ಆನೇಕಲ್: ಮನೆಯೊಂದರಲ್ಲಿ ಒಬ್ಬಳೇ ಇದ್ದ ಯುವತಿಯ ಕೈ, ಕಾಲು ಕಟ್ಟಿ ಹಾಕಿ ಮನೆಯಲ್ಲಿದ್ದ ನಗದು ಚಿನ್ನಾಭರಣ ದರೋಡೆ (Theft Case) ಮಾಡಿರುವ ಘಟನೆ ಆನೇಕಲ್ ಪಟ್ಟಣದ ಲಕ್ಷ್ಮೀ ಟಾಕೀಸ್ ಸಮೀಪ ನಡೆದಿದೆ. ಲಕ್ಷ್ಮೀನಗರದ ಭಾಗ್ಯಲಕ್ಷ್ಮೀ ಎಂಬುವವರ ಮನೆಗೆ ಬೈಕ್ವೊಂದರಲ್ಲಿ ಬಂದಿದ್ದ ಮೂವರು ಖದೀಮರು ಈ ಕೃತ್ಯ ಎಸಗಿದ್ದಾರೆ.
ಮಾಸ್ಕ್ ಧರಿಸಿ ಮನೆಯನ್ನು ಪ್ರವೇಶ ಮಾಡಿರುವ ದುಷ್ಕರ್ಮಿಗಳು ಯುವತಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ್ದಾರೆ. ಏಕಾಏಕಿ ಮನೆಗೆ ನುಗ್ಗಿದವರೇ ಮೊದಲಿಗೆ ಯುವತಿಗೆ ಚಾಕು ತೋರಿಸಿ, ಕೂಗಾಡದಂತೆ ಹೇಳಿದ್ದಾರೆ. ಚಾಕು ಕಂಡು ಭಯಗೊಂಡ ಯುವತಿಯ ಸುಮ್ಮನಾಗಿದ್ದಾಳೆ. ಕೂಡಲೇ ಆಕೆಯ ಕೈ ಕಾಲು ಕಟ್ಟಿ ಹಾಕಿದ್ದಾರೆ.
ಬಳಿಕ ರೂಂನಲ್ಲಿದ್ದ ಬೀರು ಜಾಲಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಎಲ್ಲವನ್ನೂ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ಮೂವರು ಬೈಕ್ನಲ್ಲಿ ಪರಾರಿ ಆಗುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಗಲಿನಲ್ಲಿಯೇ ದರೋಡೆ ಆಗಿರುವ ಸುದ್ದಿ ಕೇಳಿ ಸುತ್ತಮುತ್ತಲಿನ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: Lokayukta raid : ಶಾಸಕ ಮಾಡಾಳು ಚನ್ನೇಶಪುರ ಮನೆಗೂ ಲೋಕಾಯುಕ್ತ ಲಗ್ಗೆ; 3 ಲಕ್ಷ ರೂ. ನಗದು, ಬೆಳ್ಳಿ, ಬಂಗಾರ ಪತ್ತೆ
ದರೋಡೆ ಸಂಬಂಧ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಕರ್ನಾಟಕದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ