Site icon Vistara News

Threatening Phone Calls | ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡಗೆ ಜೀವ ಬೆದರಿಕೆ

ಚಿಕ್ಕಮಗಳೂರು: ʻʻನಮ್ಮ ಕ್ಷೇತ್ರದ ಸಮಸ್ಯೆಯನ್ನು ಬಗೆಹರಿಸಿ ನನ್ನ ಜೀವ ಉಳಿಸಿ” ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾಧ್ಯಮದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನಿತ್ಯವೂ ದೂರವಾಣಿ ಕರೆ ಮೂಲಕ ಜೀವ ಬೆದರಿಕೆ (Threatening Phone Calls) ಬರುತ್ತಿರುವುದಾಗಿ ಶಾಸಕರು ಹೇಳಿಕೊಂಡಿದ್ದಾರೆ.

ಅರಣ್ಯ ಇಲಾಖೆ ಕಿರುಕುಳದಿಂದ ಮಲೆನಾಡಿನಲ್ಲಿ ನಕ್ಸಲ್ ಸಮಸ್ಯೆ ಹುಟ್ಟಿಕೊಂಡಿದೆ. ಕಿರುಕುಳಕ್ಕೆ ಬೇಸತ್ತು ರೈತರು ಕಂಗಾಲಾಗಿದ್ದಾರೆ. ಇದರಿಂದ ಮುಕ್ತಿ ಕೊಡಿಸಿ ಎಂದು ಹೇಳಿಕೊಂಡು ನನಗೆ ಜೀವ ಬೆದರಿಕೆ ಬರುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪತ್ರದ ಮೂಲಕ ಮೌಖಿಕವಾಗಿ, ದೂರವಾಣಿ ಕರೆಗಳ ಮೂಲಕ ಜೀವ ಬೆದರಿಕೆ ಬರುತ್ತಿದೆ. ಆದರೆ, ನಾನು ಈ ಸಂಬಂಧ ಯಾವುದೇ ದೂರು ನೀಡಲು ಹೋಗುವುದಿಲ್ಲ. ಕ್ಷೇತ್ರದ ಮತದಾರರಿಗೆ ನ್ಯಾಯ ಕೊಡಿಸಲು ಆಗದೇ ಇದ್ದರೆ ನಾವು ಇರುವುದಕ್ಕಿಂತ ಸಾಯುವುದೇ ಲೇಸು. ಸರ್ಕಾರ ನನ್ನ ಕ್ಷೇತ್ರದ ಜನರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದ್ದಾರೆ.

ಕುದುರೆಮುಖವನ್ನು ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಣೆ ಬಳಿಕ ಸಮಸ್ಯೆ ಹುಟ್ಟಿಕೊಂಡಿದೆ. ಅರಣ್ಯ ಇಲಾಖೆ ಅಲ್ಲಿಯ ಜನರ ಬದುಕನ್ನು ಕಸಿದುಕೊಂಡಿದೆ. ಶೃಂಗೇರಿ ಕ್ಷೇತ್ರದ ಕೆರೆಕಟ್ಟೆ ವ್ಯಾಪ್ತಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಿಂತ ವಂಚಿತರಾಗಿದ್ದಾರೆ. ತಲೆಮಾರುಗಳಿಂದ ಬಂದ ಜನರು ನಿತ್ಯನರಕ ಅನುಭವಿಸುತ್ತಿದ್ದಾರೆ. ಹಾಗಾಗಿ ನನಗೆ ಜೀವ ಬೆದರಿಕೆ ಬರುತ್ತಿವೆ. ಆದರೆ, ಯಾರು ಜೀವ ಬೆದರಿಕೆ ಹಾಕುತ್ತಿದ್ದಾರೆಂದು ಎಲ್ಲೂ ಬಹಿರಂಗ ಮಾಡುವುದಿಲ್ಲ. ಸರ್ಕಾರ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ | Rain News | ಶೃಂಗೇರಿ, ಆಗುಂಬೆ, ತೀರ್ಥಹಳ್ಳಿ ಹೆದ್ದಾರಿ ಕುಸಿತ; ಸಂಪರ್ಕ ಕಡಿತ

Exit mobile version