ಬೆಂಗಳೂರು: ಕಳ್ಳನೊಬ್ಬ ಬುಡಬುಡಿಕೆ ವೇಷಧಾರಿಯಾಗಿ ಬಂದು ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣವನ್ನು (Fraud Case) ಕದ್ದಿರುವ ಪ್ರಕರಣವೊಂದು ಐಟಿಬಿಟಿ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಬುಡುಬುಡಿಕೆ ಭವಿಷ್ಯ ಹೇಳುವ ನೆಪದಲ್ಲಿ ಬಂದು ಅಮಾವಾಸ್ಯೆ ಬಳಿಕ ನಿನ್ನ ಗಂಡ ಹಾಗೂ ಮಗನಿಗೆ ಗಂಡಾಂತರ ಇದೆ. ಮನೆಯಲ್ಲಿ ಸಾವಾಗುತ್ತೆ ಎಂದು ಹೆದರಿಸಿ ಕಾಂತ ಎಂಬಾಕೆಗೆ ನಿಂಬೆಹಣ್ಣು ನೀಡಿ ಪ್ರಜ್ಞೆ ತಪ್ಪಿಸಿದ್ದಾನೆ. ಬಳಿಕ ಮೈ ಮೇಲಿದ್ದ ಒಡವೆಗಳನ್ನು ದೋಚಿ ಪರಾರಿಯಾಗಿದ್ದಾನೆ.
ಇದಕ್ಕೂ ಮುನ್ನ ಗಂಡಾಂತರ ಪರಿಹಾರಕ್ಕೆ 1,500 ಹಣವನ್ನು ಕೇಳಿದ್ದಾನೆ. ನಂತರ ನಿಂಬೆ ಹಣ್ಣು ತರಲು ಹೇಳಿ ಮಂತ್ರಿಸಿ ಕಾಂತಾಗೆ ನೀಡಿದ್ದಾನೆ. ಮೂರು ಸುತ್ತುವಂತೆ ಹೇಳಿದ್ದಾನೆ. ಸುತ್ತಿದ್ದಂತೆ ಕಾಂತ ಮೂರ್ಛೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ನಂತರ ಮನೆಯಲ್ಲಿದ್ದ ಒಡವೆ ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಒಡವೆ ದೋಚಿ ಪರಾರಿಯಾಗಿದ್ದಾನೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿವಿಧ ಪೊಲೀಸ್ ಠಾಣೆಯಲ್ಲಿ ಇದೇ ರೀತಿಯಾಗಿ ಸುಮಾರು ಎಂಟು ಪ್ರಕರಣಗಳು ದಾಖಲಾಗಿದೆ. ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Police Constable: ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ; ಕಿವಿಯಲ್ಲಿ ಹುಡುಕಿದ ENT ಡಾಕ್ಟರ್ಸ್!
ಹೆಚ್ಚಾಯ್ತು ಬೈಕ್ ಕಳ್ಳರ ಹಾವಳಿ
ಬೆಂಗಳೂರಿನಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದೆ. ಯಾರಿಗೂ ಅನುಮಾನ ಬಾರದಂತೆ ದ್ವಿಚಕ್ರ ವಾಹನ ಕದ್ದು ಕಳ್ಳರು ಪರಾರಿ ಆಗಿದ್ದಾರೆ. ಜಯನಗರ 4ನೇ ಹಂತದಲ್ಲಿ ಈ ಘಟನೆ ನಡೆದಿದ್ದು, ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.
ಟಾರ್ಪಲ್ ಕದ್ದ ಕಳ್ಳ
ಬೆಂಗಳೂರಿನಲ್ಲಿ ಚಿತ್ರ- ವಿಚಿತ್ರ ಕಳ್ಳರಿದ್ದು, ಗೂಡ್ಸ್ ಆಟೋದಲ್ಲಿ ಬಂದು ಟಾರ್ಪಲ್ ಕದ್ದಿದ್ದಾನೆ. ಲೋಡ್ ಗಟ್ಟಲೇ ಸಿಮೆಂಟ್ಗೆ ಮುಚ್ಚಿದ್ದ ಟಾರ್ಪಲ್ ಅನ್ನು ಕಳ್ಳತನ ಮಾಡುವ ದೃಶ್ಯ ಸಿಸಿಟಿಟಿಯಲ್ಲಿ ಸೆರೆಯಾಗಿದೆ. ಕದ್ದ ಟಾರ್ಪಲ್ನಲ್ಲೇ ಗಾಡಿ ನಂಬರ್ ಪ್ಲೇಟ್ ಕಾಣದಂತೆ ಮುಚ್ಚಿ ಪರಾರಿ ಆಗಿದ್ದಾನೆ. ನಾಗರಬಾವಿಯ ಮಾಳಗಾಳದಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, 19 ಸಾವಿರ ರೂ. ಮೌಲ್ಯದ ಟಾರ್ಪಲ್ ಕದ್ದಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ