ಮೈಸೂರು: ಸತತ ಚಿರತೆ ದಾಳಿಯಿಂದ ಕಂಗಲಾಗಿದ್ದ ಜನರಿಗೆ ಇದೀಗ ಹುಲಿಯ (Tiger Attack) ಭಯ ಎದುರಾಗಿದೆ. ಇಲ್ಲಿನ ಎಚ್.ಡಿ.ಕೋಟೆ ತಾಲೂಕಿನ ಕೆ.ಹೆಡತೊರೆ ಗ್ರಾಮದ ಜಮೀನಿನಲ್ಲಿ ಹುಲಿ ಹೆಜ್ಜೆ ಪತ್ತೆ ಆಗಿದ್ದು, ಹುಲಿ ಓಡಾಟದ ಸುದ್ದಿ ಕೇಳಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಕೆ.ಯಡತೊರೆ ಗ್ರಾಮಕ್ಕೆ ಹೊಂದಿಕೊಂಡ ಜಮೀನಿನಲ್ಲಿ ಹುಲಿಯ ಚಲನವಲನ ಕಂಡು ಬಂದಿದ್ದು, ಕೃಷಿ ಚಟುವಟಿಕೆಗೆ ಜಮೀನಿಗೆ ತೆರಳಲು ರೈತರು ಭಯಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಹೆಜ್ಜೆ ಗುರುತು ಆಧರಿಸಿ ಹುಲಿಯ ಚಲನವಲನವನ್ನು ಸಿಬ್ಬಂದಿ ಗಮನಿಸುತ್ತಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನಿಂದ 5 ಕಿ.ಮೀ. ಅಂತರದಲ್ಲಿರುವ ಕೆ.ಯಡತೊರೆ ಗ್ರಾಮದಲ್ಲಿ ಸಿಬ್ಬಂದಿ ಬೀಡುಬಿಟ್ಟಿದ್ದು, ಹುಲಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಮೂರು ದಿನಗಳ ಹಿಂದೆ ಎಚ್.ಡಿ.ಕೋಟೆ ಪಟ್ಟಣದ ಜಮೀನಿನಲ್ಲಿ ಹುಲಿಯೊಂದು ಪ್ರತ್ಯಕ್ಷಗೊಂಡಿತ್ತು.
ಇದನ್ನೂ ಓದಿ | Anganawadi Workers protest | ಕೊರೆವ ಚಳಿಯಲ್ಲೂ ಅಹೋರಾತ್ರಿ ಪ್ರತಿಭಟನೆ; ಕುಸಿದುಬಿದ್ದ ಅಂಗನವಾಡಿ ಕಾರ್ಯಕರ್ತೆ