ಮಡಿಕೇರಿ: ದೇವಾಲಯದ ಗರ್ಭಗುಡಿ ಧ್ವಂಸಗೊಳಿಸಿ, ದೇವರ ವಿಗ್ರಹ ಭಗ್ನಗೊಳಿಸಿ ದೇವರ ವಿಗ್ರಹದ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿರುವ ಘಟನೆ (Theft at temple) ಅತ್ತೂರಿನಲ್ಲಿ ನಡೆದಿದೆ.
ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಅತ್ತೂರು ಗ್ರಾಮದ ಶ್ರಿ ಮಾರಮ್ಮ ದೇವರ ಗರ್ಭಗುಡಿಯನ್ನು ಒಡೆದು ವಿಗ್ರಹವನ್ನು ಭಗ್ನಗೊಳಿಸಲಾಗಿದೆ. ವಿಗ್ರಹದಲ್ಲಿದ್ದ ಮಾಂಗಲ್ಯ ಸರವನ್ನ ಖದಿಮರು ಹೊತ್ತೊಯ್ದಿದ್ದಾರೆ. ಅತ್ತೂರು ಗ್ರಾಮದ ಸಮಸ್ತ ಹಿಂದೂ ಬಾಂಧವರು ಆರಾಧಿಸುತ್ತಿದ್ದ ಗ್ರಾಮ ದೇವತೆಯಾದ ಮಾರಮ್ಮ ದೇವಿಯಾಗಿದ್ದು ಘಟನೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಡಗಿನ ಕೆಲವು ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಮಾಡುವಂತ ಕೆಲಸ ಹೆಚ್ಚುತ್ತಿದ್ದು ಇದಕ್ಕೆ ಪೂರಕ ಎಂಬಂತೆ ಕುಶಾಲನಗರ ತಾಲೂಕಿನ ಅತ್ತೂರು ಗ್ರಾಮದಲ್ಲಿ ಮಾರಿಯಮ್ಮ ದೇವಿಯ ವಿಗ್ರಹ ಧ್ವಂಸಗೊಳಿಸಿರುವ ಪ್ರಕರಣ ನಿದರ್ಶನವಾಗಿದೆ.
ಈ ರೀತಿಯ ಹೇಯ ಕೃತ್ಯವನ್ನು ಕುಶಾಲನಗರ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತೀವ್ರವಾಗಿ ಖಂಡಿಸಿದೆ. ಅತಿ ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಭಜರಂಗದಳ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ. ಪ್ರಕರಣ ಸಂಬಂಧ ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ | Eco-Friendly Temple | ಪಂಚಭೂತಗಳಿಂದ ನಿರ್ಮಿತವಾದ ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಶ್ರೀ ಪ್ರಸನ್ನನಾಥ ಸ್ವಾಮೀಜಿ