Site icon Vistara News

Ration Card Apply : ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸೋಕೆ ನಗರ-ಹಳ್ಳಿಗರ ಬಳಿ ಕಡ್ಡಾಯವಾಗಿರಬೇಕು ಈ ದಾಖಲೆಗಳು!

Ration card and online application

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ (Annabhagya Scheme) ಅರ್ಹ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಇನ್ನು ಕೆಲವರು ಹೊಸ ಪಡಿತರ ಚೀಟಿಯನ್ನು (New Ration Card) ಪಡೆಯಲು ತಯಾರಿ ನಡೆಸಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರ ಸಹ ನೂತನ ಪಡಿತರ ಕಾರ್ಡ್‌ ವಿತರಣೆ ಮಾಡುವುದಾಗಿ ಘೋಷಿಸಿದೆ. ಶೀಘ್ರದಲ್ಲಿಯೇ ದಿನಾಂಕ ಘೋಷಣೆ ಮಾಡುವುದಾಗಿಯೂ ಹೇಳಿದೆ. ಅಲ್ಲದೆ, ರೇಷನ್ ಕಾರ್ಡ್ ತಿದ್ದುಪಡಿ (Ration card correction), ರದ್ದತಿ, ಸೇರ್ಪಡೆಗೆ ಅವಕಾಶವನ್ನು ಈ ವೇಳೆ ಕಲ್ಪಿಸಲಾಗುತ್ತದೆ. ಆದರೆ, ಇದಕ್ಕೆ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕೇ? ಅರ್ಜಿ ಸಲ್ಲಿಕೆ ಹೇಗೆ? (Ration Card Apply) ಅದಕ್ಕೆ ಗ್ರಾಮೀಣ ಪ್ರದೇಶದವರಾದರೆ ಯಾವ ದಾಖಲೆಯನ್ನು ಕೊಡಬೇಕು? ನಗರ ಪ್ರದೇಶದವರಿಗೆ ಯಾವ ಮಾಹಿತಿ, ದಾಖಲೆ ಇರಬೇಕು ಎಂಬಿತ್ಯಾದಿಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇನ್ನು ಅರ್ಜಿ ಸಲ್ಲಿಸುವವರು ಬಹುಮುಖ್ವಾಗಿ ಗಮನಿಸಬೇಕಾದ ಅಂಶವೆಂದರೆ, ಸ್ವಂತ ಕಾರನ್ನು ಹೊಂದಿರುವವರಿಗೆ ಬಿಪಿಎಲ್‌ ಕಾರ್ಡ್‌ ಲಭ್ಯವಾಗುವುದಿಲ್ಲ. ಆದರೆ, ಸ್ವಂತ ಯೆಲ್ಲೋ ಬೋರ್ಡ್‌ ಕಾರನ್ನು ಹೊಂದಿದ್ದರೆ ಅಂಥವರು ಬಿಪಿಎಲ್‌ ಕಾರ್ಡ್‌ ಅನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: BPL Card : ಸ್ವಂತ ಕಾರಿದೆಯಾ? ನಿಮಗೆ BPL ಕಾರ್ಡ್‌ ಇಲ್ಲ; ಯೆಲ್ಲೋ ಬೋರ್ಡ್‌ ಇದ್ದೋರು ಅಪ್ಲೈ ಮಾಡಿ!

ಎಲ್ಲಿ ಅರ್ಜಿ ಸಲ್ಲಿಸಬಹುದು? ಆನ್‌ಲೈನ್‌ ಮಾತ್ರ ಅವಕಾಶವೇ?

ನೂತನ ಪಡಿತರ ಚೀಟಿಯನ್ನು ಪಡೆಯಬೇಕೆಂದರೆ ಸರ್ಕಾರಿ ಕಚೇರಿಗೆ ಹೋಗಿಯೇ ಮಾಡಿಸಬೇಕಾ? ಅಥವಾ ಆನ್‌ಲೈನ್‌ ಮೂಲಕ ಸಲ್ಲಿಸಬೇಕಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಇಲ್ಲಿ ಮುಖ್ಯವಾದ ಮಾಹಿತಿ ಎಂದರೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಗೆ ಆನ್‌ಲೈನ್‌ ಮುಖಾಂತರ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದೆ. ಇಲ್ಲಿ ಯಾವುದೇ ಕೈಬರಹ ಅಥವಾ ಮುದ್ರಿತ ನಮೂನೆಯ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಹೊಸ ಪಡಿತರ ಚೀಟಿಗೆ ಅರ್ಜಿ ಎಲ್ಲಿ ದೊರೆಯುತ್ತದೆ?

ಈಗ ಹೊಸ ಪಡಿತರ ಚೀಟಿ ಪಡೆಯಲು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಕಡ್ಡಾಯವಾಗಿ ಆಯಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಲಭ್ಯವಿರುವ ಗಣಕೀಕರಣ ಕೇಂದ್ರದ ಮೂಲಕವೇ ಅರ್ಜಿ ಸಲ್ಲಿಸಬಹುದು. ಆದರೆ, ನಗರ ಹಾಗೂ ಪಟ್ಟಣ ಪ್ರದೇಶದವರು ಖಾಸಗಿ ಕಂಪ್ಯೂಟರ್ ವ್ಯವಸ್ಥೆ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲವೇ ಆಯಾ ಪ್ರದೇಶದ ತಾಲೂಕು ಕಚೇರಿ, ಆಹಾರ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಉಪ ನಿರ್ದೇಶಕರ ಕಚೇರಿಗಳಲ್ಲಿ ಆನ್‌ಲೈನ್‌ ಮೂಲಕ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಏನು ದಾಖಲೆ/ಮಾಹಿತಿ ಬೇಕು?

ಅರ್ಜಿ ಸಲ್ಲಿಸುವ ಮುನ್ನ ಅರ್ಜಿದಾರರ ಬಳಿ ಕೆಲವು ದಾಖಲೆಗಳು ಹಾಗೂ ಮಾಹಿತಿಗಳು ಇರಬೇಕಾಗುತ್ತದೆ. ಆದರೆ, ಅರ್ಜಿ ಸಲ್ಲಿಸುವಾಗ ಯಾವುದೇ ದಾಖಲೆಗಳ ಪ್ರತಿಗಳನ್ನು ನೀಡುವ ಅಗತ್ಯವಿಲ್ಲ.

ಗ್ರಾಮಾಂತರ ಪ್ರದೇಶದವರಲ್ಲಿ ಏನು ಬೇಕು?

ನಗರ/ಪಟ್ಟಣ ಪ್ರದೇಶದವರ ಬಳಿ ಇರಬೇಕಾದ ದಾಖಲೆ/ಮಾಹಿತಿ

ಇಲ್ಲಿ ಬಹುಮುಖ್ಯವಾದ ಸಂಗತಿಯೆಂದರೆ ಮೇಲೆ ಪಟ್ಟಿ ಮಾಡಿರುವ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಂಡಿದ್ದರೆ ಮಾತ್ರ ನೀವು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ಅಲ್ಲದೆ, ಈ ದಾಖಲೆಗಳನ್ನು ಕಚೇರಿಗೆ ಸಲ್ಲಿಸುವ ಅಗತ್ಯವಿಲ್ಲ. ಬದಲಾಗಿ, ನಿಮ್ಮ ಸ್ಥಳ ತನಿಖೆಗೆ ಅಧಿಕಾರಿಗಳು ಬಂದಾಗ ಇವುಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬೇಕಿದ್ದರೆ ನೀವು ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಇ-ಸರ್ವಿಸ್‌ (ಇ-ಸೇವೆ) ಮೇಲೆ ಕ್ಲಿಕ್‌ ಮಾಡಬೇಕು. ಇದರಲ್ಲಿ ಕೆಳಗಡೆ ನಿಮಗೆ ಇ-ಪಡಿತರ ಚೀಟಿ ಆಯ್ಕೆ ಕಾಣುತ್ತದೆ. ಅದರಲ್ಲಿ ಕೆಳಗಿನ ಬಾಣದ ಗುರುತಿನ ಮೇಲೆ ಕ್ಲಿಕ್‌ ಮಾಡಿದರೆ ಹೊಸ ಪಡಿತರ ಚೀಟಿ ಎಂಬ ಆಯ್ಕೆ ತೋರಿಸುತ್ತದೆ. ಅಲ್ಲಿ ಎಪಿಎಲ್‌ ಹಾಗೂ ಬಿಪಿಎಲ್‌ ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದ ಬಳಿಕ ಅಗತ್ಯ ದಾಖಲೆಗಳನ್ನು ನೀವು ಸಲ್ಲಿಸಬೇಕಾಗುತ್ತದೆ. ಆದರೆ, ಸದ್ಯಕ್ಕೆ ಮಾತ್ರ ಪಡಿತರ ನೋಂದಣಿ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೊಸ ಪಡಿತರ ಚೀಟಿ ಆಯ್ಕೆ ಮೇಲೆ ಕ್ಲಿಕ್‌ ಮಾಡಿದರೆ “ಹೊಸ ಪಡಿತರ ಚೀಟಿಗಾಗಿ ಅರ್ಜಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ” ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ: Compassionate Employment : ಸರ್ಕಾರಿ ನೌಕರಿಯಲ್ಲಿ ʼಅನುಕಂಪʼ ತೋರದ ಸರ್ಕಾರ! ನೇಮಕಾತಿಗೆ ತಡೆ

ಈ ಹಿನ್ನೆಲೆಯಲ್ಲಿ ಈ ದಾಖಲೆಗಳನ್ನು ಮೊದಲು ಸಂಗ್ರಹ ಮಾಡಿಕೊಳ್ಳುವುದು ಉತ್ತಮ. ಸರ್ಕಾರವು ಯಾವಾಗ ನೂತನ ಪಡಿತರ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆಯೋ ಆಗ ನೀವು ಪ್ರಯತ್ನಿಸಬಹುದಾಗಿದೆ.

Exit mobile version