Site icon Vistara News

Theft Case : ಪ್ರಯಾಣಿಕರ ಸೋಗಿನಲ್ಲಿ ರ‍್ಯಾಪಿಡೊ‌ ಚಾಲಕನ ಕಿಡ್ನ್ಯಾಪ್‌!

Rapido driver kidnapped

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳ್ಳತನ, ಸುಲಿಗೆ ಪ್ರಕರಣಗಳು ವರದಿ ಆಗುತ್ತಿದೆ. ಸದ್ಯ ರಾಜಧಾನಿ ಬೆಂಗಳೂರಲ್ಲಿ ಕಳ್ಳರು ಯಾವ್ಯಾವ ವೇಷದಲ್ಲಿ ಬಂದು ಕಳ್ಳತನ ಮಾಡುತ್ತಾರೆ ಎಂಬ ಅಂದಾಜು ಸಿಗುತ್ತಿಲ್ಲ. ಮೈ ಬಗ್ಗಿಸಿ ದುಡಿಯಲಾರದ ಕೆಲವರು ಅಡ್ಡದಾರಿ ಹಿಡಿದು ಜನರಿಂದ ಸುಲಿಗೆ (Theft Case) ಮಾಡಿ ಹಣ ಮಾಡುತ್ತಾರೆ. ಕೆಲ ಕಳ್ಳಕಾಕರು ಗ್ಯಾಂಗ್‌ ಕಟ್ಟಿಕೊಂಡು ದರೋಡೆಗಿಳಿದರೆ, ಇಲ್ಲೊಬ್ಬ ಸಿಂಗಲ್‌ ಆಗಿ (rapido bike) ಫೀಲ್ಡಿಗಿಳಿಯುತ್ತಿದ್ದ.

ಕೇವಲ ರ‍್ಯಾಪಿಡೋ ಚಾಲಕರನ್ನೇ (rapido bike) ಟಾರ್ಗೆಟ್ ಮಾಡುವ ಈತ ಚಾಲಕರನ್ನು ಹೆದರಿಸಿ ಅವರಿಂದ ಹಣ ದೋಚಿ ಹೋಗುತ್ತಿದ್ದ. ಈ ಕಳ್ಳನ ಹಿಂದೆ ಬಿದ್ದ ಗಿರಿನಗರ ಪೊಲೀಸರು ಆರೋಪಿ ಪವನ್ ಎಂಬಾತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: CCB Police Raid : ಪಬ್‌, ಬಾರ್‌ ಮೇಲೆ ಸಿಸಿಬಿ ದಾಳಿ; ಮಾಜಿ, ಹಾಲಿ ಸಚಿವರ ಹೆಸ್ರು ಹೇಳಿದ ಅಪ್ರಾಪ್ತರು ಲಾಕ್‌!

ಈ ಪವನ್‌ ಸಂಜೆಯಾಗುತ್ತಿದ್ದಂತೆ ಪ್ರಯಾಣಿಕರ ಸೋಗಿನಲ್ಲಿ ರ‍್ಯಾಪಿಡೋ ಬೈಕ್‌ ಬುಕ್ ಮಾಡುತ್ತಿದ್ದ. ಬೈಕ್‌ನಲ್ಲಿ ಕೂತು ಸ್ವಲ್ಪ ದೂರ ಹೋಗುತ್ತಿದ್ದಂತೆ, ಚಾಕು ಹಿಡಿದು ಹೆದರಿಸಿ ತಾನು ಹೇಳುವ ಜಾಗಕ್ಕೆ ಹೋಗು ಎಂದು ಕಿಡ್ನ್ಯಾಪ್ ಮಾಡುತ್ತಿದ್ದ. ನೇರವಾಗಿ ತನ್ನ ರೂಮಿ ಕರೆದೊಯ್ದು ಸುಲಿಗೆ ಮಾಡುತ್ತಿದ್ದ. ಹೀಗೆ ರ‍್ಯಾಪಿಡೋ ಚಾಲಕ ಮನು ಎಂಬಾತನನ್ನು ಈ ಪವನ್‌ ಕಿಡ್ನ್ಯಾಪ್‌ ಮಾಡಿ ರೂಮಿನಲ್ಲಿ ಲಾಕ್‌ ಮಾಡಿ ಸುಲಿಗೆ ಮಾಡಿದ್ದಾನೆ.

ಮನು ಬಳಿಯಿರುವ ಹಣವನ್ನು ಕಸಿದುಕೊಂಡಿದ್ದಾನೆ. ಬಳಿಕ ಮೊಬೈಲ್ ಹಾಗೂ ಗಾಡಿ ನೀಡಿ ಕಳಿಸಿದ್ದಾನೆ. ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆತನಿಂದ ತಪ್ಪಿಸಿಕೊಂಡು ಬರುತ್ತಿದ್ದಂತೆ ಚಾಲಕ ಮನು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಗಿರಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಪವನ್‌ನನ್ನು ಬಂಧಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version