Site icon Vistara News

Theft Case In Bengaluru: ಉಂಡ ಮನೆಗೆ ಕನ್ನ ಹಾಕಿದ ಮನೆಕೆಲಸದಾಕೆ; ಮಾಲು ಸಮೇತ ಮೂವರ ಸೆರೆ

#image_title

ಬೆಂಗಳೂರು: ತಲಘಟ್ಟಪುರ ಪೊಲೀಸರು (talaghattapura police) ಕಾರ್ಯಾಚರಣೆ ನಡೆಸಿ, ಚಿನ್ನಾಭರಣ ಕಳವು ಮಾಡಿ ಪರಾರಿ ಆಗಿದ್ದ ಮೂವರು ಕಳ್ಳರನ್ನು (Theft Case In Bengaluru) ಬಂಧಿಸಿದ್ದಾರೆ. ಶೃತಿ, ಸಿದ್ದೇಗೌಡ ಹಾಗೂ ಸೋಮಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳು

ಆರೋಪಿಗಳ ಪೈಕಿ ಶೃತಿ ಎಂಬಾಕೆ ಕನಕಪುರ ರಸ್ತೆಯ ನಾರಾಯಣನಗರದ ತೇಜಸ್ ಎಂಬುವರ ಮನೆಯಲ್ಲಿ ಮನೆಕೆಲಸಕ್ಕೆ ಸೇರಿದ್ದಳು. ಮನೆ ಮಾಲೀಕರು ಎಲ್ಲೆಲ್ಲಿ ಚಿನ್ನಾಭರಣ ಇಟ್ಟಿರುತ್ತಾರೆ ಎಂಬುದನ್ನೆಲ್ಲ ತಿಳಿದು ತನ್ನ ಸ್ನೇಹಿತರಾದ ಸಿದ್ದೇಗೌಡ ಹಾಗೂ ಸೋಮಶೇಖರ್ ಮೂಲಕ ಕಳ್ಳತನಕ್ಕೆ ಪ್ಲ್ಯಾನ್‌ ಮಾಡಿದ್ದಳು.

ತೇಜಸ್ ಮನೆಯವರು ಕುಟುಂಬ ಸಮೇತರಾಗಿ ಹೊರ ಹೋಗಿದ್ದಾಗ ಎಂಟ್ರಿ ಕೊಟ್ಟ ಖದೀಮರು, ಸುಮಾರು 20 ಲಕ್ಷ ರೂಪಾಯಿಯಷ್ಟು ಬೆಲೆ ಬಾಳುವ ಚಿನ್ನಾಭರಣವನ್ನು ದೋಚಿ ಪರಾರಿ ಆಗಿದ್ದರು. ಈ ಸಂಬಂಧ ತೇಜಸ್‌ ಕುಟುಂಬಸ್ಥರು ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಚಿನ್ನಾಭರಣವನ್ನು ವಶಕ್ಕೆ ಪಡೆದ ಪೊಲೀಸರು

ದೂರು ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ್ದ 350 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಬೇರೆ ಕಡೆಗಳಲ್ಲಿಯೂ ಈ ರೀತಿಯ ಕೃತ್ಯ ಎಸೆಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.

ರಕ್ತ ಚಂದನ ಮಾರಾಟಕ್ಕೆ ಯತ್ನ

ಗಿರಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ತಚಂದನ ಮರ‌ದ ತುಂಡುಗಳನ್ನು (Red Sandalwood) ಮಾರಾಟ ಮಾಡಲು ಯತ್ನಿಸುತ್ತಿದ್ದವನನ್ನು ಬಂಧಿಸಿದ್ದಾರೆ. ಮಂಡ್ಯ ಮೂಲದ ಕೃಷ್ಣ ಬಂಧಿತ ಆರೋಪಿ ಆಗಿದ್ದಾನೆ.

ರಕ್ತ ಚಂದನದ ತುಂಡುಗಳೊಂದಿಗೆ ಆರೋಪಿ ಕೃಷ್ಣ

ಮೊದಲು ಎರಡು ಕೆಜಿ ರಕ್ತದ ಚಂದನ ಮರದ ತುಂಡನ್ನು ಗಿರಿನಗರದ ವಿದ್ಯಾನಗರದ ಬಸ್ ನಿಲ್ದಾಣದ ಬಳಿ ಮಾರಾಟಕ್ಕೆ ಯತ್ನಸಿದ್ದ. ಆದರೆ ಗಿರಿನಗರ ಪೊಲೀಸರು ಆತನನ್ನು ರೆಂಡ್‌ ಹ್ಯಾಂಡ್‌ ಆಗಿ ಹಿಡಿದು ಬಂಧಿಸಿದ್ದರು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬನಶಂಕರಿ ಬಳಿಯ ಟಾಟಾ ಪ್ರಮೌಂಟ್ ಅಪಾರ್ಟ್‌ಮೆಂಟ್ ಸಮೀಪವಿರುವ ಹನುಮಗಿರಿ ಬೆಟ್ಟದಲ್ಲಿ ರಕ್ತ ಚಂದನವನ್ನು ಸಂಗ್ರಹ ಮಾಡಿದ್ದ ಎಂಬ ಮಾಹಿತಿ ತಿಳಿದು ಬಂದಿತ್ತು.

ಹನುಮಗಿರಿ ಬೆಟ್ಟದಲ್ಲಿ ಪರಿಶೀಲನೆ ನಡೆಸಿದಾಗ ಬಚ್ಚಿಟ್ಟಿದ್ದ ರಕ್ತಚಂದನದ ತುಂಡುಗಳನ್ನು ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಈ ಕೃತ್ಯದ ಹಿಂದಿರುವ ಇನ್ನಷ್ಟು ಆರೋಪಿಗಳಿಗಾಗಿ ಶೋಧ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ.

Exit mobile version