ಮೈಸೂರು: ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿಯೊಂದು ಲಂಗೂರ್ ಕೋತಿಯನ್ನು ಬೇಟೆಯಾಡಿ ತಿನ್ನುತ್ತಿರುವ ದೃಶ್ಯ (Tiger Sighting) ಗೋಚರವಾಗಿದೆ.
ಈ ಅಪರೂಪದ ದೃಶ್ಯ ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯದ ದಮ್ಮನಕಟ್ಟೆ ರೇಂಜಿನ ಗೋಪಾಲಗುಡಿ ಕೆರೆಯ ಬಳಿ ನಿನ್ನೆ ಸಂಜೆ ಕಂಡಿದೆ. ಸಂಜೆ ಸಫಾರಿಗೆ (Nagarahole safari) ತೆರಳಿದ್ದ ಪ್ರವಾಸಿಗರಿಗೆ ಹುಲಿಯು ಲಂಗೂರ್ ಅನ್ನು ಬೇಟೆಯಾಡಿ ತಿನ್ನುತ್ತಿರುವ ದೃಶ್ಯ ಕಂಡುಬಂತು.
ಮುತ್ತುರಾಜು ಎಂಬವರ ಕ್ಯಾಮೆರಾಗೆ ಈ ದೃಶ್ಯ ಸೆರೆ ಸಿಕ್ಕಿದ್ದು, ಪ್ರವಾಸಿಗರು ಈ ದೃಶ್ಯ ಕಂಡು ಪುಳಕಿತಗೊಂಡರು. ಸಾಮಾನ್ಯವಾಗಿ ಕಾಡಿನ ರಾಜ ಹುಲಿಯ ನೋಟವೇ ದುರ್ಲಭವಾಗಿದ್ದು, ಅದರಲ್ಲೂ ಅದು ಬೇಟೆಯಾಡುವ ದೃಶ್ಯವಂತೂ ಇನ್ನೂ ದುರ್ಲಭವಾಗಿದೆ.
ಇತ್ತೀಚೆಗೆ ನಾಗರಹೊಳೆ ಸುತ್ತಮುತ್ತ ಚೆನ್ನಾಗಿ ಮಳೆಯಾಗಿರುವುದರಿಂದ ಕಾಡಿನ ನೀರಿನ ಮೂಲಗಳು ತುಂಬಿಕೊಂಡಿವೆ. ರಸ್ತೆ ಬದಿಯಲ್ಲಿ ಸಾಕಷ್ಟು ಹುಲ್ಲು ಬೆಳೆದಿದ್ದು, ಇದನ್ನು ಮೇಯಲು ಜಿಂಕೆ ಮುಂತಾದ ಪ್ರಾಣಿಗಳು ರಸ್ತೆಬದಿಗೆ ಬರುತ್ತಿವೆ. ಇವುಗಳನ್ನು ಬೇಟೆಯಾಡಲು ಹುಲಿಗಳು ಆಗಮಿಸುತ್ತವೆ.
ಇದನ್ನೂ ಓದಿ: Viral Video : ಹುಲಿ ಬೇಟೆಯನ್ನು ಕದಿಯಲು ನೋಡಿದ ಹೆಣ್ಣು ಹುಲಿ! ಮುಂದೇನಾಯ್ತು?