Site icon Vistara News

Tiger, leopard died: ಕೆರೆಗೆ ಬಿದ್ದು ಹುಲಿ, ಉರುಳಿಗೆ ಸಿಲುಕಿ‌ ಚಿರತೆ ಸಾವು

Tiger, leopard die

#image_title

ಚಾಮರಾಜನಗರ/ಚಿಕ್ಕಮಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹುಲಿ ಹಾಗೂ ಚಿರತೆ ಮೃತಪಟ್ಟಿರುವುದು ಕಂಡುಬಂದಿದೆ. ಗುಂಡ್ಲುಪೇಟೆ ತಾಲೂಕಿನ ಕೆರೆಯೊಂದರಲ್ಲಿ ಹುಲಿ ಮೃತದೇಹ ಪತ್ತೆಯಾಗಿದ್ದು, ಮೂಡಿಗೆರೆ ಬಳಿ ಉರುಳಿಗೆ ಸಿಲುಕಿ‌ ಚಿರತೆ ಕೊನೆಯುಸಿರೆಳೆದಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಹೊರವಲಯದ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ಬಂಡೀಪುರ ಅರಣ್ಯದ ಕುಂದಕೆರೆ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೆರೆಯಲ್ಲಿ ದನಗಳಿಗೆ ನೀರು ಕುಡಿಸಲು ರೈತರೊಬ್ಬರು ಹೋಗಿದ್ದಾಗ ಕೊಳೆತ ಸ್ಥಿತಿಯಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ.

ಇದನ್ನೂ ಓದಿ | Street dog attack : ಬಳ್ಳಾರಿ ನಗರದಲ್ಲಿ ಏಕಾಏಕಿ ಬೀದಿ ನಾಯಿಗಳ ದಾಳಿ; ಮಹಿಳೆ, ಮಕ್ಕಳು ಸೇರಿ ಏಳು ಮಂದಿ ಆಸ್ಪತ್ರೆಗೆ

ವಿಷಯ ತಿಳಿದು ಅರಣ್ಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಲವು ದಿನಗಳಿಂದ ಜಮೀನುಗಳಲ್ಲಿ ಈ ಹುಲಿ ಕಾಣಿಸಿಕೊಳ್ಳುತ್ತು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಹುಲಿ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹೊರವಲಯ ಬಿಳಗುಳ ಬಳಿ ಉರುಳಿಗೆ ಸಿಲುಕಿ‌ ಚಿರತೆ ಮೃತಪಟ್ಟಿದೆ. ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಲ್ಲಿ ಬೈಲ್ ಬಳಿಕ ಪಾಳು ಬಿದ್ದಿದ್ದ ತೋಟದಲ್ಲಿ ಕಾಡುಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಚಿರತೆ ಬಲಿಯಾಗಿದೆ. ಸೋಮವಾರ ರಾತ್ರಿ ಸ್ಥಳಕ್ಕೆ ಅರಣ್ಯ ಇಬ್ಬಂದಿ ಭೇಟಿ ನೀಡಿ ಚಿರತೆಯನ್ನು ರಕ್ಷಣೆ ಮಾಡಲು ಯತ್ನಿಸಿದರು. ಆದರೆ, ಪ್ರಯೋಜನವಾಗಿಲ್ಲ.

Exit mobile version