ಬೆಂಗಳೂರು: ಚಡ್ಡಿ ಧರಿಸಿ ಈ ಗ್ಯಾಂಗ್ ಫೀಲ್ಡಿಗಿಳಿದರೆ ಚಿನ್ನದ ಸರ ಎಗರಿಸದೆ (Theft Case) ವಾಪಸ್ ಆಗುತ್ತಿರಲಿಲ್ಲ. ಹೀಗೆ ಶರವೇಗದಲ್ಲಿ ಬಂದು ಸರಗಳ್ಳತನ ಮಾಡಿ ಪರಾರಿ ಆಗುತ್ತಿದ್ದ ಖತರ್ನಾಕ್ ಚಡ್ಡಿ ಗ್ಯಾಂಗ್ ಅನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.
ಸುನೀಲ್ ಕುಮಾರ್ ಅಲಿಯಾಸ್ ಸ್ನ್ಯಾಚರ್ ಸುನೀಲ್ (37), ಶ್ರೀನಿವಾಸ್ ಅಲಿಯಾಸ್ ಚಡ್ಡಿ (25) ಬಂಧಿತ ಆರೋಪಿಗಳು. ಈ ಆರೋಪಿಗಳು ಗಿರಿನಗರ, ಅಶೋಕನಗರದಲ್ಲಿ ಚೈನ್ ಸ್ನಾಚಿಂಗ್ ಮಾಡುತ್ತಿದ್ದರು. ಹೀಗೆ ಜನವರಿ 4ರಂದು 56 ವರ್ಷದ ಸ್ಕೂಲ್ ಟೀಚರ್ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದರು. ಈ ಸಂಬಂಧ ಮಹಿಳೆ ದೂರು ದಾಖಲಿಸಿದ್ದರು.
ತನಿಖೆಗಿಳಿದ ಪೊಲೀಸರಿಗೆ ಆರೋಪಿಗಳನ್ನು ಹಿಡಿಯಲು ಹರಸಾಹಸ ಪಡಬೇಕಾಯಿತು. 15 ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ಚಡ್ಡಿ ಗ್ಯಾಂಗ್ ಖಾಕಿ ಖೆಡ್ಡಾಕ್ಕೆ ಬಿದ್ದಿದೆ. ವಿಚಾರಣೆ ವೇಳೆ ಆರೋಪಿ ಸುನೀಲ್ ಕುಮಾರ್ 8 ವರ್ಷ ಜೈಲಿನಲ್ಲಿದ್ದು ಹೊರಬಂದವನೇ ಸರಗಳ್ಳತನಕ್ಕೆ ಇಳಿದಿದ್ದ ಎಂದು ತಿಳಿದುಬಂದಿದೆ. ಬಂಧಿತನಿಂದ ಒಂದೂವರೆ ಲಕ್ಷ ಮೌಲ್ಯದ 30 ಗ್ರಾಂ ಚಿನ್ನದ ಸರ ಹಾಗೂ 12 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | H D Devegowda : ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಹೋಮ ನೆರವೇರಿಸಿದ ಎಚ್.ಡಿ.ದೇವೇಗೌಡ ದಂಪತಿ