Site icon Vistara News

Karnataka election 2023: ಈ ಬಾರಿ ಜನ ಬಲದಿಂದ ಗೆಲುವು: ಬೊಮ್ಮಾಯಿ

Karnataka election 2023 This time Jana Bala will win CM Basavaraja Bommai

ಬಳ್ಳಾರಿ: ಜನಬಲ ಮತ್ತು ಹಣಬಲದ ನಡುವೆ ಚುನಾವಣೆ (Karnataka election 2023) ನಡೆಯುತ್ತಿದೆ, ಯಾವಾಗಲೂ ಜನಬಲವೇ ಗೆದ್ದಿದೆ, ಈ ಬಾರಿಯೂ ಜನ ಬಲವೇ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶನಿವಾರ ಬಳ್ಳಾರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ರೋಡ್‌ ಶೋ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೀಸಲಾತಿಯ ಜೇನುಗೂಡಿಗೆ ಕೈ ಹಾಕಬೇಡಿ ಎಂದು ಕಾಂಗ್ರೆಸ್ ಹೇಳಿತ್ತು. ನಾನು ಉತ್ತರ ಕರ್ನಾಟಕದ ಗಂಡು ಆಗಿದ್ದರಿಂದ ನಾನು ಕೈ ಹಾಕಿದೆ ಎಂದರು.

ಕಾಂಗ್ರೆಸ್ ತಮ್ಮ ಸರ್ಕಾರ ಬಂದರೆ ಮೀಸಲಾತಿ ಹಿಂದಕ್ಕೆ ಪಡೆಯುತ್ತೇವೆ ಎನ್ನುತ್ತಾರೆ, ಇದಕ್ಕೆ ಜನರು ಬುದ್ಧಿ ಕಲಿಸುತ್ತಾರೆ. ಸಾಮಾಜಿಕ ನ್ಯಾಯ ಮುಟ್ಟಿದರೆ ಜನರು‌ ಸಹಿಸುವುದಿಲ್ಲ ಎಂದರು.

ಇದನ್ನೂ ಓದಿ: Karnataka Election : ಮೀಸಲಾತಿ ಪರಿಷ್ಕರಣೆ, ಒಳಮೀಸಲಾತಿ ಬಿಜೆಪಿಯ ಮಾಸ್ಟರ್‌ ಸ್ಟ್ರೋಕ್‌ ಎಂದ ಮುದ್ದಹನುಮೇಗೌಡ

ರಾಹುಲ್‌ ಗಾಂಧಿ ಆಶ್ವಾಸನೆ ಅಗತ್ಯ ಇಲ್ಲ

ಜೀನ್ಸ್ ಕ್ಯಾಪಿಟಲ್ ಮಾಡುತ್ತೇನೆ ಎಂದು ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ಅವರ ತಾಯಿ ಬಳ್ಳಾರಿಯಲ್ಲಿ ಗೆದ್ದು ಘೋಷಣೆ ಮಾಡಿದ 3 ಸಾವಿರ ಕೋಟಿ ಏನಾಯ್ತು? ಈಗಾಗಲೇ ಜೀನ್ಸ್ ಅಪರೆಲ್ ಪಾರ್ಕ್ ಮಾಡಲು ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದೇವೆ. ರಾಹುಲ್‌ ಗಾಂಧಿ ಆಶ್ವಾಸನೆ ಅಗತ್ಯ ಇಲ್ಲ ಎಂದರು.

ಸೋಮಶೇಖರರೆಡ್ಡಿಗೆ ಹನುಮಂತನ ಆಶೀರ್ವಾದವಿದೆ

ಸರ್ಕಾರ ಬಳ್ಳಾರಿ ಅಭಿವೃದ್ಧಿಗೆ ಕಂಕಣ ಬದ್ಧವಾಗಿದೆ. ಬಳ್ಳಾರಿ ನಗರದಲ್ಲಿ 16 ಸಾವಿರ ಜನರಿಗೆ ಪಟ್ಟ ಕೊಟ್ಟಿದೆ. ಈ ಚುನಾವಣೆಯಲ್ಲಿ ಕೆಲವರು ಗೆಲ್ಲಬೇಕೆಂದು ಸ್ಪರ್ಧಿಸಿದರೆ ಇನ್ನು ಕೆಲವರು ಸೋಲಿಸಬೇಕೆಂದು ಸ್ಪರ್ಧಿಸಿದ್ದಾರೆ. ಗೆಲ್ಲುವವರಿಗೆ ಜನರ ಆಶೀರ್ವಾದ ಇರಲಿ. ಸೋಮಶೇಖರ ರೆಡ್ಡಿ ಗೆ ಹನುಮಂತನ ಆಶೀರ್ವಾದವಿದೆ, ಅವರನ್ನು ಸೋಲಿಸಲು ಯಾರಿಂದಲೂ ಆಗಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: IPL 2023 : ಗುಜರಾತ್​ ಟೈಟನ್ಸ್ ತಂಡಕ್ಕೆ ಕೆಕೆಆರ್ ವಿರುದ್ಧ 7 ವಿಕೆಟ್​ ಸುಲಭ ಜಯ

ಮುಖ್ಯಮಂತ್ರಿಗಳು ರಾಯಲ್‌ ಸರ್ಕಲ್‌ನಿಂದ ಬೆಂಗಳೂರು ರಸ್ತೆಯ ಮೂಲಕ ಮೋತಿ ಸರ್ಕಲ್‌ವರೆಗೆ ರೋಡ್‌ ಶೋ ನಿರ್ಧಾರವಾಗಿತ್ತು. ಆದರೆ ಬ್ರೂಸ್‌ ಪೇಟೆ ಹತ್ತಿರದವರೆಗೆ ರೋಡ್‌ ಶೋ ಮಾಡಿ, ಅಲ್ಲಿಯೇ ಬಹಿರಂಗ ಭಾಷಣ ಮಾಡಿ ತಡವಾಗುತ್ತಿದೆ ಎಂದು ರೋಡ್‌ ಶೋವನ್ನು ಸಿಎಂ ಮೊಟಕುಗೊಳಿಸಿದರು.

ಈ ಸಂದರ್ಭದಲ್ಲಿ ಸಂಸದ ದೇವೇಂದ್ರಪ್ಪ, ಬಳ್ಳಾರಿ ನಗರ ಅಭ್ಯರ್ಥಿ ಜಿ.ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಿಗೌಡ, ಮುಖಂಡರಾದ ಗುತ್ತಿಗನೂರು ವಿರುಪಾಕ್ಷಗೌಡ, ಕೆ.ಎಂ.ಮಹೇಶ್ವರಸ್ವಾಮಿ ಸೇರಿದಂತೆ ಇತರರು ಇದ್ದರು.

Exit mobile version