ಕಲಬುರಗಿ: ಇಲ್ಲಿನ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಆರ್‌ಟಿಸಿ ಬಸ್ (Theft Case) ಅನ್ನು ಕಳ್ಳರ ಗುಂಪೊಂದು ಕಳ್ಳತನ ಮಾಡಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಚಾಲಾಕಿ ಕಳ್ಳರು ಬಸ್ ನಿಲ್ದಾಣದಲ್ಲಿದ್ದ ಬಸ್ ಅನ್ನೇ ಕದ್ದೊಯ್ದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೀದರ್ ಬಸ್ ಡಿಪೋ ನಂಬರ್ 2ಕ್ಕೆ ಸೇರಿದ ಸರ್ಕಾರಿ ಬಸ್ಸನ್ನು ನಸುಕಿನ ಜಾವ 3:30ರ ಸುಮಾರಿಗೆ ಕದ್ದು ಪರಾರಿ ಆಗಿದ್ದಾರೆ.
ಇದನ್ನೂ ಓದಿ: ಲಿವ್ ಇನ್ ಸಂಗಾತಿಯಿಂದ ದಾರುಣ ಅಂತ್ಯಕಂಡ 28ರ ಮಹಿಳೆ; ಪತಿಯನ್ನು ಬಿಟ್ಟು ಹೋಗಿದ್ದವಳು ಬೆಂಕಿಯಲ್ಲಿ ಬೆಂದು ಸಾವು
ಕಳ್ಳರು ಮಿರಿಯಾಣ ಮಾರ್ಗವಾಗಿ ತಾಂಡುರ ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿದ್ದಾರೆ. ಸದ್ಯ ಬಸ್ ಹುಡುಕಾಟದ ಸಲುವಾಗಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ತೆಲಂಗಾಣಕ್ಕೆ ಪೊಲೀಸರ ತಂಡ ತೆರಳಿದ್ದು, ಕಳ್ಳರಿಗೆ ಬಲೆ ಬೀಸಿದ್ದಾರೆ. ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ