Site icon Vistara News

Theft Case: ಮನೆಗೆ ಕನ್ನ ಹಾಕಿ ಪರಾರಿ ಆಗಿದ್ದ ನೇಪಾಳಿ ದಂಪತಿ; ಮಾಲು ಸಮೇತ ಜೈಲಿಗೆ ಅಟ್ಟಿದ ಜಯನಗರ ಪೊಲೀಸರು

#image_title

ಬೆಂಗಳೂರು: ಇಲ್ಲಿನ ಜಯನಗರದ 5ನೇ ಬ್ಲಾಕ್‌ನಲ್ಲಿ ಮನೆ ಕೆಲಸಕ್ಕೆ ಸೇರಿಕೊಂಡು, ಮಾಲೀಕರ ವಿಶ್ವಾಸ ಗಳಿಸಿ ಬಳಿಕ ಮನೆ ಲೂಟಿ (Theft Case) ಮಾಡಿ ಪರಾರಿ ಆಗಿದ್ದ ನೇಪಾಳಿ ದಂಪತಿಯ ಬಂಧನವಾಗಿದೆ. ಬಿಕಾಸ್ ಹಾಗೂ ಆತನ ಪತ್ನಿ ಸುಕ್ಷ್ಮಿತಾ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ದಂಪತಿ ಮನೆಯಲ್ಲಿ ಮಾಲೀಕರು ಇಲ್ಲದ ವೇಳೆ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿ ಆಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 21 ಲಕ್ಷ ರೂಪಾಯಿ ಮೌಲ್ಯದ 192 ಗ್ರಾಂ ತೂಕದ ಚಿನ್ನಾಭರಣ ಹಾಗೂ 168 ಗ್ರಾಂ ಬೆಳ್ಳಿ ಹಾಗೂ 18 ಬ್ರಾಂಡೆಡ್ ವಾಚ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Murder Case: ಬೆಂಗಳೂರಿನಲ್ಲಿ ಒಂಟಿ ಮಹಿಳೆ ಹತ್ಯೆ ಪ್ರಕರಣ; ಬರ್ತ್‌ಡೇ ಗಿಫ್ಟ್‌ಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ದಂಪತಿಯ ಕೃತ್ಯಕ್ಕೆ ಸಾಥ್‌ ನೀಡಿದ್ದ ಮತ್ತೊಬ್ಬ ಆರೋಪಿ ಹೇಮಂತ್ ತಲೆಮರಿಸಿಕೊಂಡಿದ್ದು, ಆತನಿಗಾಗಿ ಜಯನಗರ ಪೊಲೀಸರು ಬಲೆ ಬೀಸಿದ್ದಾರೆ.

Exit mobile version