Site icon Vistara News

Tiger Attack | ಗುಂಡ್ಲುಪೇಟೆ ಸುತ್ತಮುತ್ತ ಹುಲಿ ಹಾವಳಿ; ಜಾನುವಾರುಗಳು ಬಲಿ, ಜನರಲ್ಲಿ ಹೆಚ್ಚಿದ ಆತಂಕ

Tiger

ಚಾಮರಾಜನಗರ: ರಾಜ್ಯಾದ್ಯಂತ ಚಿರತೆ ಹಾವಳಿ ಭಾರಿ ಆತಂಕವನ್ನು ಹುಟ್ಟುಹಾಕಿರುವ ಬೆನ್ನಲ್ಲೇ ಗುಂಡ್ಲುಪೇಟೆ ತಾಲೂಕಿನ ಹಲವು ಕಡೆ ಹುಲಿಗಳ ಹಾವಳಿ, ದಾಳಿ (Tiger Attack) ಹೆಚ್ಚಾಗಿದೆ. ಹಲವು ಗ್ರಾಮಗಳಲ್ಲಿ ಜಾನುವಾರುಗಳನ್ನು ಬಲಿ ತೆಗೆದುಕೊಂಡಿದ್ದು, ಜನರಲ್ಲಿ ಭೀತಿ ಹೆಚ್ಚಾಗಿದೆ. ಹೊರಗಡೆ ಸಂಚರಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಅರಣ್ಯ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

ಶೀಲವಂತಪುರ, ಕೊಡಸೋಗೆ, ದೇಪಲಾಪುರ ವ್ಯಾಪ್ತಿಯಲ್ಲಿ ಹುಲಿಗಳು ಬೀಡುಬಿಟ್ಟಿವೆ ಎಂದು ಹೇಳಲಾಗಿದೆ. ಈ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಜನರಿಗೆ ಈಗ ತೀವ್ರ ಆತಂಕ ಎದುರಾಗಿದೆ. ವಾರದ ಹಿಂದೆ ಕೊಡಸೋಗೆ ಗ್ರಾಮದ ಮುಸುಕಿನ ಜೋಳ ಗದ್ದೆಯಲ್ಲಿ ಹಂದಿಯೊಂದನ್ನು ಹುಲಿಗಳು ಬೇಟೆಯಾಡಿದ್ದವು.

ಶೀಲವಂತಪುರದಲ್ಲಿ ಈಚೆಗೆ ರಾತ್ರಿ ಹಸುವೊಂದನ್ನು ಹುಲಿಯು ಬಲಿ ಪಡೆದುಕೊಂಡಿದೆ. ಮರಿಯೊಂದಿಗೆ ಹುಲಿ ಸಂಚರಿಸುತ್ತಿದೆ ಎನ್ನಲಾಗಿದೆ. ಹುಲಿಗಳ ಭಯದಿಂದ ಮನೆಯಿಂದ ಹೊರಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಕಾಡಿನಲ್ಲಿದ್ದು, ರಾತ್ರಿಯಾಗುತ್ತಿದ್ದಂತೆ ಗ್ರಾಮಕ್ಕೆ ಲಗ್ಗೆ ಇಡುತ್ತಿವೆ.

ಅರಣ್ಯ ಇಲಾಖೆ ಬಗ್ಗೆ ಆಕ್ರೋಶ
ಹುಲಿಗಳು ನಿರಂತರ ದಾಳಿ ನಡೆಸಿ ಜಾನುವಾರುಗಳು, ಕಾಡುಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದು ಗಮನಕ್ಕೆ ಬಂದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಹುಲಿಗಳ ಸೆರೆ ಕಾರ್ಯಾಚರಣೆ ಮಾಡಲು ಜನರ ಪ್ರಾಣವೇ ಹೋಗಬೇಕೇ ಎಂದೂ ಸಹ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಅರಣ್ಯ ಇಲಾಖೆಯನ್ನು ಪ್ರಶ್ನೆ ಮಾಡಿದರೆ ಹುಲಿಯನ್ನು ಓಡಿಸಿದ್ದೇವೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಜನರು ಆಕ್ರೋಶವನ್ನು ಹೊರಹಾಕಿದ್ದಾರೆ. ಮೃತ ಜಾನುವಾರುಗಳಿಗೆ ಪರಿಹಾರ ನೀಡುವುದಷ್ಟೇ ಅರಣ್ಯ ಇಲಾಖೆಯ ಕೆಲಸವಾಗಿದೆ ಎಂದು ಗ್ರಾಮಸ್ಥರು ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ | Kiccha Sudeep | ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಟ ಕಿಚ್ಚ ಸುದೀಪ್ ದಂಪತಿ ಭೇಟಿ

Exit mobile version