Site icon Vistara News

Theft Case: ಮನೆ ಬೀಗವನ್ನೂ ಮುರಿಯಲ್ಲ, ತಿಜೋರಿಗೂ ಕೈ ಹಾಕಲ್ಲ; ಬಾತ್ ರೂಂ ಅಷ್ಟೇ ಈ ಕಳ್ಳರ ಟಾರ್ಗೆಟ್‌!

#image_title

ಬೆಂಗಳೂರು/ನೆಲಮಂಗಲ: ರಾಜಧಾನಿ ಬೆಂಗಳೂರಲ್ಲಿ ಹೊಸ ರೀತಿಯ ಕಳ್ಳರ (Theft Case) ಹಾವಳಿ ಶುರುವಾಗಿದೆ. ಈ ಕಳ್ಳರು ಮನೆ ಹಾಕಿರುವ ಬೀಗವನ್ನು ಒಡೆಯಲ್ಲ, ತಿಜೋರಿ ತಂಟೆಗಂತೂ ಹೋಗುವುದಿಲ್ಲ. ಈ ಕಳ್ಳರ ಟಾರ್ಗೆಟ್ ಏನಿದ್ದರೂ ಮನೆ ಹೊರಗಿನ ಬಾತ್ ರೂಂ.

ಮನೆಯವರು ಹೊರ ಹೋಗುತ್ತಿದ್ದ ಹಾಗೇ ಹಗಲು ಹೊತ್ತಲ್ಲಿ ಡೆಲವರಿ ಬಾಯ್ಸ್ ರೀತಿ ಎಂಟ್ರಿ ಕೊಡುವ ಖದೀಮರು, ಬಾತ್ ರೂಮಲ್ಲಿರುವ ಟ್ಯಾಪ್, ಗೀಸರ್‌ಗಳನ್ನು ಕದ್ದು ಪರಾರಿ ಆಗುತ್ತಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಬೈಕಲ್ಲಿ ಬರುವ ಈ ಕಳ್ಳರು ಕ್ಷಣಾರ್ಧದಲ್ಲಿ ಕಳ್ಳತನ ಎಸಗಿ ಪರಾಗಿ ಆಗುತ್ತಾರೆ.

ನಗರದ ಹೆಗ್ಗನಹಳ್ಳಿಯಲ್ಲಿ ಈ ರೀತಿ ಕೃತ್ಯ ಎಸಗಿದ್ದು, ಇದೂವರೆಗೂ ಖಾಸಗಿ ಶಾಲೆ ಸೇರಿ ನಾಲ್ಕೈದು ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಬೈಕ್‌ನಲ್ಲಿ ಬರುವ ಇಬ್ಬರು, ಒಬ್ಬ ಕಳ್ಳತನಕ್ಕೆ ಮುಂದಾದರೆ ಮತ್ತೊಬ್ಬ ಹೊರಗೆ ಕಾವಲು ಕಾಯುತ್ತಾ ಇರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗೀಸರ್‌ ಕಳ್ಳರಿಗೆ ಬಲೆ ಬೀಸಿದ್ದಾರೆ.

ಕಾರಿನ ಗಾಜು ಪುಡಿ ಮಾಡಿ ಕಳ್ಳತನ

ಮತ್ತೆ ನಗರದಲ್ಲಿ ಓಜಿಕುಪ್ಪಂ ಗ್ಯಾಂಗ್‌ ಚುರುಕು

ನೆಲಮಂಗಲದ ಗುರುಭವನ ಬಳಿ ನಿಲ್ಲಿಸಿದ್ದ ಕಾರಿನ ಗ್ಲಾಸ್‌ ಹೊಡೆದು ಕಳ್ಳರು ಕಳ್ಳತನ ಮಾಡಿದ್ದಾರೆ. ಶಾಲಾ ಶಿಕ್ಷಕ ನಾಗರಾಜ್ ಎಂಬುವವರು ಮಾಸಿಕ ಕಂತಿನ ಚೀಟಿಯೊಂದರಲ್ಲಿ ಪಡೆದಿದ್ದ ಹಣವನ್ನು ತೆಗೆದುಕೊಂಡು ಮನೆಗೆ ಹೊರಟಿದ್ದರು. ಈ ವೇಳೆ ಕೆಲಸದ ನಿಮಿತ್ತ ಕಾರನ್ನು ಗುರುಭವನ ಬಳಿ ನಿಲ್ಲಿಸಿ ಕಚೇರಿ ಒಳಗೆ ಹೋಗಿದ್ದರು.

ಇವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಳ್ಳರು ಕ್ಷಣ ಮಾತ್ರದಲ್ಲಿ ಕಾರಿನ ಗಾಜು ಒಡೆದು 1.80 ಲಕ್ಷ ರೂ. ಹಣ ಸೇರಿದಂತೆ ದಾಖಲೆಗಳ ಕಳವು ಮಾಡಿ ಪರಾರಿ ಆಗಿದ್ದಾರೆ. ಇನ್ನು ಈ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇವರ ಚಲನವಲನವನ್ನು ಗಮನಿಸಿರುವ ಪೊಲೀಸರು ಇವರನ್ನು ಓಜಿಕುಪ್ಪಂ ಗ್ಯಾಂಗ್‌ನವರು ಎಂದು ಅಂದಾಜಿಸಲಾಗುತ್ತಿದೆ.

ಇದನ್ನೂ ಓದಿ: Attempt To Murder: ರೀಲ್ಸ್‌ ಮಾಡುವ ನೆಪದಲ್ಲಿ ಭಾವಿ ಪತಿಗೆ ಚಾಕು ಹಾಕಿದ ಬಾಲಕಿ!

ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

Exit mobile version