೊಂಡು, ದೃಷ್ಟಿ ಕ್ಷೇಮವಾಗಿದ್ದು, ಪ್ರತಿರೋಧಕ ಶಕ್ತಿ ಸುಧಾರಿಸಿ, ಮೂಳೆಗಳು ಬಲಗೊಂಡು, ರಕ್ತದಲ್ಲಿನ ಆಮ್ಲಜನಕದ ಮಟ್ಟವೂ ಸುಧಾರಿಸುತ್ತದೆ.

ಉತ್ಕರ್ಷಣ ನಿರೋಧಕಗಳು

ಇದರಲ್ಲಿ ಕ್ವೆರ್ಸೆಟಿನ್‌, ಕ್ಲೊರೊಜೆನಿಕ್‌ ಆಮ್ಲ ಮತ್ತು ಬೀಟಾ ಕ್ಯಾರೊಟಿನ್‌ಗಳು ವಿಫುಲವಾಗಿವೆ. ಈ ಅಂಶಗಳು ದೇಹದಲ್ಲಿ ಅಂಡಲೆಯುವ ಮುಕ್ತಕಣಗಳನ್ನು ಪ್ರತಿಬಂಧಿಸುತ್ತವೆ. ಇದರಿಂದ ಮಾರಕ ರೋಗಗಳು ಬಾರದಂತೆ ತಡೆಯಬಹುದು. ಜೊತೆಗೆ ದೇಹದೆಲ್ಲೆಡೆ ಹೆಚ್ಚುವ ಉರಿಯೂತದ ಕಾಟದಿಂದ ಮುಕ್ತರಾದರೆ ಆರ್ಥರೈಟಿಸ್‌ನಿಂದ ಹಿಡಿದು ಹೃದಯ ರೋಗಗಳವರೆಗೆ ಬಹಳಷ್ಟು ತೊಂದರೆಗಳನ್ನು ದೂರ ಇರಿಸಲು ಸಾಧ್ಯವಿದೆ.

Antioxidants in it keep immunity strong Benefits Of Mandakki

ರೋಗನಿರೋಧಕ ಶಕ್ತಿ ಹೆಚ್ಚಳ

ಇದರಲ್ಲಿ ವಿಟಮಿನ್‌ ಸಿ ಪ್ರಮಾಣ ಹೆಚ್ಚಿದೆ. ಅಂದಾಜಿಗೆ ಹೇಳುವುದಾದರೆ, ಕಿತ್ತಳೆ ಹಣ್ಣುಗಳಲ್ಲಿ ಇರುವ ಪ್ರಮಾಣಕ್ಕಿಂತಲೂ ನುಗ್ಗೆ ಸೊಪ್ಪಿನಲ್ಲಿ ಹೆಚ್ಚು ಸಿ ಜೀವಸತ್ವವಿದೆ. ಹಾಗಾಗಿ ಸೋಂಕುಗಳನ್ನು ದೂರ ಮಾಡಲು, ಒಂದೊಮ್ಮೆ ಋತುಮಾನದ ವೈರಸ್‌ಗಳು ಕಾಡಿದರೂ ಬೇಗ ಚೇತರಿಸಿಕೊಳ್ಳಲು ಇದರ ನಿಯಮಿತ ಸೇವನೆಯಿಂದ ಸಾಧ್ಯವಾಗುತ್ತದೆ.

Weight Loss tension

ತೂಕ ಇಳಿಸಲು ನೆರವು

ಕಡಿಮೆ ಕ್ಯಾಲರಿಯಲ್ಲಿ ಹೆಚ್ಚಿನ ಪೋಷಕಾಂಶಗಳನ್ನು ನೀಡುವಂಥ ಆಹಾರಗಳು ತೂಕ ಇಳಿಸಿಕೊಳ್ಳಲು ಸೂಕ್ತವಾದಂಥವು. ಜೊತೆಗೆ ಹೇರಳವಾದಂಥ ನಾರು ಮತ್ತು ಪ್ರೊಟೀನ್‌ ಅಂಶಗಳಿದ್ದ ಆಹಾರದಿಂದ ಹೊಟ್ಟೆ ತುಂಬುವುದು ಬೇಗ, ಕಳ್ಳ ಹಸಿವಿನ ಕಾಟವೂ ಇಲ್ಲ. ಈ ಎಲ್ಲ ಗುಣಗಳನ್ನು ಹೊಂದಿರುವ ನುಗ್ಗೆ ಸೊಪ್ಪು ತೂಕ ಇಳಿಸಿಕೊಳ್ಳುವವರಿಗೆ ಪ್ರಯೋಜನಕಾರಿ.

Diabetes Diabetes concept Tired of diabetes high sugar disea Spinach Benefits

ಮಧುಮೇಹಿಗಳಿಗೆ ಒಳ್ಳೆಯದು

ನಾರು ಮತ್ತು ಪ್ರೊಟೀನ್‌ ಹೆಚ್ಚಿರುವ ಆಹಾರಗಳು ಮಧುಮೇಹಿಗಳಿಗೆ ಪೂರಕ, ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿರುತ್ತದೆ ಎನ್ನುವುದನ್ನು ಅಧ‍್ಯಯನಗಳು ತಿಳಿಸುತ್ತವೆ. ಇದರ ಜೊತೆಗೆ, ನುಗ್ಗೆಯಲ್ಲಿರುವ ಐಸೊಥಿಯೊಸಯನೇಟ್‌ ಎಂಬ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿ ಸಕ್ಕರೆಯಂಶ ಏರಿಳಿತ ಆಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಾಲಿಫೆನಾಲ್‌ ಅಂಶಗಳೂ ಇದರಲ್ಲಿ ಇರುವುದರಿಂದ ಯಕೃತ್ತಿನ ಆರೋಗ್ಯ ರಕ್ಷಣೆ ಮಾಡುವುದು ಕಷ್ಟವಲ್ಲ.

ಎಷ್ಟು ಸೇವಿಸಬೇಕು?

ಶರೀರಕ್ಕೆ ಯಾವುದಾದರೂ ಸತ್ವ ಅತಿಯಾದರೂ ಜೀರ್ಣಿಸಿಕೊಳ್ಳುವುದು ಕೆಲವೊಮ್ಮೆ ಕಷ್ಟವಾಗಬಹುದು. ಹಾಗಾಗಿ ನುಗ್ಗೆ ಸೊಪ್ಪು ಒಳ್ಳೆಯದು ಎನ್ನುವುದು ನಿಜ. ಆದರೆ ಅದನ್ನು ಎಷ್ಟು ಸೇವಿಸಬೇಕು? ಎಷ್ಟು ತಿಂದರೆ ದೇಹ ತೆಗೆದುಕೊಳ್ಳಬಲ್ಲದು? ನುಗ್ಗೆ ಸೊಪ್ಪಿನ ಪುಡಿಯನ್ನು (ಮೊರಿಂಗ ಪೌಡರ್‌) ಸೇವಿಸುವ ಅ‍ಭ್ಯಾಸವಿದ್ದರೆ ದಿನಕ್ಕೆ ಒಂದು ದೊಡ್ಡ ಚಮಚ ಸಾಕಾಗುತ್ತದೆ. ಇದರಿಂದ, ಅಂದಾಜಿಗೆ ಹೇಳುವುದಾದರೆ, 35 ಕ್ಯಾಲರಿ ಶಕ್ತಿ ದೊರೆಯುತ್ತದೆ. ಅದಿಲ್ಲದಿದ್ದರೆ, ಒಂದು ದೊಡ್ಡ ಮುಷ್ಟಿಯಷ್ಟು ಹಸಿ ಸೊಪ್ಪು ಸೇವನೆಯಿಂದ ಈ ಅಭ್ಯಾಸವನ್ನು ಪ್ರಾರಂಭಿಸಬಹುದು. ಗರ್ಭಿಣಿಯರು ಸ್ವಲ್ಪ ತಿಂದರೆ ತೊಂದರೆಯಿಲ್ಲ, ಆದರೆ ಅತಿಯಾಗಿ ತಿನ್ನುವುದು ಸಮಸ್ಯೆಗಳನ್ನು ತರಬಹುದು.

ಇದನ್ನೂ ಓದಿ: Dates Benefits: ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ದಿನಕ್ಕೊಂದು ಖರ್ಜೂರ ತಿಂದರೆ ಸಾಕು!

ಹೇಗೆಲ್ಲ ತಿನ್ನಬಹುದು?

ಬೆಳಗ್ಗೆ ನುಗ್ಗೆ ಸೊಪ್ಪಿನ ಪುಡಿಯ ಕಷಾಯ ಅಥವಾ ಚಹಾ ಮಾಡಿ ಸೇವಿಸುವವರಿದ್ದಾರೆ. ಈ ಪುಡಿಯನ್ನು ಸ್ಮೂದಿಗಳಿಗೆ ಬಳಸಬಹುದು. ಸ್ಯಾಂಡ್‌ವಿಚ್‌ಗಳಿಗೆ ಇದರ ಪೇಸ್ಟ್‌ ಬಳಸಬಹುದು; ಡಿಪ್‌ ಆಗಿಯೂ ರುಚಿ ಹೆಚ್ಚಿಸುತ್ತದೆ. ಸೂಪ್‌ಗಳಿಗೆ ಬಲು ರುಚಿ. ಪೆಸ್ಟೊ ಪಾಸ್ತ ಮಾಡುವಾಗ ಬೆಸಿಲ್‌ ಬದಲಿಗೆ ನುಗ್ಗೆ ಎಲೆಗಳನ್ನು ಬಳಸಿಕೊಳ್ಳಬಹುದು. ಉಳಿದಂತೆ ಅಪ್ಪಟ ದಕ್ಷಿಣ ಭಾರತೀಯ ಶೈಲಿಯ ಸಾಂಬಾರ್‌, ಪಲ್ಯ, ರೊಟ್ಟಿ, ಗೊಜ್ಜುಗಳಿಗೆ ಇದನ್ನು ಖಂಡಿತವಾಗಿ ಬಳಸಬಹುದು.

Continue Reading

ಆರೋಗ್ಯ

Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್‌ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ

ಆಹಾರದ ಬದಲಾವಣೆಗಳಿಂದ ಕೊಲೆಸ್ಟ್ರಾಲ್‌ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದು. ನಾರು ಹೆಚ್ಚಿರುವ ಆಹಾರಗಳು, ನೈಸರ್ಗಿಕವಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣವುಳ್ಳವು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುವ ಆಹಾರಗಳಿಂದ ಈ ದೋಷವನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಸ್ವಾಸ್ಥ್ಯ ಪರಿಣಿತರು. ಎಂಥಾ ಆಹಾರಗಳವು? ಈ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

Overweight man suffering from chest pain, high blood pressure, cholesterol level
Koo
Obese male suffering from chest pain high blood pressure cholesterol level Sesame Benefits
ಕೊಲೆಸ್ಟ್ರಾಲ್‌ ಅಪಾಯಕಾರಿ
ಆಹಾರ ಕ್ರಮದಲ್ಲಿನ ದೋಷ ಮತ್ತು ವ್ಯಾಯಾಮ ಇಲ್ಲದಿರುವಂಥ ಕಾರಣದಿಂದ ದೇಹದಲ್ಲಿ ಜಮೆಯಾಗುವ ಕೊಬ್ಬು ಹೆಚ್ಚುತ್ತಿದೆ. ಅತಿಯಾದ ಕೊಬ್ಬಿನ ಆಹಾರ ಸೇವನೆ, ಸಂಸ್ಕರಿತ ಸಕ್ಕರೆ ಸೇವನೆಯಿಂದಾಗಿ ಶರೀರದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಹೃದಯದ ತೊಂದರೆ ಮತ್ತು ಪಾರ್ಶ್ವವಾಯುವಿನಂಥ ಮಾರಣಾಂತಿಕ ಸಮಸ್ಯೆಗಳು ಎದುರಾಗುತ್ತವೆ.
Skin Care Foods
ಆಹಾರದ ಪಾತ್ರ ಮುಖ್ಯ
ಕೆಲವು ಆಹಾರದ ಬದಲಾವಣೆಗಳಿಂದ ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದು. ನಾರು ಹೆಚ್ಚಿರುವ ಆಹಾರಗಳು, ನೈಸರ್ಗಿಕವಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣವುಳ್ಳವು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುವ ಆಹಾರಗಳಿಂದ ಈ ದೋಷವನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಾವು ದೇಹಕ್ಕೆ ನೀಡುವಂಥ ಆಹಾರಗಳು ಹಲವು ರೀತಿಯಲ್ಲಿ ಮಹತ್ವವನ್ನು ಪಡೆದಿವೆ.
reen Tea Benefits Of Drinking Green Tea
ಗ್ರೀನ್‌ ಟೀ
ಹಲವು ರೀತಿಯ ಉತ್ತಮ ಪಾಲಿಫೆನಾಲ್‌ಗಳನ್ನು ಹೊಂದಿರುವ ಗ್ರೀನ್‌ ಟೀ, ಉತ್ಕರ್ಷಣ ನಿರೋಧಕಗಳ ಖಜಾನೆಯಂತಿದೆ. ಅದರಲ್ಲೂ ಗ್ರೀನ್‌ ಟೀದಲ್ಲಿರುವ ಕೆಟಿಚಿನ್‌ ಅಂಶಗಳು ಕೊಲೆಸ್ಟ್ರಾಲ್‌ಗಳ ಜೊತೆ ಕೆಲಸ ಮಾಡುತ್ತವೆ. ಇದರಿಂದ ಆಹಾರದಲ್ಲಿನ ಕೊಲೆಸ್ಟ್ರಾಲ್‌ ಅಂಶವನ್ನು ದೇಹ ಹೀರಿಕೊಳ್ಳುವುದನ್ನು ಕಡಿಮೆ ಮಾಡಲು ಸಾಧ್ಯವಿದೆ. ಹಾಗಾಗಿ ನಿಯಮಿತವಾಗಿ ಗ್ರೀನ್‌ ಟೀ ಕುಡಿಯುವುದರಿಂದ ದೇಹದಲ್ಲಿ ಎಲ್‌ಡಿಎಲ್‌ ಮತ್ತು ಒಟ್ಟಾರೆ ಕೊಲೆಸ್ಟ್ರಾಲ್‌ಗಳನ್ನು ಕಡಿಮೆ ಮಾಡಲು ಸಾಧ್ಯವಿದೆ.
Chia seeds and soy milk
ಚಿಯಾ ಬೀಜ ಮತ್ತು ಸೋಯ್‌ ಹಾಲು
ಈ ಮಿಶ್ರಣ ಕೊಲೆಸ್ಟ್ರಾಲ್‌ ನಿರ್ವಹಣೆಯಲ್ಲಿ ದಕ್ಷತೆಯನ್ನು ಪ್ರದರ್ಶಿಸಿದೆ. ನಾರು, ಪ್ರೊಟೀನ್‌ ಮತ್ತು ಒಮೇಗಾ ೩ ಕೊಬ್ಬಿನಾಮ್ಲಗಳ ಜೊತೆಗೆ ಹಲವು ಸೂಕ್ಷ್ಮ ಸತ್ವಗಳು ಇದರಿಂದ ದೇಹ ಸೇರುತ್ತವೆ. ದೇಹದಲ್ಲಿ ಎಚ್‌ಡಿಎಲ್‌ ಅಥವಾ ಉತ್ತಮ ಕೊಬ್ಬನ್ನು ಹೆಚ್ಚಿಸುವ ಸಾಧ್ಯತೆ ಚಿಯಾ ಬೀಜಗಳಿಗಿದೆ. ಎಲ್‌ಡಿಎಲ್‌ ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವ ಕ್ಷಮತೆ ಸೋಯಾ ಹಾಲಿಗಿದೆ. ಹಾಗಾಗಿ ಈ ಮಿಶ್ರಣವನ್ನೂ ಬೆಳಗಿನ ಪೇಯವಾಗಿ ಉಪಯೋಗಿಸಬಹುದು.
Beetroot and carrot juice
ಬೀಟ್‌ರೂಟ್‌ ಮತ್ತು ಕ್ಯಾರೆಟ್‌ ರಸ
ಹೆಚ್ಚಿನ ನೈಟ್ರೇಟ್‌ ಅಂಶವಿರುವ ಬೀಟ್‌ರೂಟ್‌ ರಸ ಕೊಲೆಸ್ಟ್ರಾಲ್‌ ತಗ್ಗಿಸುವ ಸಾಧ್ಯತೆಯನ್ನು ಹೊಂದಿದೆ. ಇನ್ನು, ಬೀಟಾ ಕ್ಯಾರೋಟಿನ್‌ನಂಥ ಕೆರೋಟಿನಾಯ್ಡ್‌ಗಳನ್ನು ಹೊಂದಿರುವ ಕ್ಯಾರೆಟ್‌ ಸಹ ಕೊಲೆಸ್ಟ್ರಾಲ್‌ ಹೀರಿಕೊಳ್ಳುವುದನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಬಗ್ಗೆ ಹಲವು ಅಧ್ಯಯನಗಳು ನಡೆಯುತ್ತಿದ್ದು, ಪೂರಕ ಪರಿಣಾಮವನ್ನು ದಾಖಲಿಸಿವೆ.
Ginger, lemon juice
ಶುಂಠಿ, ನಿಂಬೆ ರಸ
ಬೆಳಗಿನ ಹೊತ್ತು ಬೆಚ್ಚಗಿನ ನೀರಿಗೆ ಕೆಲವು ಹನಿ ನಿಂಬೆ ರಸ ಮತ್ತು ಅರ್ಧ ಚಮಚ ಶುಂಠಿ ರಸ ಸೇರಿಸಿ ಕುಡಿಯುವುದು ಸಹ ಉತ್ತಮ ಪರಿಣಾಮಗಳನ್ನ ತೋರಿಸಬಲ್ಲದು. ಉತ್ಕರ್ಷಣ ನಿರೋಧಕಗಳನ್ನು ನಿಂಬೆ ರಸ ದೇಹಕ್ಕೆ ನೀಡಿದರೆ, ಟ್ರೈಗ್ಲಸರೈಡ್‌ ಮತ್ತು ಎಲ್‌ಡಿಎಲ್‌ ತಗ್ಗಿಸುವ ಗುಣವನ್ನು ಶುಂಠಿ ಹೊಂದಿದೆ. ಜೊತೆಗೆ, ಬೆಳಗಿನ ಹೊತ್ತು ಚೈತನ್ಯವನ್ನು ನೀಡಿ, ವ್ಯಾಯಾಮ ಮಾಡುವ ಉತ್ಸಾಹವನ್ನೂ ಹೆಚ್ಚಿಸುತ್ತದೆ ಈ ಪೇಯ.
Tomato juice
ಟೊಮೇಟೊ ರಸ
ಟೊಮೆಟೊದ ಕೆಂಪು ಬಣ್ಣಕ್ಕೆ ಕಾರಣವಾಗುವುದು ಅದರಲ್ಲಿರುವ ಲೈಕೊಪೇನ್‌ ಅಂಶ. ಇದು ಎಲ್‌ಡಿಎಲ್‌ ಕಡಿಮೆ ಮಾಡುವ ಗುಣವನ್ನು ಢಾಳಾಗಿ ತೋರಿಸಿದೆ. ಅಧ್ಯಯನಗಳ ಪ್ರಕಾರ, ಅತಿ ಹೆಚ್ಚು ಪ್ರಮಾಣದ ಲೈಕೊಪೇನ್‌ ಅಂಶವು (ದಿನಕ್ಕೆ 25 ಎಂಜಿಗಿಂತ ಹೆಚ್ಚು), ಕಡಿಮೆ ತೀವ್ರತೆಯ ಸ್ಟ್ಯಾಟಿನ್‌ಗಳು (ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಔಷಧಿಗಳು) ಬೀರುವ ಪರಿಣಾಮವನ್ನೇ ತೋರುತ್ತವೆ.
Turmeric and soy milk
ಅರಿಶಿನ ಮತ್ತು ಸೋಯ್‌ ಹಾಲು
ಸೋಯ್‌ ಹಾಲಿನಲ್ಲಿ ಎಲ್‌ಡಿಎಲ್‌ ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಇನ್ನು ಅರಿಶಿನದಲ್ಲಿರುವ ಕರ್ಕುಮಿನ್‌ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಎಲ್‌ಡಿಎಲ್‌ ಮತ್ತು ಟ್ರೈಗ್ಲಿಸರೈಡ್‌ಗಳನ್ನು ತಗ್ಗಿಸುವ ಗುಣವನ್ನು ತೋರಿಸಿದೆ. ಹಾಗಾಗಿ ಪ್ರಾಣಿಜನ್ಯ ಹಾಲಿಗೆ ಅರಿಶಿನ ಸೇರಿಸುವ ಬದಲು, ಸೋಯಾ ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದು ಕೊಲೆಸ್ಟ್ರಾಲ್‌ ತಗ್ಗಿಸುವುದಕ್ಕೆ ಒಳ್ಳೆಯ ಉಪಾಯ.
Continue Reading

ಫ್ಯಾಷನ್

Sequins Partywear Fashion: ಪಾರ್ಟಿಪ್ರಿಯರಿಗೆ ಬಂತು ಮಿರಮಿರ ಮಿನುಗುವ ಸಿಕ್ವೀನ್ಸ್‌ ಔಟ್‌ಫಿಟ್ಸ್‌

ಪಾರ್ಟಿಪ್ರಿಯರಿಗೆ ಪ್ರಿಯವಾಗುವಂತಹ ಮಿರಮಿರ ಮಿನುಗುವ ಸಿಕ್ವೀನ್ಸ್‌ ಫ್ಯಾಷನ್‌ವೇರ್‌ಗಳು ಈ ಸೀಸನ್‌ಗೆ ಲಗ್ಗೆ ಇಟ್ಟಿವೆ. ಜಗಮಗಿಸುವ ಸಿಕ್ವೀನ್ಸ್‌ ಫ್ಯಾಬ್ರಿಕ್‌ ಹೊಂದಿರುವ (Sequins Partywear Fashion) ಫ್ಯಾಷನ್‌ವೇರ್‌ಗಳಿವು. ಕಿರಿದಾದ ಬಟನ್‌ ಶೈಲಿಯ ಮೆಟೀರಿಯಲ್‌ನಿಂದ ರೂಪುಗೊಳ್ಳುವ ಒಂದು ಔಟ್‌ಫಿಟ್‌ ಕನಿಷ್ಠವೆಂದರೂ ಲಕ್ಷಗಟ್ಟಲೇ ಥ್ರೆಡ್‌ನಿಂದ ಕೂರಿಸಲಾದ ಮೈಕ್ರೋ ಸಿಕ್ವೀನ್ಸ್‌ ಬಟನ್‌ ಶೈಲಿಯವನ್ನು ಹೊಂದಿರುತ್ತವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Sequins partywear fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಿಕ್ವೀನ್ಸ್‌ ಪಾರ್ಟಿವೇರ್ಸ್‌ (Sequins Partywear Fashion) ಇದೀಗ ಸಖತ್‌ ಟ್ರೆಂಡಿಯಾಗಿವೆ. ಅದರಲ್ಲೂ ಪಾರ್ಟಿ ಪ್ರಿಯರಿಗೆ ಪ್ರಿಯವಾಗುವಂತಹ ನಾನಾ ಬಗೆಯ ಮಿರಮಿರ ಮಿನುಗುವ ಸಿಕ್ವೀನ್ಸ್‌ ಫ್ಯಾಷನ್‌ವೇರ್‌ಗಳು ಈ ಸೀಸನ್‌ಗೆ ಲಗ್ಗೆ ಇಟ್ಟಿದ್ದು, ನೋಡಲು ಕಣ್ಣು ಕುಕ್ಕುವ ಶೇಡ್ಸ್‌ಗಳಲ್ಲಿ ಹಾಗೂ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಒಂದಕ್ಕಿಂತ ಒಂದು ವಿನ್ಯಾಸ ಮನಮೋಹಕವಾಗಿ ನೋಡುಗರನ್ನು ಸೆಳೆಯುತ್ತಿವೆ.

Sequins partywear fashion

ಮಿರಮಿರ ಮಿನುಗುವ ಸಿಕ್ವೀನ್ಸ್‌ ಪಾರ್ಟಿವೇರ್ಸ್‌

ಜಗಮಗಿಸುವ ಸಿಕ್ವೀನ್ಸ್‌ ಫ್ಯಾಬ್ರಿಕ್‌ ಹೊಂದಿರುವ ಫ್ಯಾಷನ್‌ವೇರ್‌ಗಳಿವು. ಚಿಕ್ಕ ಚಿಕ್ಕ ಮಿರ ಮಿರ ಎನ್ನುವ ಕಿರಿದಾದ ಬಟನ್‌ ಶೈಲಿಯ ಮೆಟೀರಿಯಲ್‌ನಿಂದ ರೂಪುಗೊಳ್ಳುವ ಒಂದು ಔಟ್‌ಫಿಟ್‌ ಕನಿಷ್ಠವೆಂದರೂ ಲಕ್ಷಗಟ್ಟಲೇ ಥ್ರೆಡ್‌ನಿಂದ ಕೂರಿಸಲಾದ ಮೈಕ್ರೋ ಸಿಕ್ವೀನ್ಸ್‌ ಬಟನ್‌ ಶೈಲಿಯವನ್ನು ಹೊಂದಿರುತ್ತವೆ. ಇವೆಲ್ಲವೂ ಒಟ್ಟಿಗೆ ಸೇರಿದಾಗ ಮಿರಮಿರ ಮಿನುಗುವ ಸಿಕ್ವೀನ್ಸ್‌ ಉಡುಪಾಗಿ ರೂಪುಗೊಳ್ಳುತ್ತವೆ. ಮೊದಲೆಲ್ಲಾ ಕೇವಲ ಸೀರೆಗಳಲ್ಲಿ ಕಾಣಿಸಿಕೊಂಡಿದ್ದ ಈ ಮೇಟಿರಿಯಲ್‌ ಇದೀಗ ವೆಸ್ಟರ್ನ್‌ವೇರ್‌ಗಳಲ್ಲಿ ಬಂದಿದ್ದು, ಪಾರ್ಟಿವೇರ್‌ಗಳಲ್ಲಿ ಸೂಪರ್‌ ಹಿಟ್‌ ಆಗಿವೆ.

Sequins partywear fashion

ಸೆಲೆಬ್ರೆಟಿಗಳ ಫೇವರೇಟ್‌ ಔಟ್‌ಫಿಟ್ಸ್‌

ಸಿಕ್ವೀನ್ಸ್‌ ಪಾರ್ಟಿವೇರ್‌ಗಳು ಸೆಲೆಬ್ರೆಟಿಗಳ ಫೇವರೇಟ್‌ ಪಾರ್ಟಿವೇರ್ಸ್‌ ಎಂದರೂ ಅತಿಶಯೋಕ್ತಿಯಾಗದು. ಯಾಕೆಂದರೇ, ಆ ಮಟ್ಟಿಗೆ ಬಾಲಿವುಡ್‌ ಸೆಲೆಬ್ರೆಟಿಗಳು ನಾನಾ ಶೈಲಿಯಲ್ಲಿ ನಾನಾ ಡಿಸೈನ್‌ನ ಪಾರ್ಟಿವೇರ್ಸ್‌ ಧರಿಸುತ್ತಿರುತ್ತಾರೆ. ಇನ್ನು ವೆಸ್ಟರ್ನ್‌ವೇರ್‌ ಡಿಸೈನ್‌ನಲ್ಲಿ, ಸೆಲೆಬ್ರೆಟಿ ಡಿಸೈನರ್‌ಗಳು ಕೂಡ ಆಯಾ ಬಾಲಿವುಡ್‌ ತಾರೆಯರ ಅಭಿಲಾಷೆಗೆ ತಕ್ಕಂತೆ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸಿಕೊಡುತ್ತಾರೆ ಎನ್ನುತ್ತಾರೆ ಫ್ಯಾಷನಿಸ್ಟ್‌ ರಿಚಾ.

ಟ್ರೆಂಡಿಯಾಗಿರುವ ಸಿಕ್ವೀನ್ಸ್‌ ಪಾರ್ಟಿವೇರ್ಸ್‌

ನೈಟ್‌ಪಾರ್ಟಿಗಳಲ್ಲಿ ಅತಿ ಹೆಚ್ಚಾಗಿ ಸಿಕ್ವೀನ್ಸ್‌ ಡಿಸೈನರ್‌ವೇರ್‌ಗಳನ್ನು ಧರಿಸುವುದು ಇತ್ತೀಚೆಗೆ ಹೆಚ್ಚಾಗಿದೆ. ಅವುಗಳಲ್ಲಿ, ಬಾಡಿಕಾನ್‌ ಸ್ಲಿಟ್‌ ಗೌನ್ಸ್‌, ಬ್ಯಾಕ್‌ಲೆಸ್‌ ಸಿಕ್ವೀನ್ಸ್‌ ಗೌನ್ಸ್‌, ಹಾಲ್ಟರ್‌ ನೆಕ್‌ ಗೌನ್ಸ್‌, ಮಿನಿ ಫ್ರಾಕ್ಸ್‌, ಸ್ವಿಂಗ್‌ ಫ್ರಾಕ್ಸ್‌, ಡಿವೈಡಿಂಗ್‌ ಪ್ಯಾಂಟ್ಸ್‌, ಕಟೌಟ್‌ ಟಾಪ್‌ ಹಾಗೂ ಸ್ಕೆಟರ್‌ ಡ್ರೆಸ್‌ಗಳು ಅತಿ ಹೆಚ್ಚು ಟ್ರೆಂಡಿಯಾಗಿವೆ. ಇನ್ನು, ಗೋಲ್ಡ್‌ ಹಾಗೂ ಸಿಲ್ವರ್‌ ಶೇಡ್‌ನವು ಅತಿ ಹೆಚ್ಚು ಪಾರ್ಟಿವೇರ್‌ಗಳ ಕೆಟಗರಿಯಲ್ಲಿ ಪಾಪುಲರ್‌ ಆಗಿವೆ. ನೋಡಲು ಆಕರ್ಷಕವಾಗಿ ಕಾಣಿಸುವ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಕೆಲವಂತೂ ಬಿಕಿನಿ ಶೈಲಿಯ ಟಾಪ್‌ ಹಾಗೂ ಶಾರ್ಟ್ಸ್‌ ಸ್ಕರ್ಟ್‌ಗಳಲ್ಲಿ ಬಂದಿವೆ. ಪೇಜ್‌ 3 ಪಾರ್ಟಿಪ್ರಿಯರ ವಾರ್ಡ್ರೋಬ್‌ಗೆ ಸೇರಿವೆ. ಪರಿಣಾಮ, ಯಾವ ಪಾರ್ಟಿಯಲ್ಲಿ ನೋಡಿದರೂ ಈ ಸಿಕ್ವೀನ್ಸ್‌ ಡಿಸೈನರ್‌ವೇರ್‌ಗಳ ಕಾರುಬಾರು ಹೆಚ್ಚಾಗಿದೆ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್ಸ್‌ ರಿಯಾ ಹಾಗೂ ದೇವ್‌.

Sequins partywear fashion

ಮಾಡೆಲ್‌ಗಳ ಸಿಕ್ವೀನ್ಸ್‌ ಲವ್‌

ಇದಕ್ಕೆ ಪೂರಕ ಎಂಬಂತೆ, ಸಿಕ್ವೀನ್ಸ್‌ ಪಾರ್ಟಿ ಪ್ರಿಯರಲ್ಲಿ ಇದೀಗ ಮಾಡೆಲ್‌ಗಳು ಸೇರಿದ್ದಾರೆ. ಮಾಡೆಲ್‌ ರಿಯಾ, ಜಾನು ಹಾಗೂ ರೀಟಾ ಅವರಿಗೂ ಸಿಕ್ವೀನ್ಸ್‌ ಪಾರ್ಟಿವೇರ್‌ಗಳೆಂದರೇ ಬಲು ಪ್ರೀತಿಯಂತೆ. ಇವರುಗಳಿಗೆ ಮಾತ್ರವಲ್ಲ, ಸಾಕಷ್ಟು ಮಾಡೆಲ್‌ಗಳಿಗೆ ಬಿಂದಾಸ್‌ ಲುಕ್‌ ನೀಡುವ ಈ ಸಿಕ್ವೀನ್ಸ್‌ ಔಟ್‌ಫಿಟ್ಸ್‌ ಎಂದರೇ ಸಖತ್‌ ಇಷ್ಟವಂತೆ.

ಇದನ್ನೂ ಓದಿ: Mango Facepack: ಆಕರ್ಷಕ ತ್ವಚೆಗಾಗಿ ಸೀಸನ್‌ ಮ್ಯಾಂಗೋ ಫೇಸ್‌ಪ್ಯಾಕ್‌

ಸಿಕ್ವೀನ್ಸ್‌ ಪಾರ್ಟಿವೇರ್ಸ್‌ ಮೇಕೋವರ್‌ಗೆ 3 ಐಡಿಯಾ

  1. ವೆಸ್ಟರ್ನ್‌ ಲುಕ್‌ಗೆ ಆಕ್ಸೆಸರೀಸ್‌ ಮ್ಯಾಚ್‌ ಮಾಡಿ.
  2. ಮೇಕಪ್‌ ಲೈಟಾಗಿರಲಿ, ಐ ಮೇಕಪ್‌ ಹೈ ಲೈಟಾಗಿರಲಿ.
  3. ಹೈ ಹೀಲ್ಸ್‌ ಹಾಗೂ ಹೇರ್‌ಸ್ಟೈಲ್‌ ಆಕರ್ಷಕವಾಗಿರಲಿ.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ )

Continue Reading
Advertisement
IPL 2024
ಪ್ರಮುಖ ಸುದ್ದಿ43 mins ago

IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

Prajwal Revanna Case
ಕರ್ನಾಟಕ1 hour ago

Prajwal Revanna Case: ರೇವಣ್ಣಗೆ ಜಾಮೀನು ಹಿನ್ನೆಲೆ ವಿದೇಶದಿಂದ ಪ್ರಜ್ವಲ್‌ ವಾಪಸ್?‌; ಕೋರ್ಟ್‌ಗೆ ಶರಣಾಗುವ ಸಾಧ್ಯತೆ

Hoarding
ಸಂಪಾದಕೀಯ1 hour ago

ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

Sushil Kumar Modi
ಪ್ರಮುಖ ಸುದ್ದಿ1 hour ago

Sushil Kumar Modi : ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ

Tejasvi Surya
ದೇಶ2 hours ago

Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

IPL 2024
ಪ್ರಮುಖ ಸುದ್ದಿ2 hours ago

IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

Vidyarthi Vidyarthiniyare Movie
ಕರ್ನಾಟಕ2 hours ago

Vidyarthi Vidyarthiniyare Movie: ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಟ್ರೈಲರ್ ಔಟ್; ಧುಮ್ಮಿಕ್ಕಿದ ಹರೆಯದ ತೊರೆ!

Road Accident Head on collision between bikes One person died on the spot
ಉತ್ತರ ಕನ್ನಡ2 hours ago

Road Accident: ಬೈಕ್‌ಗಳ ನಡುವೆ ಡಿಕ್ಕಿ; ಒಬ್ಬ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

Lok Sabha Election
ದೇಶ3 hours ago

Lok Sabha Election: 28 ವರ್ಷಗಳಲ್ಲೇ ಶ್ರೀನಗರದಲ್ಲಿ ಅಧಿಕ ಮತದಾನ; 370ನೇ ವಿಧಿ ರದ್ದು ಎಫೆಕ್ಟ್?

Award Ceremony
ಬೆಂಗಳೂರು3 hours ago

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Bail Revanna will not leave the country condition imposed by the court
ಕ್ರೈಂ6 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Prajwal Revanna case HD Revanna finally gets bail What was the argument like
ಕ್ರೈಂ6 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ6 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ7 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ7 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ14 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ18 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ20 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ1 day ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಟ್ರೆಂಡಿಂಗ್‌