Site icon Vistara News

Theft Case: ಎಂಎಲ್‌ಸಿ ಬೋಜೇಗೌಡರ ಕಾರ್ ನಂಬರ್ ನಕಲಿ ಮಾಡಿದ್ದವರು ಅರೆಸ್ಟ್‌; ವಿಜಯಪುರದಲ್ಲಿ ಕಿಟಕಿ ಸರಳು ಕಟ್‌ ಮಾಡಿ ಮನೆ ಕಳ್ಳತನ

#image_title

ಬೆಂಗಳೂರು: ಫಾರ್ಚುನರ್ ಕಾರುಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ (Theft Case) ಮಾಡುತ್ತಿದ್ದ ಅಂತಾರಾಜ್ಯ ಕಾರು ಕಳ್ಳರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಎಂಎಲ್‌ಸಿ ಬೋಜೇಗೌಡರ ಕಾರ್ ನಂಬರ್ ಅನ್ನು ಬಳಸಿದ್ದು ಇದೇ ಆರೋಪಿಗಳು ಎಂದು ತಿಳಿದು ಬಂದಿದೆ.

ಬೆಂಗಳೂರಲ್ಲಿ ಕಾರು ಕದ್ದು ಬೇರೆ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದರು. ಮೊದಲು ಪೊಲೀಸರ ಕೈಗೆ ಸಿಕ್ಕಿದ್ದ ಒಬ್ಬ ಕಳ್ಳನನ್ನು ವಿಚಾರಣೆ ನಡೆಸಿದಾಗ ಉಳಿದ ಆರು ಮಂದಿ ಸೆರೆ ಸಿಕ್ಕಿದ್ದಾರೆ. ಒಂದು ವಾರದವರೆಗೂ ಹೊಂಚು ಹಾಕಿ ಕಾರು ಕದ್ದು ನಕಲಿ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸುತ್ತಿದ್ದರು. ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ ಸೇರಿದಂತೆ ಹಲವೆಡೆ ಮಾರಾಟ ಮಾಡಿದ್ದರು.

ನಸೀಬ್, ಮಂಜುನಾಥ್, ಶಾಭಾಝ್ ಖಾನ್, ಸೈಯದ್ ರಿಯಾಝ್ ಮತ್ತು ಇಮ್ರಾನ್ ಹಾಗೂ ನಯಾಝ್ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 3 ಕೋಟಿ ರೂ. ಮೌಲ್ಯದ 8 ಕಾರುಗಳು ವಶಕ್ಕೆ ಪಡೆದುಕೊಳ್ಳಲಾಗಿದೆ.

ದುಬಾರಿ ಬೈಕ್‌ ಕಳ್ಳರ ಹಾವಳಿ

ಬೆಂಗಳೂರು ಹೊರವಲಯ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರದ ವಿದ್ಯಾನಗರದಲ್ಲಿ ದುಬಾರಿ ಬೆಲೆಯ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸುವ ದುಬಾರಿ ಬೈಕ್‌ಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದಾರೆ.

ಬೈಕ್‌ ಕದ್ದು ಪರಾರಿ ಆಗುತ್ತಿರುವ ದೃಶ್ಯ

ಒಂದು ವಾರದಲ್ಲಿ ಒಂದೇ ಏರಿಯಾದ ಮೂರು ಬೈಕ್‌ಗಳ ಕಳ್ಳತನವಾಗಿದೆ. ರುದ್ರೇಶ್ ಎಂಬುವವರ ಬುಲೆಟ್‌ ಬೈಕ್ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಲಾಗಿದೆ. ಮತ್ತೊಂದು ಕಡೆ ಎಫ್‌ ಜಡ್ ಬೈಕ್ ಸ್ಟಾರ್ಟ್ ಆಗದೆ ಬೊಮ್ಮಸಂದ್ರ ಲಾರ್ಕ್ ಹೋಟೆಲ್ ಬಳಿ ಬಿಟ್ಟು ಪರಾರಿ ಆಗಿದ್ದಾರೆ.

ಇದನ್ನೂ ಓದಿ: Airtel: ಗ್ರಾಹಕನಿಗೆ ಕೊಟ್ಟ ಸಿಮ್‌ ಕಾರ್ಡ್‌ ಆ್ಯಕ್ಟಿವೇಟ್‌ ಮಾಡದ ಏರ್‌ಟೆಲ್‌ಗೆ 1.55 ಲಕ್ಷ ರೂ. ದಂಡ

ಕಿಟಕಿ ಸರಳು ಕಟ್‌ ಮಾಡಿ ಕಳ್ಳತನ

ವಿಜಯಪುರ: ಇಲ್ಲಿನ ವಜ್ರ ಹನುಮ ದೇವಸ್ಥಾನ ಬಳಿ ಬೀಗ ಹಾಕಿದ್ದ ಮನೆಯ ಕಿಟಕಿ ಸರಳು ಕಟ್ ಮಾಡಿ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿದ್ದ 70 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ಕದ್ದ ಪರಾರಿಯಾಗಿದ್ದಾರೆ. ಪ್ರಮಿಳಾ ಅರಮನೆ ಎಂಬುವವರು ಮಗಳ ಮನೆಗೆ ಹೋಗಿದ್ದರು. ಹೀಗೆ ಎರಡು ದಿನ ಕಳೆದು ವಾಪಸ್‌ ಬಂದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಜಲ‌ನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ.

Exit mobile version