Site icon Vistara News

Theft Case: ಬೆಂಗಳೂರಲ್ಲಿ ತಡರಾತ್ರಿ ಕಳ್ಳನ ಕೈಚಳಕ; ಪೊಲೀಸರೆಂದು ವಿದೇಶಿ ಕರೆನ್ಸಿ ಎಗರಿಸಿದ ಖದೀಮರು

cctv footage

theft case

ಬೆಂಗಳೂರು: ಇಲ್ಲಿನ ಯಲಹಂಕ ನ್ಯೂಟೌನ್ ಸಮೀಪ ತಡರಾತ್ರಿ ಗಿರಿಯಾಸ್ ಶೋ ರೂಂಗೆ (Giriyas Show room) ನುಗ್ಗಿದ ಕಳ್ಳನೊಬ್ಬ (Theft Case) ಕನ್ನ ಹಾಕಿದ್ದಾನೆ. ತಡರಾತ್ರಿ ಮೂರು ಅಂಗಡಿಗಳನ್ನು ಟಾರ್ಗೆಟ್ ಮಾಡಿದ್ದ ವ್ಯಕ್ತಿ ಕ್ಷಣಾರ್ಧದಲ್ಲಿ ಹಣ ಲಪಟಾಯಿಸಿ ಪರಾರಿ ಆಗಿದ್ದಾನೆ.

ಕಳ್ಳನ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೊದಲಿಗೆ ಗಿರಿಯಾಸ್ ಶೋ ರೂಂ ಕೆಳಗಡೆಯೇ ಇದ್ದ ಚಿಕ್ಕಪೇಟೆ ಬಿರಿಯಾನಿ ಹೋಟೆಲ್‌ ಮೇಲೆ ಕಣ್ಣಿಟ್ಟಿದ್ದಾನೆ. ಹೋಟೆಲ್ ಗ್ಲಾಸ್ ಪುಡಿ ಮಾಡಿ ಕಳ್ಳತನಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾನೆ. ಆದರೆ, ಹೋಟೆಲ್ ಒಳಗಡೆ ಸಿಬ್ಬಂದಿ ಮಲಗಿದ್ದು ತಿಳಿದಿದೆ.

ಕಳ್ಳತನಕ್ಕೆ ಬಂದವನು ಹೋಟೆಲ್‌ನಲ್ಲಿ ಸಿಬ್ಬಂದಿ ಇರುವುದರಿಂದ ಹಿಂದೇಟು ಹಾಕಿದ ಕಳ್ಳ

ಹೀಗಾಗಿ ಹೋಟೆಲ್‌ ಕಳ್ಳತನಕ್ಕೆ ಹೋಗದೆ ಅದೇ ಬಿಲ್ಡಿಂಗ್‌ ಮೇಲಿದ್ದ ಗಿರಿಯಾಸ್ ಶೋ ರೂಮ್‌ನ ಗ್ಲಾಸ್ ಪುಡಿ ಮಾಡಿ ನಗದು ಕದ್ದಿದ್ದಾನೆ. ಗಿರಿಯಾಸ್ ಅಲ್ಲದೆ ಮತ್ತೊಂದು ಅಂಗಡಿಯಲ್ಲೂ ಕೈಚಳಕ ತೋರಿದ್ದಾನೆ.

ಗಿರಿಯಾಸ್‌ ಶೋ ರೂಮ್‌ನಲ್ಲಿ ಕಳ್ಳತನ

ಫುಟ್ ಮೇಟ್ ಎಂಬ ಚಪ್ಪಲಿ ಅಂಗಡಿಗೆ ನುಗ್ಗಿ ನಗದು ಮತ್ತು 20 ಸಾವಿರಕ್ಕೂ ಹೆಚ್ಚು ಮೌಲ್ಯದ ಚಪ್ಪಲಿಯನ್ನು ಕಳ್ಳತನ ಮಾಡಿದ್ದಾನೆ. ಸದ್ಯ ಈ ಸಂಬಂಧ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪೊಲೀಸರ ವೇಷ ಧರಿಸಿ ಬಂದ ಖದೀಮರು

ಪೊಲೀಸರೆಂದು ಹೇಳಿ ವಿದೇಶಿ ಪ್ರಜೆಯೊಬ್ಬರ ಬಳಿ ಹಣ ದೋಚಿ ಕಳ್ಳರು ಪರಾರಿ ಆಗಿದ್ದಾರೆ. ಮೆಡಿಕಲ್ ಟ್ರೀಟ್ಮೆಂಟ್‌ಗಾಗಿ ಯಮನ್‌ ದೇಶದಿಂದ ಭಾರತಕ್ಕೆ ಮಗೇದ್ ಸೈಫ್ ಮೋಕ್ಬೇಲ್ ಎಂಬುವವರು ಬಂದಿದ್ದರು. ಕಮ್ಮನಹಳ್ಳಿಯ ಎಂಪೈರ್ ಹೋಟೆಲ್‌ಗೆ ಹೋಗುವಾಗ ಇವರ ಕಾರನ್ನು ಅಪರಿಚಿತರು ತಡೆದಿದ್ದರು. ನಾವು ಪೊಲೀಸರು ನಿಮ್ಮ ಕಾರನ್ನು ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: Thieves arrested : ಕಳವು ಮಾಡಲು ಶಾಲೆಗೆ ನುಗ್ಗಿದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ನಿಜವಾದ ಪೊಲೀಸರೆಂದು ನಂಬಿದ್ದ ಯಮನ್‌ ಪ್ರಜೆ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ವೇಳೆ ವಿದೇಶಿ ಪ್ರಜೆಯ ಪಾಕೇಟ್‌ನಲ್ಲಿದ್ದ 5000 ಯುಎಸ್‌ಡಿ ಕರೆನ್ಸಿಯನ್ನು (4 ಲಕ್ಷ ರೂ.) ದೋಚಿದ್ದಾರೆ. ಬಿಳಿ ಬಣ್ಣದ ಕಾರಿನಲ್ಲಿ ಬಂದು ಲಕ್ಷ ಲಕ್ಷ ಕದ್ದು ಪರಾರಿ ಆಗಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Exit mobile version