Site icon Vistara News

Thief Case | ಮನೆಗೆ ನುಗ್ಗಿ ಕಳ್ಳತನ ಮಾಡುವಾಗಲೇ ಸಿಕ್ಕಿಬಿದ್ದ ಕಳ್ಳಿ; ಸಾರ್ವಜನಿಕರಿಂದ ಬಿತ್ತು ಧರ್ಮದೇಟು

ನೆಲಮಂಗಲ: ಇಲ್ಲಿನ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಿದರಕಲ್ಲು ಗ್ರಾಮದಲ್ಲಿ ಮನೆಗೆ ಕಳ್ಳಿಯರ (Thief Case) ಗ್ಯಾಂಗ್‌ ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಕವಿತಾ ಎಂಬುವವರ ಮನೆಗೆ ಹಗಲು ಹೊತ್ತಿನಲ್ಲಿ 6 ಜನರ ಕಳ್ಳಿಯರ ಗ್ಯಾಂಗ್ ನುಗ್ಗಿದ್ದು, ಪರ್ಸ್‌ನಲ್ಲಿದ್ದ ಹಣವನ್ನು ಎಗರಿಸಿದ್ದಾರೆ.

ಚಿಕ್ಕ ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಭಿಕ್ಷೆ ಬೇಡುವ ನೆಪದಲ್ಲಿ ಮನೆಯೊಳಗೆ ಬಂದಿದ್ದಾರೆ. ಯಾರೂ ಇಲ್ಲದ್ದನ್ನು ಕಂಡ ಕಳ್ಳಿಯರು ಕವಿತಾ ಅವರ ಪರ್ಸ್‌ನಲ್ಲಿ ಒಟ್ಟು 1,90,000 ಸಾವಿರ ರೂಪಾಯಿಯಲ್ಲಿ 50 ಸಾವಿರ ರೂಪಾಯಿಯನ್ನು ಕದ್ದಿದ್ದಾರೆ. ಕಳ್ಳತನ ಮಾಡಿ ಇನ್ನೇನು ಪರಾರಿ ಆಗಬೇಕು ಎನ್ನುವ ಹೊತ್ತಿಗೆ ಆರು ಕಳ್ಳಿಯರಲ್ಲಿ ಒಬ್ಬಳು ಸಿಕ್ಕಿಹಾಕಿಕೊಂಡಿದ್ದಾಳೆ. ಈ ಆರು ಜನರ ಗ್ಯಾಂಗ್ ಮಹಾರಾಷ್ಟ್ರದ ಪುಣೆ ಮೂಲದವರು ಎನ್ನಲಾಗಿದ್ದು, ಸಿಕ್ಕಿಬಿದ್ದ ಮಹಿಳೆಯನ್ನು ಸೋನು ಎಂದು ಗುರುತಿಸಲಾಗಿದೆ.

Thief Case

ಮನೆಯೊಡತಿ ಕವಿತಾ ಪಕ್ಕದ ಮನೆಗೆ ತೆರಳಿ ವಾಪಸಾಗುವಾಗ ಈ ಘಟನೆ ನಡೆದಿದೆ. ಮನೆಯೊಳಗಡೆಯಿಂದ ಪರ್ಸ್ ಎತ್ತಿಕೊಂಡು ಹೊರಗೆ ಬರುವಾಗ 6 ಜನರ ಪೈಕಿ ಸಿಕ್ಕಿ ಬಿದ್ದ ಒಬ್ಬ ಕಳ್ಳಿಗೆ ಸ್ಥಳೀಯರೆಲ್ಲ ಸೇರಿ ಧರ್ಮದೇಟು ನೀಡಿದ್ದಾರೆ. ಇನ್ನುಳಿದ ಕಳ್ಳಿಯರು ಓಡಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಕ್ಕ ಕಳ್ಳಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Thief Case | ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳ ಬೆಕ್ಕಿನಂತೆ ಬಂದರು; ಸಾರ್ವಜನಿಕರ ಕೈಯಲ್ಲಿ ಸಿಕ್ಕಿಬಿದ್ದರು

Exit mobile version