Site icon Vistara News

Theft Case | ಅಡ್ರೆಸ್‌ ಕೇಳುವ ನೆಪದಲ್ಲಿ ಮೊಬೈಲ್‌ ಕದ್ದು ಪರಾರಿ; ಆರೋಪಿಗಳ ಸೆರೆ

crime ಉಪ್ಪಿನಂಗಡಿ ದಾಂಧಲೆ

ಬೆಂಗಳೂರು: ಅಡ್ರೆಸ್‌ ಕೇಳುವ ನೆಪದಲ್ಲಿ ಮೊಬೈಲ್‌ ಕದ್ದು ಪರಾರಿ ಆಗುತ್ತಿದ್ದ ಕುಖ್ಯಾತ ಮೊಬೈಲ್‌ ಕಳ್ಳರನ್ನು (Theft Case) ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಸಂಪಿಗೆಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಡೆಲಿವರಿ ಬಾಯ್ ಬಳಿ‌ ಅಡ್ರೆಸ್ ಕೇಳುವ ನೆಪದಲ್ಲಿ ಮಾತನಾಡಿಸಿದ್ದ ದುಷ್ಕರ್ಮಿಗಳು, ಆತ ಅಡ್ರೆಸ್‌ ಹೇಳಲು ಮುಂದಾಗುತ್ತಿದ್ದಂತೆ ಗಾಡಿಯಲ್ಲಿ ಇರಿಸಿದ್ದ ಮೊಬೈಲ್ ಕದ್ದು ಪರಾರಿಯಾಗಿದ್ದರು.

Theft Case

ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮುಬಾರಕ್ ಅಲಿಯಾಸ್‌ ಡೂಮ್, ಸುನೀಲ್‌ ಅಲಿಯಾಸ್‌ ಚಿತ್ತು ಹಾಗೂ ಇಸ್ಮಾಯಿಲ್ ಅಲಿಯಾಸ್‌ ಜಿಶಾನ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರು ಮೊಬೈಲ್ ಮಾತ್ರವಲ್ಲದೆ ಬೈಕ್‌ಗಳನ್ನೂ‌ ಕದಿಯುತ್ತಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ನಾಲ್ಕು ಪ್ರಕರಣಗಳು ದಾಖಲಾಗಿದೆ.

ಉಳಿದಂತೆ ಹೆಣ್ಣೂರು, ಎಚ್ಎಎಲ್, ಯಲಹಂಕ, ಕೊತ್ತನೂರು, ಬಾಗಲೂರು ಸೇರಿದಂತೆ ಒಟ್ಟು 8 ಕಡೆ ಪ್ರಕರಣಗಳು ದಾಖಲಾಗಿದೆ. ಆರೋಪಿಗಳ ವಿರುದ್ಧ ಒಟ್ಟು 12 ಪ್ರಕರಣಗಳು ದಾಖಲಾಗಿದೆ.

ತಲೆಮರೆಸಿಕೊಂಡಿದ್ದ ನಟೋರಿಯಸ್‌ ರೌಡಿಶೀಟರ್‌ ಬಂಧನ
ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ನಟೋರಿಯಸ್ ರೌಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುನಿಯಲ್ಲಪ್ಪ@ಮುನಿಯಲ್ಲ ಬಂಧಿತ ಆರೋಪಿ. ಮುನಿಯಪ್ಪ ಎರಡು ಕೊಲೆ ಹಾಗೂ ಕೋಲಾರ ಗ್ರಾಮಾಂತರದಲ್ಲಿ 1 ಡಕಾಯಿತಿ ಸೇರಿ ಸುಮಾರು 7 ಪ್ರಕರಣಕ್ಕೆ ಬೇಕಾಗಿದ್ದ ರೌಡಿಶೀಟರ್ ಆಗಿದ್ದ. ಕಳೆದ 4 ವರ್ಷದಿಂದ ತಲೆಮರೆಸಿಕೊಂಡಿದ್ದವನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ | Theft by Nepalese couple | ಉಂಡ ಮನೆಗೆ ಕನ್ನ ಹಾಕಿ ಪರಾರಿಯಾದ ನೇಪಾಳಿ ದಂಪತಿ

Exit mobile version