Site icon Vistara News

ನಾವು ಹೋಗುತ್ತಿದ್ದೇವೆ ಕ್ಷಮಿಸಿ, ಹಾಸ್ಟೆಲ್‌ ಕಿಟಕಿ ಮುರಿದು ಮೂವರು ವಿದ್ಯಾರ್ಥಿನಿಯರು ಎಸ್ಕೇಪ್

ವಿದ್ಯಾರ್ಥಿನಿಯರು

ಮಂಗಳೂರು: “ನಾವು ಹೋಗುತ್ತಿದ್ದೇವೆ, ಕ್ಷಮಿಸಿ” ಎಂದು ಕಾಗದದ ಮೇಲೆ ಬರೆದಿಟ್ಟು ನಗರದ ಖಾಸಗಿ ಕಾಲೇಜಿನ ಹಾಸ್ಟೆಲ್‌ನಿಂದ ಮೂವರು ವಿದ್ಯಾರ್ಥಿನಿಯರು ಪರಾರಿಯಾಗಿದ್ದಾರೆ.

ಬೆಂಗಳೂರಿನ ಇಬ್ಬರು ಹಾಗೂ ಚಿತ್ರದುರ್ಗದ ಒಬ್ಬ ವಿದ್ಯಾರ್ಥಿನಿ ಸೇರಿ ಮೂವರು ಬುಧವಾರ ಬೆಳಗ್ಗೆ 3 ಗಂಟೆಗೆ ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ಹೊರಗೆ ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿನಿಯರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಕಾಲೇಜು ಅಥವಾ ಹಾಸ್ಟೆಲ್‌ನಲ್ಲಿ ಏನಾದರೂ ಕಿರುಕುಳದಿಂದ ವಿದ್ಯಾರ್ಥಿನಿಯರು ಪರಾರಿಯಾದರೇ ಅಥವಾ ಬೇರೆ ಕಾರಣದಿಂದ ಹಾಸ್ಟೆಲ್‌ ತೊರೆದರೇ ಎಂಬ ಮಾಹಿತಿ ಪೊಲೀಸರ ತನಿಖೆ ನಂತರ ತಿಳಿಯಬೇಕಿದೆ.

ಇದನ್ನೂ ಓದಿ | Kidnapping case | ನರ್ಸ್‌ ರೂಪದಲ್ಲಿ ಬಂದು ಶಿಶು ಕದ್ದಳು; ಮೂರೇ ಗಂಟೆಯಲ್ಲಿ ಸೆರೆಯಾದಳು

Exit mobile version