Site icon Vistara News

‌Theft Case: ಪ್ರಿನ್ಸಿಪಾಲ್ ಮೊಬೈಲ್ ಕದ್ದು, ಯುಪಿಐ ಮೂಲಕ 1.40 ಲಕ್ಷ ದೋಚಿದ ಕಳ್ಳರು

Theft case

ಗದಗ: ಪ್ರಾಂಶುಪಾಲರ ಮೊಬೈಲ್ ಕದ್ದು, ಯುಪಿಐ ಮೂಲಕ 1.40 ಲಕ್ಷ ದೋಚಿರುವ (‌Theft Case) ಘಟನೆ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ. ಮೊಬೈಲ್ ಕದ್ದು, ಅದೇ‌ ಮೊಬೈಲ್‌ನಿಂದ ಲಕ್ಷಾಂತರ ರೂ.ಗಳನ್ನು ಚಾಲಾಕಿಗಳು ಎಗರಿಸಿದ್ದಾರೆ.

ಶ್ರೀಕಾಂತ ಕೃಷ್ಣಾಜಿ ಜೋಷಿ ಮೊಬೈಲ್‌ ಮತ್ತು ಹಣ ಕಳೆದುಕೊಂಡವರು. ನರಗುಂದ ಬಸ್ ನಿಲ್ದಾಣದಿಂದ ಬಸ್‌ ಹತ್ತಿ ಕಾಲೇಜಿಗೆ ತೆರಳುತ್ತಿದ್ದ ಪ್ರಿನ್ಸಿಪಾಲ್ ಬಳಿ ಕಳ್ಳರು ಮೊಬೈಲ್ ಕದ್ದಿದ್ದರು. ನಂತರ ಮೊಬೈಲ್‌ನಲ್ಲಿದ್ದ ಯುಪಿಐ ಆ್ಯಪ್‌ ಬಳಸಿ ಬರೋಬ್ಬರಿ 1.40 ಲಕ್ಷ ರೂ.ಗಳನ್ನು ಎಗರಿಸಿದ್ದಾರೆ.

ಮೊದಲು ಪ್ರಿನ್ಸಿಪಾಲ್ ಜೇಬಿನಲ್ಲಿದ್ದ ಇಪ್ಪತ್ತು ಸಾವಿರ ರೂ. ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದು, ನಂತರ ಮೊಬೈಲ್‌ನಿಂದ ಮೂರು ಹಂತಗಳಲ್ಲಿ 75 ಸಾವಿರ ರೂ., 50 ಸಾವಿರ ರೂ. ಹಾಗೂ 15 ಸಾವಿರ ಹೀಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ | Road Accident : ಸವಾರನ ತಲೆ ಅಪ್ಪಚ್ಚಿ ಮಾಡಿದ ಟಿಪ್ಪರ್‌ ಲಾರಿ; ಬರ್ತ್‌ ಡೇ ದಿನವೇ ಯುವಕರಿಬ್ಬರ ಡೆತ್‌ ಡೇ

ಆರೋಪಿಗಳನ್ನ ಪತ್ತೆ ಹಚ್ಚುವಂತೆ ಪ್ರಾಂಶುಪಾಲರು ದೂರು ನೀಡಿದ್ದು, ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತಿವೇಗ ತಂದ ಆಪತ್ತು; ಎದೆ ಝಲ್​ ಎನಿಸುವ ಟಿಪ್ಪರ್‌ ಲಾರಿ- ಕಾರು ಆ್ಯಕ್ಸಿಡೆಂಟ್‌

Car Accident in gadag

ಗದಗ : ನಗರದ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಟಿಪ್ಪರ್ ಲಾರಿ ಹಾಗೂ ಕಾರು ಮಧ್ಯೆ ಭೀಕರ ಅಪಘಾತ (Road Accident) ಸಂಭವಿಸಿದೆ. ಅಪಘಾತದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎದೆ ಝಲ್​ ಎನಿಸುತ್ತೆ. ಸರ್ಕಲ್ ಕ್ರಾಸ್ ಮಾಡುವಾಗ ಎರಡೂ ವಾಹನಗಳು ಅತೀ ವೇಗವಾಗಿ ಬಂದಿದ್ದೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಕಾರಿನಲ್ಲಿದ್ದ ನಾಲ್ವರ ಪೈಕಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಜನವರಿ 4 ರ ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಅಪಘಾತದ ಭೀಕರತೆಗೆ ಕಾರು ಪೂರ್ತಿ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಕಾರಲ್ಲಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ | Killer CEO: ಟಿಶ್ಯೂ ಪೇಪರ್‌ ಮೇಲೆ ಐ ಲೈನರ್‌ನಲ್ಲಿ ಹತ್ಯೆಯ ಸಂಚು ರೂಪಿಸಿದ್ದಳಾ ಸುಚನಾ ಸೇಠ್‌?

ಕಾರಿನಲ್ಲಿದ್ದವರು ಗದಗ ನಗರದ ದಾಸರ ಓಣಿ, ವಿಜಯನಗರ ಕಾಲೋನಿ ನಿವಾಸಿಗಳಾಗಿದ್ದಾರೆ. ಮಂಜುನಾಥ ಭಾಂಡಗೆ, ಸಂಜಿತ್ ಬೇವಿನಕಟ್ಟಿ, ರಾಘವೇಂದ್ರ ಕಟವಾಟೆ, ಕುಶಾಲ್ ಬೇವಿನಕಟ್ಟಿ ಗಾಯಾಳುಗಳು ತಿಳಿದು ಬಂದಿದೆ. ಸದ್ಯ ಶಿರಹಟ್ಟಿ ಮೂಲದ ಟಿಪ್ಪರ್ ಚಾಲಕ ಅನ್ನಪ್ಪ ಬಳ್ಳಾರಿ ಎಂಬುವವರ ಮೇಲೆ ಪ್ರಕರಣ‌ ದಾಖಲಾಗಿದೆ. ರಾತ್ರಿ ಬಿಂಕದಕಟ್ಟಿಯ ಡಾಬಾವೊಂದರಲ್ಲಿ ಊಟ ಮುಗಿಸಿ ಮರಳುವಾಗ ಘಟನೆ ನಡೆದಿದೆ. ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version