Site icon Vistara News

TNIT Media Award : ವಿಸ್ತಾರ ನ್ಯೂಸ್​​ಗೆ ಟಿಎನ್​ಐಟಿ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್ಸ್​​ನ 3 ಪ್ರಶಸ್ತಿಗಳ ಗರಿ

TNIT Media Awards

ಬೆಂಗಳೂರು : ಕನ್ನಡ ಸುದ್ದಿ ಮಾಧ್ಯಮಗಳ ಪೈಕಿ ತನ್ನದ್ದೇ ರೀತಿಯಲ್ಲಿ ಛಾಪು ಮೂಡಿಸಿರುವ ವಿಸ್ತಾರ ನ್ಯೂಸ್‌, ದಿ ನ್ಯೂ ಇಂಡಿಯನ್​ ಟೈಮ್ಸ್ ನೀಡುವ ಟಿಎನ್​ಐಟಿ ಸೌತ್​ ಇಂಡಿಯಾ ಮೀಡಿಯಾ ಅವಾರ್ಡ್​​​ನ (TNIT Media Award) ಮೂರು ವಿಭಾಗದಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಶನಿವಾರ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್​​ನ ಪ್ರಶಸ್ತಿ ವಿಜೇತರು ಪ್ರಶಸ್ತಿ ಸ್ವೀಕರಿಸಿದರು.

ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ‌ ಕಳೆದ 7 ವರ್ಷಗಳಿಂದ ಪತ್ರಕರ್ತರನ್ನು ಗುರುತಿಸಿ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ. ಅಂತೆಯೇ ವಿಸ್ತಾರ ನ್ಯೂಸ್‌ನ ಸಿಒಒ ಡಿ‌ ಪರಶುರಾಮಪ್ಪ ಅವರಿಗೆ ‘ಬೆಸ್ಟ್ ಎಡಿಟೋರಿಯಲ್ ಪ್ರಶಸ್ತಿ’, ನಿರೂಪಕ ವಾಸುದೇವ್ ಮಾರ್ನಾಡ್ ಅವರಿಗೆ ‘ಬೆಸ್ಟ್ ಪ್ರಾಮಿಸಿಂಗ್ ಫೇಸ್ ಪ್ರಶಸ್ತಿ’ ಹಾಗೂ ಮೆಟ್ರೋ ಬ್ಯೂರೋ ಮುಖ್ಯಸ್ಥ ಬಿ ವಿ ಅಭಿಷೇಕ್ ಅವರಿಗೆ ‘ಬೆಸ್ಟ್ ಮೆಟ್ರೋ ರಿಪೋರ್ಟರ್’ ಪ್ರಶಸ್ತಿ ನೀಡಿ ಗೌರವಿಸಿದೆ.

ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೇ ನಮ್ಮನ್ನಗಲಿದೆ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ಅವರಿಗೆ ಮರೆಯಲಾರದ ನಿರೂಪಕಿ ಎಂಬ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅವರ ಪತಿ ನಾಗರಾಜ್ ವಸ್ತಾರೆ ಆ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಿನಿ ಲೋಕದ ಗಣ್ಯರಾದ ನೆನಪಿರಲಿ ಪ್ರೇಮ್, ಅನಿರುದ್, ವಿಜಯ ರಾಘವೇಂದ್ರ, ತಾರಾ ಅನುರಾಧ, ಮಾಲಾಶ್ರೀ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು. ಶತಾಯುಷಿ ಸಾಲು ಮರದ ತಿಮ್ಮಕ್ಕ ಕೂಡ ಈ ಸಮಾರಂಭದಲ್ಲಿ ಪಾಲ್ಗೊಂಡು ಸ್ಪೂರ್ತಿ ತುಂಬಿದರು.

ವಿಸ್ತಾರ ನ್ಯೂಸ್​ನ ಸಿಒಒ ಡಿ‌ ಪರಶುರಾಮಪ್ಪ ಅವರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ವಿಸ್ತಾರ ನ್ಯೂಸ್​ಗೆ ಗೌರವ ನೀಡಿದ್ದಕ್ಕೆ ಧನ್ಯವಾದಗಳು. ಈ ಪ್ರಶಸ್ತಿ ನಮ್ಮ ತಂಡಕ್ಕೆ ಸಲ್ಲಬೇಕಾಗಿರುವುದು. ಇದು ಎಡಿಟೋರಿಯಲ್​ ತಂಡದ ಶ್ರಮದಿಂದ ದೊರಕಿದ ಪ್ರಶಸ್ತಿ ಎಂದು ಹೇಳಿದರು.

ನಿರೂಪಕ ವಾಸುದೇವ್​ ಮಾರ್ನಾಟ್ ಮಾತನಾಡಿ, ಹಳ್ಳಿಯಿಂದ ಬಂದು ಇಂಥದ್ದೊಂದು ಪ್ರಶಸ್ತಿ ಪಡೆದಿರುವುದಕ್ಕೆ ನನಗೆ ಖುಷಿ ಎನಿಸುತ್ತಿದೆ. ಈ ಕಾರಣಕ್ಕೆ ನಾನು ನನ್ನ ತಂದೆ, ತಾಯಿಗೆ ಧನ್ಯವಾದಗಳನ್ನು ಹೇಳುವೆ. ಜತೆಗೆ ನನ್ನ ಏಳು ಬೀಳುಗಳಲ್ಲಿ ಜತೆಯಾಗಿರುವ ಗೆಳೆಯರಿಗೂ ಧನ್ಯವಾದ ತಿಳಿಸುವೆ. ಇದು ವಿಸ್ತಾರ ನ್ಯೂಸ್​​ನ ಪ್ರತಿಯೊಬ್ಬರ ಶ್ರಮದಿಂದ ನನಗೆ ದೊರಕಿದ ಪ್ರಶಸ್ತಿ ಎಂದು ಅವರು ಹೇಳಿದರು.

ಇದನ್ನೂ ಓದಿ: Rishabh Pant : ರಿಷಭ್​ ಪಂತ್​ಗೆ ವಿಶೇಷ ಸನ್ಮಾನ ಮಾಡಿದ ಡೆಲ್ಲಿ ಕ್ರಿಕೆಟ್ ಸಂಸ್ಥೆ

ಮೆಟ್ರೋ ಬ್ಯೂರೋ ಮುಖ್ಯಸ್ಥ ಬಿ ವಿ ಅಭಿಷೇಕ್ ಮಾತನಾಡಿ, ಈ ಪ್ರಶಸ್ತಿಗೆ ನನ್ನ ವೃತ್ತಿಯ ಆರಂಭದಿಂದಲೂ ಜತೆಗಿದ್ದ ಎಲ್ಲರಿಗೂ ಸಲ್ಲುತ್ತದೆ. ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

Exit mobile version