Site icon Vistara News

Drowned in Reservoir: ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಇಬ್ಬರು ಯುವತಿಯರು ಸೇರಿ ಮೂವರ ಸಾವು

Three including two young women Drowned in Reservoir at Srinivasa Sagar

ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಈಜಲು ಹೋದ ಸಂದರ್ಭದಲ್ಲಿ ಇಬ್ಬರು ಯುವತಿರು ಸೇರಿ ಒಬ್ಬ ಯುವಕ ಮುಳುಗಿ (Drowned in Reservoir) ಮೃತಪಟ್ಟಿದ್ದಾರೆ.

ಪೂಜಾ ಹಾಗೂ ರಾಧಿಕಾ

ಮೃತರೆಲ್ಲರೂ ಬೆಂಗಳೂರು ಮೂಲದವರಾಗಿದ್ದು, ಡಿ ಫಾರ್ಮಸಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ರಾಧಿಕಾ, ಪೂಜಾ ಹಾಗೂ ಇಮ್ರಾನ್ ಮೃತರು. ಇವರ ಶವಕ್ಕಾಗಿ ಶೋಧ ನಡೆಸಲಾಗಿದೆ. ಈ ವೇಳೆ ಪೂಜಾಳು ಸಿಕ್ಕಿದ್ದು, ಸ್ಥಿತಿ ಚಿಂತಾಜನಕವಾಗಿತ್ತು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಬದುಕುಳಿಯಲಿಲ್ಲ.

ಇಮ್ರಾನ್‌

ಬೆಂಗಳೂರಿನಿಂದ ಶ್ರೀನಿವಾಸ ಸಾಗರ ಜಲಾಶಯಕ್ಕೆ ಆರು ಜನರ ತಂಡವು ಪ್ರವಾಸಕ್ಕಾಗಿ ಬಂದಿತ್ತು. ವೀಕೆಂಡ್‌ ಇದ್ದಿದ್ದರಿಂದ ಮೋಜು ಮಸ್ತಿ ಮಾಡಲು ಬಂದಿದ್ದರು ಎನ್ನಲಾಗಿದೆ. ಈ ವೇಳೆ ಜಲಾಶಯದಲ್ಲಿ ಇಳಿದಿದ್ದಾರೆ. ಇವರಲ್ಲಿ ಒಬ್ಬರಿಗೆ ನೀರಿನಲ್ಲಿ ಕಾಲು ಜಾರಿದೆ. ಆಗ ಒಬರನ್ನೊಬ್ಬರು ಮೇಲೆತ್ತಲು ಹೋಗಿ ಈ ಅವಘಡ ಸಂಭವಿದೆ. ಚನ್ನಾರಾಮ್, ಸುನಿತಾ, ಬಿಕಾಷ್ ಬಚಾವಾಗಿದ್ದಾರೆ. ಇವರೆಲ್ಲರು ಬೆಂಗಳೂರಿನ‌ ಸಾರಾಯಿ ಪಾಳ್ಯದ ನಿವಾಸಿಗಳು ಎಂದು ತಿಳಿದುಬಂದಿದೆ.

ಈ ಮೂವರು ಮುಳುಗುತ್ತಿದ್ದಂತೆ ಗಾಬರಿಗೊಂಡ ಉಳಿದ ಮೂವರು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Karnataka Election 2023: ವರುಣದಲ್ಲಿ ಯತೀಂದ್ರ ಆ್ಯಕ್ಟಿವ್‌; ಹೋಬಳಿ ಮಟ್ಟದಲ್ಲಿ ರಣತಂತ್ರ, ಸಿಕ್ಕಿದೆ ಲಿಂಗಾಯತರ ಬೆಂಬಲ

ಬಳಿಕ ಮುಳುಗು ತಜ್ಞರು ಸಹಿತ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗಿದೆ. ಈ ವೇಳೆ ಪೂಜಾ ಎನ್ನುವ ಯುವತಿ ಸಿಕ್ಕಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ. ಉಳಿದಂತೆ ರಾಧಿಕಾ ಮೃತದೇಹ ಸಿಕ್ಕಿದ್ದು, ಇಮ್ರಾನ್‌ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಯುವತಿ ಸ್ನಾನ ಮಾಡುವಾಗ ಮತ್ತೊಬ್ಬ ಯುವತಿಯಿಂದ ವಿಡಿಯೊ ಚಿತ್ರೀಕರಣ, ದೂರು

ಬೆಂಗಳೂರು: ಕ್ರೀಡಾ ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದ ಪಂಜಾಬಿ ಆಟಗಾರ್ತಿಯ ವಿಡಿಯೊ ಮಾಡಿದ ಹಿನ್ನೆಲೆಯಲ್ಲಿ ಮತ್ತೊಬ್ಬ ಯುವತಿಯ ಮೇಲೆ ದೂರು ದಾಖಲಿಸಲಾಗಿದೆ.

ಸಾಯ್ ಸ್ಪೋರ್ಟ್ಸ್ ಇಂಡಿಯಾದಲ್ಲಿ ಟೆಕ್ವಾಂಡೋ ಆಟದ ತರಬೇತಿಗಾಗಿ ನಗರಕ್ಕೆ ಬಂದ ಪಂಜಾಬಿನ ಯುವತಿ ಇಲ್ಲಿನ ಹಾಸ್ಟೆಲ್‌ನಲ್ಲಿ ನೆಲೆಸಿದ್ದರು. ಅದೇ ಹಾಸ್ಟೆಲ್‌ನಲ್ಲಿದ್ದ ಮತ್ತೊಬ್ಬ ವಾಲಿಬಾಲ್ ಆಟಗಾರ್ತಿಯು ಈ ಪಂಜಾಬಿ ಕ್ರೀಡಾಪಟು ಸ್ನಾನ ಮಾಡುವ ವೇಳೆ ಕದ್ದು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಳು.

ಈ ವೇಳೆ ಅನುಮಾನಗೊಂಡು ಪಕ್ಕದ ಬಾತ್ ರೂಂನಲ್ಲಿದ್ದ ಯುವತಿಯನ್ನು ಪಂಜಾಬಿ ಕ್ರೀಡಾಪಟು ಪ್ರಶ್ನಿಸಿದಾಗ, ವಾಲಿಬಾಲ್ ಆಟಗಾರ್ತಿ ತಪ್ಪೊಪ್ಪಿಕೊಳ್ಳದೆ ತನ್ನ ಮೊಬೈಲ್ ಅನ್ನು ಒಡೆದು ಹಾಕಿದ್ದಳು. ಈ ಹಿನ್ನೆಲೆಯಲ್ಲಿ ಪಂಜಾಬಿ ಆಟಗಾರ್ತಿ ದೂರು ದಾಖಲಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೊಬೈಲ್‌ನಲ್ಲಿ ಸ್ಟೇಟಸ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ

ನೆಲ್ಯಾಡಿ: ಯುವಕನೊಬ್ಬ ಮೊಬೈಲ್‌ನಲ್ಲಿ ಸ್ಟೇಟಸ್ (Whatsapp status) ಹಾಕಿ ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಚ್ಲಂಪಾಡಿ ಗ್ರಾಮದಲ್ಲಿ ಮಾರ್ಚ್‌ 30ರ ಮಧ್ಯರಾತ್ರಿ ನಡೆದಿದೆ.

ಇಚ್ಲಂಪಾಡಿ ಗ್ರಾಮದ ಮೊಂಟೆತ್ತಡ್ಕ ನಿವಾಸಿ ರೆನೀಶ್ (27) ಮೃತ ಯುವಕ. ಈತನ ತಂದೆ ಕೆಲವು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈತನ ಸಹೋದರ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ರೆನೀಶ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ವಿದ್ಯುತ್ ಲೈನ್‌ಮನ್‌ ಕೆಲಸಕ್ಕೆ ಹೋಗುತ್ತಿದ್ದ. ಮಾ.30ರಂದು ರಾತ್ರಿ ಪಕ್ಕದ ಉಣ್ಣಿಕೃಷ್ಣನ್ ನಾಯರ್ ಎಂಬವರ ಮನೆಯಲ್ಲಿ ಊಟ ಮಾಡಿ, ಕೇರಂ ಆಡಿ ಮನೆಗೆ ಹೋಗಿದ್ದ.

ಇದನ್ನೂ ಓದಿ: Karnataka Elections : ಟಿಕೆಟ್‌ ಅತೃಪ್ತಿ ಸ್ಫೋಟ: ರಣಾಂಗಣವಾದ ಚಿಕ್ಕಮಗಳೂರು ಕಾಂಗ್ರೆಸ್‌ ಕಾರ್ಯಕರ್ತರ ಸಭೆ

ಮಧ್ಯರಾತ್ರಿ 12 ಗಂಟೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಮೊಬೈಲ್‌ನಲ್ಲಿ ಸ್ಟೇಟಸ್ ಬರೆದುಕೊಂಡು ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದ. ಈತನ ಸ್ಟೇಟಸ್ ನೋಡಿದ್ದ ಬೆಂಗಳೂರಿನಲ್ಲಿರುವ ಗೆಳೆಯರು ಉಣ್ಣಿಕೃಷ್ಣನ್‌ರವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಅವರೂ ರೆನೀಶ್ ಮನೆಗೆ ತಲುಪುವುದರೊಳಗೆ ಆತ ಮರಕ್ಕೆ ನೇಣುಬಿಗಿದುಕೊಂಡಿದ್ದ. ತಕ್ಷಣ ಹಗ್ಗ ಬಿಚ್ಚಿ ಪುತ್ತೂರಿನ ಆಸ್ಪತ್ರೆಗೆ ಕರೆ ತರಲಾಯಿತಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ.

Exit mobile version