Site icon Vistara News

Thieves arrested : ಕಳವು ಮಾಡಲು ಶಾಲೆಗೆ ನುಗ್ಗಿದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

thieves who tried ot barge into school arrested near Dharmastala

thieves who tried ot barge into school arrested near Dharmastala

ಕಡಬ (ದಕ್ಷಿಣ ಕನ್ನಡ) : ಧರ್ಮಸ್ಥಳ ಠಾಣೆ ವ್ಯಾಪ್ತಿಯ ಶಾಲೆಯೊಂದರಿಂದ ಇನ್ವರ್ಟರ್ ಮತ್ತು ಕಂಪ್ಯೂಟರ್ ಕದಿಯಲು ಯತ್ನಿಸುತ್ತಿದ್ದ ವೇಳೆ ಕಳ್ಳರನ್ನು ಅಲ್ಲಿನ ಊರವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಧರ್ಮಸ್ಥಳ ಸಮೀಪದ ಪೆರ್ಲ ಬೈಪಾಡಿ ಬಂದಾರಿನ ಸರಕಾರಿ ಪ್ರೌಢಶಾಲೆಗೆ ರಾತ್ರಿ 12 ಗಂಟೆ ಸುಮಾರಿಗೆ 4 ಜನ ಕಳ್ಳರು ನುಗ್ಗಿರುವುದನ್ನು ಗಮನಿಸಿ ಸ್ಥಳೀಯರು ಶಾಲಾ ವಠಾರದಲ್ಲಿ ಒಟ್ಟು ಸೇರಿ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ ಎನ್ನಲಾಗಿದೆ. ಕಳ್ಳರನ್ನು ಹಿಡಿದು ಎಳೆದೊಯ್ಯುತ್ತಿರುವ ವಿಡಿಯೊ ವೈರಲ್ ಆಗಿದೆ.

ಈ ಕಳ್ಳರ ಗ್ಯಾಂಗ್ ಕಡಬ ಪರಿಸರದವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಹಿಂದೂ ಸಂಘಟನೆಯೊಂದರಲ್ಲಿ ಸಕ್ರಿಯರಾಗಿದ್ದವರು ಎಂದು ಹೇಳಲಾಗುತ್ತಿದೆ. ಕಡಬ ಪರಿಸರದಲ್ಲಿ ಈ ಹಿಂದೆ ಹಲವು ಮನೆ ಕಳ್ಳತನ, ಟಯರ್ ಕಳ್ಳತನ, ಬೀದಿ ಬದಿ ಸೋಲಾರ್ ಬ್ಯಾಟರಿ ಕಳ್ಳತನ ನಡೆದಿದ್ದು ಈ ತಂಡವೇ ಕೃತ್ಯಗಳನ್ನು ಮಾಡಿರಬಹುದೆಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಪೊಲೀಸರ ಸೂಕ್ತ ತನಿಖೆಯಿಂದ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ.

ಮನೆ ಕುಸಿದು ಮಹಿಳೆ, 24 ದಿನದ ಹಸುಗೂಸು ದುರ್ಮರಣ

ಕೊಪ್ಪಳ: ಮಳೆಯ ಪರಿಣಾಮವಾಗಿ ಮನೆಯೊಂದು ಕುಸಿದು (House collapse) ಮಹಿಳೆ ಹಾಗೂ 24 ದಿನದ ಹಸುಗೂಸು ಮೃತಪಟ್ಟ ದಾರುಣ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಜೀರಾಳ ಗ್ರಾಮದಲ್ಲಿ ನಡೆದಿದೆ.

ಸೋಮವಾರ ರಾತ್ರಿ ನಡೆದ ದುರಂತದಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿಗಳನ್ನು ಫಕೀರಮ್ಮ ಭೋವಿ (55) ಎಂದು ಗುರುತಿಸಲಾಗಿದೆ. 24 ದಿನದ ಹಸುಗೂಸು ಹೆಸರು ಇಡುವ ಮೊದಲೇ ಪ್ರಾಣ ಕಳೆದುಕೊಂಡಿದೆ. ಬಾಣಂತಿ ತಾಯಿ ಕನಕಮ್ಮಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆ ಕುಸಿದು ಮೃತಪಟ್ಟ ಮನೆ ಆವರಣದಲ್ಲಿ ರೋದನ

ಕನಕಮ್ಮ ಅವರು ಗರ್ಭಿಯಾಗಿ ಹೆರಿಗೆಗಾಗಿ ತವರು ಮನೆಗೆ ಬಂದಿದ್ದರು. ಹೆರಿಗೆಯಾಗಿ 24 ದಿನಗಳಷ್ಟೇ ಕಳೆದಿತ್ತು. ತಾಯಿ ಫಕೀರಮ್ಮ ಅವರು ಮಗಳ ಆರೈಕೆ ಮಾಡುತ್ತಿದ್ದರು.

ಇತ್ತೀಚೆಗೆ ಈ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಳೆಯಿಂದಾಗಿ ಮನೆಯ ಗೋಡೆ ಜರ್ಜರಿತವಾಗಿತ್ತು. ಸೋಮವಾರ ರಾತ್ರಿ ತಾಯಿ, ಮಗಳು ಮತ್ತು ಮೊಮ್ಮಗಳು ಮಲಗಿದ್ದ ವೇಳೆ ಗೋಡೆ ಉರುಳಿಬಿದ್ದಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿನ ಅಜ್ಜಿ ಮತ್ತು ಮೊಮ್ಮಗು ಮೃತಪಟ್ಟಿದೆ. ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದಾಗಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Fraud Case: ಜೈಲಿನಿಂದ ಹೊರಬಂದ ಯುವರಾಜ್‌ ಸ್ವಾಮಿ ವಿರುದ್ಧ ಮತ್ತೆರಡು ವಂಚನೆ ಕೇಸ್ ದಾಖಲು

Exit mobile version