ಬೆಂಗಳೂರು: ಇಲ್ಲಿನ ಚಂದ್ರಲೇಔಟ್ ಠಾಣಾ ವ್ಯಾಪ್ತಿಯ ಬಿಸಿಸಿ ಲೇಔಟ್ ಸಮೀಪ ಮಹಿಳೆಯೊಬ್ಬರನ್ನು ಹಿಂಬಾಲಿಸಿ ಕಳ್ಳತನಕ್ಕೆ (Theft Case) ಯತ್ನಿಸಿರುವ ಘಟನೆ ಕಳೆದ ಬುಧವಾರ (12) ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ. ಶಶಿಕಲಾ ರಂಗನಾಥ್ ಎಂಬುವವರು ತಮ್ಮ ಮನೆಗೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಮೆಲ್ಲಗೆ ಹೆಜ್ಜೆ ಇಟ್ಟುಕೊಂಡು ಬಂದ ಖರ್ತನಾಕ್ ಕಳ್ಳ ಹಿಂದಿನಿಂದ ಬಂದು ಅಟ್ಯಾಕ್ ಮಾಡಿದ್ದಾನೆ.
ಕುತ್ತಿಗೆಯಲ್ಲಿ ಚಿನ್ನದ ಸರವಿದೆ ಎಂದು ಭಾವಿಸಿದವನೇ ಮಹಿಳೆಯನ್ನು ಬಿಗಿದಪ್ಪಿ ಕೆಳಗೆ ಬೀಳಿಸಿದ್ದಾನೆ. ಏನು ಆಗುತ್ತಿದೆ ಎಂದು ಮಹಿಳೆಯ ಅರಿವಿಗೆ ಬರುವ ವೇಳೆಗೆ ಕತ್ತನ್ನು ಬಿಗಿದು ಕೊರಳಿಗೆ ಕೈಹಾಕಿದ್ದಾನೆ. ಆದರೆ, ಕೊರಳಿನಲ್ಲಿ ಚಿನ್ನದ ಸರವಿಲ್ಲ ಬದಲಿಗೆ ಕರಿಮಣಿ ಸರ ಇರುವುದು ಕಂಡೊಂಡನೆ ಅನುಚಿತವಾಗಿ ವರ್ತಿಸಿ ಬಳಿಕ ಆಕೆಯನ್ನು ತಳ್ಳಿ ಅಲ್ಲಿಂದ ಪರಾರಿ ಆಗಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಹಿಳೆ ಕೂಗಾಟ ಕೇಳಿ ಮನೆಯಿಂದ ಹೊರ ಬಂದ ಸ್ಥಳೀಯರು ಕಳ್ಳನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಕ್ಷಣಾರ್ಧದಲ್ಲಿ ಆತ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ: Murder Case: ಮೈಯಲ್ಲಿ ಕೆತ್ತಿಸಿದ್ದ ಅವಳದ್ದೇ ಚಿತ್ರ; ನಡತೆ ಬಗ್ಗೆ ಅನುಮಾನಿಸಿ ಕತ್ತನ್ನೇ ಕತ್ತರಿಸಿದ!
ಇನ್ನು ಈ ಸಂಬಂಧ ಕೂಡಲೇ ಚಂದ್ರಲೇಔಟ್ ಪೊಲೀಸರಿಗೆ ದೂರು ಕೊಡಲಾಗಿದೆ. ಆದರೆ, ತಕ್ಷಣ ಕ್ರಮ ಕೈಗೊಳ್ಳಬೇಕಿದ್ದ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಏನೂ ಆಗಿಲ್ಲವಲ್ಲ ಬಿಡಿ, ಯಾರೆಂದು ಪತ್ತೆ ಮಾಡುತ್ತೇವೆ ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಏರಿಯಾದಲ್ಲಿ ಪೊಲೀಸರಿಂದ ಯಾವುದೇ ಬೀಟ್ ಇಲ್ಲ, ಭದ್ರತೆ ಇಲ್ಲವೆಂದು ಸ್ಥಳೀಯರು ಕಿಡಿಕಾರಿದ್ದಾರೆ.