Site icon Vistara News

Thieves arrested | ಬ್ಯಾಂಕ್‌ಗೆ ಕನ್ನ ಹಾಕಲು ರೆಡಿ ಇದ್ದವರನ್ನು ಹೆಡೆಮುರಿ ಕಟ್ಟಿದ ಖಾಕಿ ಪಡೆ

ಬೆಂಗಳೂರು: ಬ್ಯಾಂಕ್‌ವೊಂದಕ್ಕೆ ಕನ್ನ ಹಾಕಲು ಸಲಕರಣೆಗಳೊಂದಿಗೆ ಸಿದ್ಧವಾಗಿದ್ದವರನ್ನು (Thieves arrested) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕನ್ನ ಹಾಕುವ ಮುನ್ನವೇ ಭರತ್ ದಾಮಿ, ಮಂಗಲ್ ಸಿಂಗ್, ಕುಭೇರ ಬಹದ್ದೂರ್ ದಾಮಿ ಎಂಬುವವರು ಪೊಲೀಸರಿಂದ ಕೋಳ ಹಾಕಿಸಿಕೊಂಡವರು.

ಬಂಧಿತ ಶಂಕಿತರನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಗಳ ಒಂದೊಂದೇ ಮಿಸ್ಟರಿ ಬಯಲಿಗೆ ಬಂದಿದೆ. ಮನೆಗಳ್ಳತನ ಮಾಡುತ್ತಿದ್ದ ಬಂಧಿತ ಆರೋಪಿಗಳು ಹಲವು ವರ್ಷಗಳಿಂದ ತಲೆಮರೆಸಿಕೊಂಡಿರುವುದು ತಿಳಿದು ಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿ ಮನೆಗಳ್ಳತನ ಮಾಡುವುದು, ಬಳಿಕ ನೇಪಾಳಕ್ಕೆ ಹೋಗುವುದು ಇವರ ಇವರ ಕಾಯಂ ಕೆಲಸವಾಗಿತ್ತು.

ಗಸ್ತು ಪೊಲೀಸರ ಬಳಿ ಲಾಕ್‌ ಆದ ಕಳ್ಳರು
ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಆರೋಪಿಗಳ ನಡೆ ಅನುಮಾನವನ್ನು ಮೂಡಿಸಿತ್ತು. ಹೀಗಾಗಿ ಕೂಡಲೇ ಶಂಕಿತರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳ ಬಳಿ ಮನೆ ಬಾಗಿಲು ಒಡೆಯುವ ವಸ್ತುಗಳು ಪತ್ತೆ ಆಗಿದ್ದವು. ಬಳಿಕ ತೀವ್ರ ತನಿಖೆಗೆ ಒಳಪಡಿಸಿದಾಗ ಎಲ್ಲ ವಿಷಯ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳಿಗೆ ಸಂಬಂಧಿಸಿದಂತೆ ವಿವಿಧ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೈಸೂರಿನ ಸರಸ್ವತಿಪುರಂ, ರಾಜಗೋಪಾಲ ನಗರ, ನಂದಿನಿಲೇಔಟ್‌ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳ್ಳತನ ಮಾಡಿರುವುದು ಗೊತ್ತಾಗಿದೆ. ಬಾಣಸವಾಡಿ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಒಳಪಡಿಸಿದ್ದಾರೆ.

ಇದನ್ನೂ ಓದಿ | Heart attack | ಕೇವಲ 12 ವರ್ಷದ ಬಾಲಕ ಹೃದಯಾಘಾತದಿಂದ ಮೃತ್ಯು, ಮಲಗಿದ್ದಾಗಲೇ ಕಾಡಿತು ಎದೆ ನೋವು

Exit mobile version