Site icon Vistara News

VISTARA TOP 10 NEWS: ಗ್ಯಾರಂಟಿ ಭಾರಕ್ಕೆ 3 ಇಲಾಖೆಗಳು ವಿಲೀನ, ಬೆಂಗಳೂರಲ್ಲಿ ಕೋಣಗಳ ದರ್ಬಾರ್​ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Top 10 news

1. ಗ್ಯಾರಂಟಿ ಹೊಡೆತ; ಮೂರು ಇಲಾಖೆಗಳ ವಿಲೀನ, 2000 ಉದ್ಯೋಗ ನಷ್ಟ!
ಬೆಂಗಳೂರು : ಗ್ಯಾರಂಟಿ ಯೋಜನೆಗಳ (Congress Guarantee)ಜಾರಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಈಗ ವಿವಿಧ ಇಲಾಖೆಗಳನ್ನು ವಿಲೀನಗೊಳಿಸಲು ಚಿಂತನೆ ನಡೆಸಿದೆ. ಇದರ ಮೊದಲ ಹಂತವಾಗಿ ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವ ಹಳೆಯ ಪ್ರಸ್ತಾವನೆಗೆ ಮತ್ತೆ ಚಾಲನೆ ನೀಡಲಾಗಿದೆ. ಈ ಕುರಿತು ಮುಂದಿನ ಸಚಿವ ಸಂಪುಟ ಉಪ ಸಮಿತಿ ಸಭೆಯು ಚರ್ಚೆ ನಡೆಸಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

2. ಕಾಂತರಾಜು ವರದಿ ಸ್ವೀಕರಿಸಿದರೆ ಡೇಂಜರ್‌; ಸರ್ಕಾರಕ್ಕೆ ಶಾಮನೂರು ಎಚ್ಚರಿಕೆ
ಬೆಂಗಳೂರು: ಜಾತಿಗಣತಿಗೆ (Caste Census) ಸಂಬಂಧಿಸಿ ಕಾಂತರಾಜು ವರದಿಯನ್ನು (Kantharaju report) ಸ್ವೀಕರಿಸಿದರೆ ಕಾಂಗ್ರೆಸ್‌ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ (Parliament Elections 2024) ಹಿನ್ನಡೆಯಾಗಲಿದೆ ಎಂದು ಹಿರಿಯ ವೀರಶೈವ ಲಿಂಗಾಯತ ನಾಯಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಎಚ್ಚರಿಸಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

3. ಸೋಮಣ್ಣ ಫೋನ್‌ ರಿಸೀವ್‌ ಮಾಡ್ತಿಲ್ಲ, ಇನ್ನೇನೂ ಮಾಡಕ್ಕಾಗಲ್ಲ ಎಂದ BSY
ಬೆಂಗಳೂರು : ಪಕ್ಷದಿಂದ ಅನ್ಯಾಯ ಆಗಿದೆ ಎಂದು ಹೇಳಿಕೊಳ್ಳುತ್ತಿರುವ ವಿ.ಸೋಮಣ್ಣ (V Somanna) ಅವರನ್ನು ಫೋನ್‌ನಲ್ಲಿ ಸಂಪರ್ಕಿಸಲು ಪ್ರಯತ್ನ ನಡೆಸುತ್ತಿದ್ದೇನೆ. ಅವರು ಫೋನ್‌ ರಿಸೀವ್‌ ಮಾಡುತ್ತಿಲ್ಲ. ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಬರಲಿಲ್ಲ ಅಂದರೆ ಏನು ಮಾಡಲು ಆಗುತ್ತದೆ?-ಹೀಗೆಂದು ಹೇಳಿದ್ದಾರೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ (BS Yediyurappa) ಅವರು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : V Somanna : ಅಮಿತ್‌ ಶಾ ಮನೆಗೇ ಬಂದು 2 ಕಡೆ ನಿಲ್ಲು ಅಂದ್ರೆ ಏನ್ಮಾಡೋದು?; ಶ್ರೀಗಳ ಮುಂದೆ ಸೋಮಣ್ಣ ಅಳಲು

4. ಪಂಚಭೂತಗಳಲ್ಲಿ ಲೀನರಾದ ಕ್ಯಾಪ್ಟನ್‌ ಪ್ರಾಂಜಲ್‌; ಮೊಳಗಿದ ಅಮರ್‌ ರಹೇ ಘೋಷಣೆ
ಆನೇಕಲ್‌: ಯುದ್ಧ ಭೂಮಿಯಲ್ಲಿ ವೀರ ಮರಣ ಹೊಂದಿದ ಕ್ಯಾಪ್ಟನ್‌ ಪ್ರಾಂಜಲ್‌ (Captain Pranjal) ಅವರು ಪಂಚಭೂತಗಳಲ್ಲಿ ಲೀನರಾದರು. ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅಮರ್‌ ರಹೇ.. ಅಮರ್ ರಹೇ ಎಂಬ ಸಹಸ್ರಾರು ಜನರ ಘೋಷಣೆಯೊಂದಿಗೆ ಅಂತಿಮ ಯಾತ್ರೆ ನಡೆಯಿತು. ಸೋಮಸುಂದರಪಾಳ್ಯ ಚಿತಾಗಾರದಲ್ಲಿ ಹುತಾತ್ಮ ಯೋಧನಿಗೆ ಬಾರದ ಮನಸ್ಸಲ್ಲೇ ಕುಟುಂಬಸ್ಥರು ಕಣ್ಣೀರ ವಿದಾಯ ನೀಡಿದರು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : Captain Pranjal: ವೀರಯೋಧ ಪ್ರಾಂಜಲ್‌ ಅಂತಿಮ ಯಾತ್ರೆ; ಕಣ್ಣೀರಿಟ್ಟ ಸಹಸ್ರಾರು ಮಂದಿ

5. ರಾಜಧಾನಿಯಲ್ಲಿ ಕೋಣಗಳ ರಾಜ ದರ್ಬಾರ್‌ ಹೇಗಿತ್ತು; ಚಿತ್ರಗಳಲ್ಲಿ ನೋಡಿ
ಬೆಂಗಳೂರು: ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳ ಬೆಂಗಳೂರಿನಲ್ಲೂ ಅದೇ ಖದರಿನೊಂದಿಗೆ ನಡೆಯುತ್ತಿದೆ. ಶನಿವಾರ ಬೆಳಗ್ಗೆ (ನವೆಂಬರ್‌ 25) ಆರಂಭಗೊಂಡಿರುವ ಬೆಂಗಳೂರು ಕಂಬಳ (Bangalore Kambala) ಭಾನುವಾರ ಸಂಜೆಯವರೆಗೂ ನಡೆಯಲಿದೆ. ಸುಮಾರು 158 ಜೋಡಿ ಕೋಣಗಳು ಭಾಗವಹಿಸಿದ ಈ ಕೂಟಕ್ಕೆ ಮುಂಜಾನೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ (Ashwini puneet Rajkumar), ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಚಾಲನೆ ನೀಡಿದರೆ, ಸಂಜೆ ಸಿಎಂ ಸಿದ್ದರಾಮಯ್ಯ (CM Siddaramaiah) ಅಧಿಕೃತವಾಗಿ ಉದ್ಘಾಟಿಸಿದರು. ಕರಾವಳಿಯ ಈ ಜಾನಪದ ಕ್ರೀಡೆಯನ್ನು ನೋಡಲು ಲಕ್ಷಾಂತ ಮಂದಿ ಆಗಮಿಸಿದ್ದಾರೆ. ಇಲ್ಲಿ ಕೋಣಗಳ ಓಟವಲ್ಲದೆ, ಸಾಂಸ್ಕೃತಿಕ ವೈಭವ, ಆಹಾರ ಮೇಳ, ಕರಾವಳಿಯ ಸಂಸ್ಕೃತಿಯ ಪ್ರತಿಬಿಂಬಗಳ ವಸ್ತುಪ್ರದರ್ಶನ ಸೇರಿದಂತೆ ಹಲವು ಅಚ್ಚರಿಗಳು ಇದ್ದವು. ಅವುಗಳ ಒಂದು ಝಲಕ್‌ ಇಲ್ಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : Bangalore Kambala : ಒಂದು ಕೋಣ ಸಾಕೋಕೆ 15 ಲಕ್ಷಾನಾ? ಅಬ್ಬಾ ಎಂದ ಸಿದ್ದರಾಮಯ್ಯ

6. ಬೆಂಗಳೂರಿನಲ್ಲಿ ತೇಜಸ್‌ ಯುದ್ಧ ವಿಮಾನದಲ್ಲಿ ಹಾರಾಡಿದ ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಇಂದು ಬೆಂಗಳೂರಿನಲ್ಲಿ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌ನಲ್ಲಿ (Light Combat Aircraft Tejas) ಹಾರಾಟ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಶನಿವಾರ ಭೇಟಿ ನೀಡಿ, ಅದರ ಉತ್ಪಾದನಾ ಘಟಕದಲ್ಲಿ ನಡೆಯುತ್ತಿರುವ ಕೆಲಸವನ್ನು ಪರಿಶೀಲಿಸಿದರು. ನಂತರ ತೇಜಸ್‌ನಲ್ಲಿ ಕುಳಿತು ಒಂದು ರೌಂಡ್‌ ಹಾರಾಟ ನಡೆಸಿದರು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

7. ಟಿಇಟಿ ಫಲಿತಾಂಶ; ಶಿಕ್ಷಕರಾಗಲು 64,830 ಅಭ್ಯರ್ಥಿಗಳು ಅರ್ಹ
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2023ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶವನ್ನು ಪ್ರಕಟಿಸಿದ್ದು, ಟಿಇಟಿ ಪತ್ರಿಕೆ 1 ಮತ್ತು 2 (KARTET Result 2023) ಪರೀಕ್ಷೆಗೆ ಹಾಜರಾದ ಒಟ್ಟು 3.01 ಲಕ್ಷ ಅಭ್ಯರ್ಥಿಗಳ ಪೈಕಿ 64,830 ಅಭ್ಯರ್ಥಿಗಳು ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

8. ನಾಲ್ಕು ಅಪರೂಪದ ಕಾಯಿಲೆಗಳಿಗೆ ಸ್ವದೇಶಿ ಔಷಧ ಆವಿಷ್ಕಾರ; 100 ಪಟ್ಟು ಇಳಿಯಲಿದೆ ಚಿಕಿತ್ಸೆ ವೆಚ್ಚ!
ನವದೆಹಲಿ: ಭಾರತೀಯ ಔಷಧೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ನಾಲ್ಕು ಅಪರೂಪದ ಕಾಯಿಲೆಗಳಿಗೆ ಸ್ವದೇಶಿ ಔಷಧಗಳನ್ನು (Made in India) ಭಾರತ ಆವಿಷ್ಕರಿಸಿದೆ. ಇವುಗಳಿಂದಾಗಿ ಮುಂದಿನ ದಿನಗಳಲ್ಲಿ ಈ ಕಾಯಿಲೆಗಳ ಚಿಕಿತ್ಸೆಯ ವೆಚ್ಚ 100 ಪಟ್ಟು ಇಳಿಯಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

9. ಕಂಡಕ್ಟರ್‌ಗೆ ಚಾಕು ಇರಿದು ‘ಪ್ರವಾದಿ ಮೊಹಮ್ಮದ್‌’ಗೆ ಅವಮಾನ ಎಂದ ಮುಸ್ಲಿಂ ಯುವಕನಿಗೆ ಗುಂಡೇಟು!
ಲಖನೌ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮುಸ್ಲಿಂ ಯುವಕನೊಬ್ಬ ಚಲಿಸುತ್ತಿದ್ದ ಬಸ್‌ನಲ್ಲಿಯೇ ಕಂಡಕ್ಟರ್‌ಗೆ ಚಾಕು (Cleaver) ಇರಿದ ಘಟನೆ ನಡೆದಿದೆ. ಬಸ್‌ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಬಸ್‌ ಕಂಡಕ್ಟರ್‌ ಹಾಗೂ 20 ವರ್ಷದ ಯುವಕನ ಮಧ್ಯೆ ವಾಗ್ವಾದ ನಡೆದಿದೆ. ಇದೇ ವೇಳೆ ಯುವಕ ಲಾರೆಬ್‌ ಹಶ್ಮಿ (Lareb Hashmi) ಎಂಬಾತನು ಕಂಡಕ್ಟರ್‌ಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಆತನ ಕಾಲಿಗೆ ಗುಂಡೇಟು ಕೊಟ್ಟು ಬಂಧಿಸಿದ್ದಾರೆ. ಸದ್ಯ ಕಂಡಕ್ಟರ್‌ ಹಾಗೂ ಲಾರೆಬ್‌ ಹಶ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

10. ಸಂಗಾತಿಗಾಗಿ 2000 ಕಿ.ಮೀ ಸಂಚರಿಸಿದ ರಾಯಲ್ ಬೆಂಗಾಲ್ ಟೈಗರ್! ಈ ಹುಲಿ ಹೋಗಿದ್ದೆಲ್ಲಿಗೆ?
ಭುವನೇಶ್ವರ, ಒಡಿಶಾ: ಸ್ಥಿರ ವಾಸಸ್ಥಾನ (suitable territory) ಮತ್ತು ಸೂಕ್ತ ಸಂಗಾತಿಗಾಗಿ (potential mate) ಪ್ರಾಣಿಗಳು ಎಂಥದ್ದೇ ಸಾಹಸಕ್ಕೂ ಮುಂದಾಗುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. ರಾಯಲ್ ಬೆಂಗಾಲ್ ಹುಲಿಯೊಂದು (Royal Bengal Tiger) ತನಗೆ ಸರಿಹೊಂದು ವಾಸಸ್ಥಾನ ಮತ್ತು ಸಂಗಾತಿಗೆ ಸುಮಾರು 2 ಸಾವಿರ ಕಿ.ಮೀ ಸಂಚರಿಸಿದೆ. ಹೌದು, ಮಹಾರಾಷ್ಟ್ರದ (Maharashtra) ತಡೋಬಾದಿಂದ ಗಂಡು ರಾಯಲ್ ಬೆಂಗಾಲ್ ಹುಲಿಯು ಕಳೆದ ಐದು ತಿಂಗಳುಗಳಲ್ಲಿ, ನಾಲ್ಕು ರಾಜ್ಯಗಳನ್ನು ಹಾಯ್ದು ಒಡಿಶಾ (Odisha) ಕಾಡಿಗೆ ಬಂದಿಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಇನ್ನಷ್ಟು ವೈರಲ್​ ಸುದ್ದಿಗಾಗಿ ಕ್ಲಿಕ್ ಮಾಡಿ.

Exit mobile version