Site icon Vistara News

Thief Case: ಬೆಟ್ಟಿಂಗ್‌ ಚಟಕ್ಕೆ ಬಿದ್ದ ಮಣಪ್ಪುರಂ ಫೈನಾನ್ಸ್‌ ಮ್ಯಾನೇಜರ್‌; ಗ್ರಾಹಕರ ಚಿನ್ನ ಕದ್ದು ಪರಾರಿ

ಬೆಂಗಳೂರು: ಇಲ್ಲಿನ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ ಚಿನ್ನ ಕದ್ದಿದ್ದ (Thief Case) ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ದೇಶ್ ಬಂಧಿತ ಆರೋಪಿ.

ವಿಪರೀತ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಮ್ಯಾನೇಜರ್‌ ಸಿದ್ದೇಶ್‌ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದ. ಬೆಟ್ಟಿಂಗ್‌ಗಾಗಿ ಹಲವರ ಬಳಿ ಸಾಲ ಮಾಡಿಕೊಂಡಿದ್ದ, ಸಾಲಗಾರರ ಕಾಟ ಹೆಚ್ಚಾದಾಗ ಸಾಲ ತೀರಿಸಲು ಕಳ್ಳತನದ ದಾರಿ ತುಳಿದಿದ್ದ. ಇದಕ್ಕಾಗಿ ಫೈನಾನ್ಸ್‌ನಲ್ಲಿ ಗ್ರಾಹಕರೊಬ್ಬರು ಅಡಮಾನವಿರಿಸಿದ್ದ 40 ಗ್ರಾಂ ಚಿನ್ನದ ಸರವನ್ನು ಯಾರಿಗೂ ತಿಳಿಯದಂತೆ ಎಗರಿಸಿದ್ದ.

ಸಿಬ್ಬಂದಿ ಆಡಿಟಿಂಗ್ ವೇಳೆ ಚಿನ್ನದ ಸರ ನಾಪತ್ತೆಯಾಗಿರುವುದು ತಿಳಿದು ಬಂದಿತ್ತು. ಅದೇ ವೇಳೆ ಮ್ಯಾನೇಜರ್ ಆಗಿದ್ದ ಸಿದ್ದೇಶ್ ಕೆಲಸಕ್ಕೆ ಬಾರದೇ ತಲೆಮರೆಸಿಕೊಂಡಿದ್ದ. ಅನುಮಾನ ಬಂದು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ಮಾಲೀಕರು ದೂರು ನೀಡಿದ್ದರು. ತನಿಖೆ ನಡೆಸಿದಾಗ ಮ್ಯಾನೇಜರ್‌ ಸಿದ್ದೇಶ್‌ ಬಣ್ಣ ಬಯಲಾಗಿದೆ. ಬಂಧಿತನಿಂದ 1.45 ಲಕ್ಷ ಮೌಲ್ಯದ 40 ಗ್ರಾಂ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದರಾ ತೇಜಸ್ವಿ ಸೂರ್ಯ?-ಅಂದು ಜತೆಗಿದ್ದ ಬಿಜೆಪಿ ನಾಯಕ ಅಣ್ಣಾಮಲೈ ಹೇಳಿದ್ದೇನು?

Exit mobile version