Site icon Vistara News

Students Missing | ಮೂವರು ಹೈಸ್ಕೂಲ್‌ ವಿದ್ಯಾರ್ಥಿನಿಯರು 9 ದಿನಗಳಿಂದ ನಾಪತ್ತೆ: ಪೋಷಕರಿಂದ ಪ್ರತಿಭಟನೆ, ಪತ್ರದಲ್ಲೇನಿತ್ತು?

student missing case

ಬೆಂಗಳೂರು: ಸಿಲಿಕಾನ್‌ ಸಿಟಿಯ ಪ್ರಾಮನೆಡ್ ರಸ್ತೆಯಲ್ಲಿರುವ ಸೆಂಟ್‌ ಜೋಸೆಫ್‌ ಕಾನ್ವೆಂಟ್‌ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ಮೂವರು ಬಾಲಕಿಯರು ಸೆ.6ರಂದು ಕಾಣೆಯಾಗಿದ್ದಾರೆ (Students Missing Case). ಅವರು ನಾಪತ್ತೆಯಾಗಿ 9 ದಿನವಾದರೂ ಬಾಲಕಿಯರು ಇನ್ನೂ ಪತ್ತೆಯಾಗಿಲ್ಲ. ಅವರನ್ನು ಪತ್ತೆ ಮಾಡಿಕೊಡಿ ಎಂದು ಒತ್ತಾಯಿಸಿ ಹೆತ್ತವರು ಪ್ರತಿಭಟನೆ ನಡೆಸುತ್ತಿದ್ದಾರೆ.

9ನೇ ತರಗತಿಯಲ್ಲಿ ಕಲಿಯುತ್ತಿರುವ ಶಕ್ತೀಶ್ವರಿ (15), 10ನೇ ತರಗತಿಯಲ್ಲಿರುವ ವರುಣಿಕ (16), 9ನೇ ತರಗತಿ ವಿದ್ಯಾರ್ಥಿನಿ ನಂದಿನಿ (15) ಕಾಣೆಯಾಗಿಯಾಗಿರುವ ವಿದ್ಯಾರ್ಥಿನಿಯರಾಗಿದ್ದಾರೆ. ಪೋಷಕರು ಎಷ್ಟೇ ಹುಡುಕಿದರೂ ಬಾಲಕಿಯರು ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ | Students Missing case | ಸರ್ಕಾರಿ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ; ಪೋಷಕರಲ್ಲಿ ಆತಂಕ

ʻಮನೆಯಲ್ಲಿ ಸಮಸ್ಯೆ ಮತ್ತು ಓದಲು ಇಷ್ಟವಿಲ್ಲ. ಹಾಗಾಗಿ ಮನೆ ಬಿಟ್ಟು ಹೋಗುತ್ತಿದ್ದೇವೆʼ ಎಂದು ಬಾಲಕಿಯರು ಪತ್ರ ಬರೆದಿಟ್ಟಿದ್ದಾರೆ ಎನ್ನಲಾಗಿದೆ.

ಮಕ್ಕಳ ಪೋಷಕರಿಂದ ಪ್ರತಿಭಟನೆ
ವರುಣಿಕ ಮತ್ತು ನಂದಿನಿ ಸೆಂಟ್ ಜೋಸೆಫ್ ಕಾನ್ವೆಂಟ್ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಶಕ್ತೀಶ್ವರಿ ಮನೆಯಿಂದಲೇ ಶಾಲೆಗೆ ಬಂದು ಹೋಗುತ್ತಿದ್ದಳು. ಮಕ್ಕಳ ಬಗ್ಗೆ ಪೋಷಕರು ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಕೇಳಿದರೆ ʻʻನೀವು ಸ್ಲಂನವರು ಹಾಗೂ ಜೋಪಡಿಯವರು. ಅವರು ಮೂವರು ಬಾಯ್‌ ಫ್ರೆಂಡ್ಸ್‌ ಜತೆಗೆ ಹೋಗಿದ್ದಾರೆʼʼ ಎಂದು ನಿಂದಿಸುತ್ತಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಇದೀಗ ಶಾಲೆ ಎದುರು ಮೂವರು ಮಕ್ಕಳ ಪೋಷಕರಿಂದ ಪ್ರತಿಭಟನೆ ನಡೆಯುತ್ತಿದೆ. ಪೋಷಕರಿಂದ ಪುಲಕೇಶಿ ನಗರ ಠಾಣೆಯಲ್ಲಿ ದೂರು ದಾಖಲುಗೊಂಡಿದೆ.

Exit mobile version