ಬೆಂಗಳೂರು: ದರೋಡೆಗೆ ಹೊಂಚು ಹಾಕಿ ಕಾದುಕುಳಿತಿದ್ದಾಗಲೇ ದುಷ್ಕರ್ಮಿಗಳು ಪೊಲೀಸರ (Theft Case) ಬಲೆಗೆ ಬಿದ್ದಿದ್ದಾರೆ. ಶೋಕಿ ತೀರಿಸಿಕೊಳ್ಳಲು ಹಗಲು ಹೊತ್ತಿನಲ್ಲಿ ಕಳ್ಳತನ ಮಾಡುವುದು, ರಾತ್ರಿಯಾಗುತ್ತಿದ್ದಂತೆ ಬಾರ್‌ಗಳಿಗೆ ಹೋಗಿ ಬಾರ್ ಡ್ಯಾನ್ಸರ್‌ಗಳ ಕುಣಿತವನ್ನು ನೋಡುವ ಹುಚ್ಚು ಬೆಳೆಸಿಕೊಂಡವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಮಹಮದ್ ಆಲಿಂ, ರಿಜ್ವಾನ್ ಖಾನ್, ವಾಸಿಂ ಅಹಮದ್, ಮಹಮದ್ ಫರಸ್, ತಬ್ರೇಜ್ ಎಂಬುವವರು ಲೈವ್ ಬ್ಯಾಂಡ್‌ನಲ್ಲಿ ಹೆಣ್ಣು ಮಕ್ಕಳ ಕುಣಿತ ನೋಡಲೆಂದು ಕಳ್ಳತನಕ್ಕೆ ಇಳಿಯುತ್ತಿದ್ದರು. ಕೈಗೆ ಸಿಕ್ಕಿದ್ದನ್ನು ಕದ್ದು, ಮಾರಾಟ ಮಾಡಿ ಶೋಕಿ ಜೀವನ ನಡೆಸುತ್ತಿದ್ದರು.
ಆದರೆ, ದರೊಡೆಗೆ ಹೊಂಚು ಹಾಕಿ ಕುಳಿತಿದ್ದವರಿಗೆ ಟೈಂ ಕೈಕೊಟ್ಟಿತ್ತು, ಈ ವೇಳೆ ಸಿಟಿ ಮಾರ್ಕೆಟ್ ಪೊಲೀಸರಿಗೆ ಸಿಕ್ಕಿ ಬಿದ್ದರು. ಮಾರಕಾಸ್ತ್ರಗಳ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಹಿಳೆಯರ ಶೋಕಿಗೆ ಹಲವು ಕೃತ್ಯಗಳನ್ನು ಎಸಗಿರುವುದು ತಿಳಿದು ಬಂದಿದೆ.
ಸಿಟಿ ಮಾರ್ಕೆಟ್, ಕಾಟನ್ ಪೇಟೆ, ಡಿಜೆ ಹಳ್ಳಿ ಸುತ್ತಮುತ್ತ ಬೈಕ್ ಕಳ್ಳತನ ಜತೆಗೆ ಬಸ್‌ಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದುದಾಗಿ ಹೇಳಿಕೊಂಡಿದ್ದಾರೆ. ಬಂಧಿತರಿಂದ ಆರು ಬೈಕ್, 9 ಮೊಬೈಲ್ ಫೋನ್ ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Car Theft | ಲೋನ್ ಕಟ್ಟಲಾಗದೇ ಕಾರು ಕಳ್ಳತನದ ಸುಳ್ಳು ದೂರು ಕೊಟ್ಟವ ಸೆರೆಮನೆ ಸೇರಿದ!