Site icon Vistara News

Theft Case: ಶೃಂಗೇರಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಮನೆಗೆ ಕನ್ನ; ವಿದೇಶಿ ಕರೆನ್ಸಿ ಹೆಸರಲ್ಲಿ ವಂಚಿಸುತ್ತಿದ್ದವರ ಬಂಧನ

#image_title

ಚಿಕ್ಕಮಗಳೂರು/ಉಡುಪಿ: ಚಿಕ್ಕಮಗಳೂರಿನ ಶೃಂಗೇರಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಮನೆಗೆ ಕಳ್ಳರು (Theft Case) ಕಳ್ಳತನಕ್ಕೆ ಯತ್ನಿಸಿದ್ದಾರೆ. ಸುಧಾಕರ್‌ ಅವರು ಚುನಾವಣೆ ಪ್ರಚಾರಕ್ಕಾಗಿ ಹೋಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಮನೆಯಲ್ಲಿ ಹೆಚ್ಚು ಹಣ ಸಿಗಬಹುದೆಂದು, ಬೀಗ ಹೊಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ.

ತಡರಾತ್ರಿ ಕಳ್ಳತನಕ್ಕೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮನೆಯಲ್ಲಿ ಯಾವೆಲ್ಲ ವಸ್ತುಗಳು ಕಳ್ಳತನವಾಗಿವೆ ಎಂಬುದು ತಿಳಿದಿಲ್ಲ, ಪೊಲೀಸರು ಅಕ್ಕ ಪಕ್ಕದ ಸಿಸಿ ಟಿವಿ ಫೋಟೇಜ್‌ಗಳನ್ನು ಪರಿಶೀಲಿಸಿ ಕಳ್ಳರಿಗೆ ಬಲೆ ಬೀಸಿದ್ದಾರೆ.

ಮನೆಗೆ ಕನ್ನ ಹಾಕಿದ ಕಳ್ಳರು

ವಿದೇಶಿ ಕರೆನ್ಸಿ ಹೆಸರಲ್ಲಿ ವಂಚಿಸುತ್ತಿದ್ದ 6 ಮಂದಿ ಬಂಧನ

ಉಡುಪಿ: ವಿದೇಶಿ ಕರೆನ್ಸಿ ನೀಡುವುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದ (Fraud Case) 6 ಅಂತರರಾಜ್ಯ ವಂಚಕರನ್ನು ಬಂಧಿಸುವಲ್ಲಿ ಉಡುಪಿ ಜಿಲ್ಲಾ ಪೊಲೀಸರ ತಂಡ ಯಶಸ್ವಿಯಾಗಿದೆ.

ಉತ್ತರಪ್ರದೇಶ ಮೂಲದ ದಿಲ್ಲಿ ಲಕ್ಷ್ಮೀನಗರದ ಮೊಹ್ಮದ್ ಪೊಲಾಶ್ ಖಾನ್ (42), ಮುಂಬಯಿ ಇಂದಿರಾನಗರದ ನಿವಾಸಿ ಮುಹಮ್ಮದ್ ಬಿಲಾಲ್ ಶೇಖ್ (43), ಪಶ್ಚಿಮ ಬಂಗಾಲ ಮೂಲದ ನಾರ್ಥ್ ಈಸ್ಟ್‌ ದಿಲ್ಲಿ ನಿವಾಸಿ ಮಹಮ್ಮದ್ ಫಿರೋಝ್ (30), ಹರಿಯಾಣ ರಾಜ್ಯದ ಫರೀದಾಬಾದ್ ನಿವಾಸಿ ನೂರ್ ಮುಹಮ್ಮದ್ (36) ಹಾಗೂ ಈಸ್ಟ್ ದಿಲ್ಲಿಯ ಮಿರಜ್ ಖಾನ್ (32), ಮುಹಮ್ಮದ್ ಜಹಾಂಗೀರ (60) ಬಂಧಿತ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ: Fraud Case: ಜೈಲಿಗೇ ನಕಲಿ ಕಂಪ್ಯೂಟರ್‌ ಪೂರೈಸಿ ಮೋಸ ಮಾಡಿದ ಕಂಪನಿ! ಠಾಣೆ ಮೆಟ್ಟಿಲೇರಿದ ಅಧಿಕಾರಿಗಳು

ಬಂಧಿತರಿಂದ 100 ದಿರಮ್ಸ್ ವಿದೇಶಿ ಕರೆನ್ಸಿ, 32 ನೋಟುಗಳು, 19 ಮೊಬೈಲ್ ಫೋನ್, 6,29,000 ರೂ. ನಗದು, ಮೂರು ಬೈಕ್, 30 ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Exit mobile version