Site icon Vistara News

Book Release: ಟಿಎನ್‌ ಸೀತಾರಾಮ್‌ ʼನೆನಪಿನ ಪುಟಗಳುʼ ಕೃತಿ ಭಾನುವಾರ ಬಿಡುಗಡೆ

tn seetharam book

ಬೆಂಗಳೂರು: ನಿರ್ದೇಶಕ, ನಟ, ನಾಟಕಕಾರ, ಕತೆಗಾರ ಟಿ.ಎನ್‌ ಸೀತಾರಾಮ್‌ (TN Seetharam) ಅವರ ಆತ್ಮಕತೆ ʼನೆನಪಿನ ಪುಟಗಳುʼ ಡಿಸೆಂಬರ್‌ 10ರಂದು ಭಾನುವಾರ ಲೋಕಾರ್ಪಣೆ (Book Release) ಆಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯಮಂತ್ರಿ ಚಂದ್ರು, ಕವಿ ಎಚ್‌ಎಲ್‌ ಪುಷ್ಪ, ಪತ್ರಕರ್ತರಾದ ರವಿ ಹೆಗಡೆ, ಜೋಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಐಎಂ ವಿಠ್ಠಲಮೂರ್ತಿ, ಹಂಸಲೇಖ, ಸುಭಾಷ್‌ ಭರಣಿ ಮೊದಲ ಪ್ರತಿ ಸ್ವೀಕರಿಸಲಿದ್ದಾರೆ.

ಬೆಂಗಳೂರಿನ ಪ್ಯಾಲೇಸ್‌ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಪುಸ್ತಕವನ್ನು ಬೆಂಗಳೂರಿನ ʼಸಾವಣ್ಣ ಪ್ರಕಾಶನʼ ಪ್ರಕಟಿಸಿದೆ. ʼ

ಪುಸ್ತಕದ ಬಗ್ಗೆ ಟಿ.ಎನ್‌ ಸೀತಾರಾಮ್‌ ಹೀಗೆ ಬರೆದುಕೊಂಡಿದ್ದಾರೆ:

“ಸುಖ ಕೊಡುವ ಬದುಕು ಸುಂದರ; ಕಷ್ಟ ಕೊಡುವ ಬದುಕು ಬೆಳಕಿನಂತೆ. ಇವೆರಡನ್ನೂ ನಾನು ತೀವ್ರವಾಗಿ ಅನುಭವಿಸಿಕೊಂಡು ಬಂದವನು.

ಬದುಕಿನ ನೆನಪುಗಳನ್ನು ಹಂಚಿಕೊಂಡಾಗ ಒಂದು ಬಗೆಯ ಒಳಗಿನ ಅಸ್ಪಷ್ಟ ಸರಳುಗಳಿಂದ ಮುಕ್ತಿ ಪಡೆಯುತ್ತಾ ನಿರಾಳ ವಾಗುವ ಸುಖವನ್ನು ಅನೇಕ ಬಾರಿ ಕಂಡಿದ್ದೇನೆ. ಈ ನೆನಪುಗಳನ್ನು ಕಥೆಯಾಗಿ, ಧಾರಾವಾಹಿಯ ದೃಶ್ಯಗಳಾಗಿ, ಹತ್ತಿರದವರ ಜತೆ ಮೆಲು ಮಾತಿನಲ್ಲಿ ಹೇಳುವ ನುಡಿಗಳಾಗಿ, ಫೇಸ್ಬುಕ್‌ನ ಕಿರು ಬರಹಗಳಾಗಿ, ಹೇಳಲಾಗದ ಮುಖದ ಭಾವಗಳಾಗಿ, ನಾಟಕದ ಪಾತ್ರವಾಗಿ ಹಂಚಿಕೊಂಡಾಗಲೆಲ್ಲ ನಿರಾಳ ಭಾವದ ಸುಖ ನನಗೆ ಸಿಕ್ಕಿದೆ.

ಇದನ್ನು ಅರಿತ ಅನೇಕ ಮಿತ್ರರು ನಾನು ಒಂದು ಆತ್ಮಕಥೆ ಬರೆಯಬೇಕೆಂದು ಒತ್ತಾಯಿಸತೊಡಗಿದರು. ಫೇಸ್ಬುಕ್‌ನಲ್ಲಿ ಸುಖ, ಕಷ್ಟ ಎರಡರ ನೆಪುಗಳೂ ಬರೆದಾಗ ಅವಕ್ಕೆ ಸ್ಪಂದಿಸಿದ ನಿಮ್ಮಂಥ ನೂರಾರು ಮಿತ್ರರು ಇಂಥವನ್ನೆಲ್ಲಾ ಪುಸ್ತಕ ರೂಪದಲ್ಲಿ ತರಲು ಪ್ರೀತಿಯ ಒತ್ತಡ ಹಾಕಿದ್ದೀರಿ. ಇದೆಲ್ಲದರ ಫಲ ಈ ಪುಸ್ತಕ. ನೆನಪಿನ ಪುಟಗಳು.

ಇದಕ್ಕೆ ಆತ್ಮಕಥೆ ಎಂಬ ದೊಡ್ಡ ಪದ ಉಪಯೋಗಿಸಲಾರೆ. ನನ್ನ ಬದುಕು ನನಗೆ ಕಲಿಸಿರಬಹುದಾದ ಪಾಠಗಳನ್ನು ಅರಿತುಕೊಳ್ಳಲು, ಅಸ್ಪಷ್ಟಗಳಿಗೆ ಸ್ಪಷ್ಟತೆ ಪಡೆಯಲು ಇದನ್ನು ಬರೆಯುತ್ತಿದ್ದೇನೆ. ನೆನಪುಗಳು ಬದುಕನ್ನು ಮತ್ತೊಮ್ಮೆ ಬದುಕುವ ಸುಂದರ ಅನುಭವ ಕೊಡುತ್ತದೆ. ಇದರ ಫಲ ಈ ಪುಸ್ತಕ.”

ಇದನ್ನೂ ಓದಿ: Narendra Modi: ಪಪುವಾ ನ್ಯೂಗಿನಿಯಾದಲ್ಲಿ ತಮಿಳಿನ ತಿರುಕ್ಕುರಳ್‌ ಕೃತಿ ಬಿಡುಗಡೆ ಮಾಡಿದ ಮೋದಿ

Exit mobile version