Site icon Vistara News

Theft case: ಸಂಬಳ ಜಾಸ್ತಿ ಮಾಡಿಲ್ಲವೆಂದು ಮಾಲೀಕನ ಮನೆಗೆ ಕನ್ನ ಹಾಕಿದ; ತಪ್ಪಾಯ್ತು ಎಂದು ಟೆಂಪಲ್‌ ರನ್‌ ಮಾಡಿದ

Teachers Recruitment Scam

ಬೆಂಗಳೂರು: ಮನೆ ಮಾಲೀಕರು ಸಂಬಳ ಹೆಚ್ಚು ಮಾಡಿಲ್ಲವೆಂದು ಮನೆ ಕೆಲಸದವನು ಮಾಲೀಕನ ಮನೆಗೆ ಕನ್ನ (Theft case) ಹಾಕಿರುವ ಘಟನೆ ಅಶೋಕ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಾನ್‌ ಅಲಿಯಾಸ್ ಮಂಜುನಾಥ್ ಎಂಬಾತ ಕಳ್ಳತನ ಮಾಡಿ ಬಳಿಕ ತಪ್ಪಾಗಿದೆ ಎಂದು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದ.

ಆರೋಪಿ ಮಂಜುನಾಥ್‌ ಶಾಂತಿನಗರ ಮನೆಯೊಂದರಲ್ಲಿ ಮನೆಗೆಲಸ ಮಾಡಿಕೊಂಡಿದ್ದ. ಮನೆ ಮಾಲೀಕರು ಸಂಬಳ ಹೆಚ್ಚು ಮಾಡದ ಕಾರಣಕ್ಕೆ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿ ಆಗಿದ್ದ.

ಕದ್ದ‌ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡುವ ಮಂಜುನಾಥ್‌ ದೇವಸ್ಥಾನದ ಹುಂಡಿಗೆ ಚಿನ್ನ ಹಾಕುತ್ತಿದ್ದ, ಅಷ್ಟು ಮಾತ್ರವಲ್ಲದೆ ದೇವಸ್ಥಾನದ ಮುಂದಿದ್ದ ಭಿಕ್ಷುಕರಿಗೂ ಕಳ್ಳತನದ ಪಾಲು ನೀಡುತ್ತಿದ್ದ. ಉಳಿದ ಚಿನ್ನಾಭರಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ: ಹೊಡೆದು ಹಾಕಿ ಹೇಳಿಕೆಯನ್ನು ಸದನದಲ್ಲಿ ಸಮರ್ಥಿಸಿದ ಅಶ್ವತ್ಥ್‌ ನಾರಾಯಣ್‌; ಕಾಂಗ್ರೆಸ್‌ ಕೆಂಡಾಮಂಡಲ, ಭಾರಿ ಗದ್ದಲ

ತಮಿಳುನಾಡಿನ ಹಿಂದು ದೇವಾಲಯ, ಚರ್ಚ್‌ಗಳಿಗೆ ಭೇಟಿ ನೀಡಿ ಚಿನ್ನ ಹಂಚಿಕೆ ಮಾಡಿರುವುದು ತಿಳಿದು ಬಂದಿದೆ. ಮನೆ‌ಕೆಲಸ ಮಾಡುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅಶೋಕ್ ನಗರ ಪೊಲೀಸರು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version