Site icon Vistara News

Tomato Destroy : ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೊ ಹೊಟ್ಟೆಕಿಚ್ಚಿಗೆ ಬಲಿ; ಕಣ್ಣೀರಿಟ್ಟ ರೈತ

tomato Destroy

ಚಾಮರಾಜನಗರ: ಕೆಲವೇ ಕೆಲವು ದಿನಗಳು ಕಳೆದಿದ್ದರೆ ಆ ರೈತನಿಗೆ ಟೊಮ್ಯಾಟೊ ಬೆಳೆಯು ಸಿರಿವಂತಿಕೆ ತಂದುಕೊಡುತ್ತಿತ್ತು. ಬೆಳೆಗಾರನ ಕೈ ಹಿಡಿದ ಟೊಮ್ಯಾಟೊವನ್ನು (Tomato price) ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಕಷ್ಟಗಳೆಲ್ಲವೂ ಒಮ್ಮೆಯೇ ದೂರ ಆಗುತ್ತಿತ್ತು. ಆದರೆ ದರ ಏರಿಕೆ ಹೊತ್ತಲ್ಲೇ ಕಿಡಿಗೇಡಿಗಳು ಟೊಮ್ಯಾಟೊ ಬೆಳೆ (Tomato Destroy) ನಾಶಪಡಿಸಿದ್ದಾರೆ.

ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೊ ಗಿಡಗಳನ್ನು ಬುಡಸಮೇತ ಕಿತ್ತು ಹಾಕಿ ವಿಕೃತಿ ಮೆರೆದಿದ್ದಾರೆ. ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮಂಜು ಈ ಬಾರಿ ಜಮೀನಿನಲ್ಲಿ ಟೊಮ್ಯಾಟೊ ಗಿಡವನ್ನು ಬೆಳೆದಿದ್ದರು.

ಇದನ್ನೂ ಓದಿ: ರಿಕವರಿಗೆ ತೆರಳಿದ್ದ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಕೇರಳದಲ್ಲಿ ಅರೆಸ್ಟ್‌!

ಲಕ್ಷಾಂತರ ರೂ. ಬಂಡವಾಳ ಸುರಿದು ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಟೊಮ್ಯಾಟೊ ಬೆಳೆಸಿದ್ದರು. ಇನ್ನೇನು ಫಸಲು ಕೈ ಸೇರುವ ಹಂತದಲ್ಲಿತ್ತು. ಆದರೆ ಕಿಡಿಗೇಡಿಗಳು ರಾತ್ರೋರಾತ್ರಿ ನುಗ್ಗಿ ಗಿಡಗಳನ್ನು ನಾಶ ಮಾಡಿದ್ದಾರೆ. ಇಂದು ಬೆಳಗ್ಗೆ ಎಂದಿನಂತೆ ಹೊಲಕ್ಕೆ ಬಂದು ನೋಡಿದಾಗ ಮಂಜು ಅವರಿಗೆ ಅಘಾತ ಕಾದಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೊ ನಾಶವಾಗಿದ್ದ ಕಂಡು ಜಮೀನಲ್ಲಿ ಮಲಗಿ ಹೊರಳಾಡಿ ಮಂಜು ಕಣ್ಣೀರು‌ ಹಾಕಿದ್ದಾರೆ.

ಹೊಟ್ಟೆ ಕಿಚ್ಚಿಗೆ ಈ ರೀತಿಯ ಮಣ್ಣು ತಿನ್ನುವ ಕೆಲಸ ಮಾಡಿದ್ದಕ್ಕೆ ಕಿಡಿಕಾರಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಬುಡಸಮೇತ ಟೊಮ್ಯಾಟೊ ಗಿಡ ಕತ್ತರಿಸಿ ಹಾಕಿರುವ ದುಷ್ಕರ್ಮಿಗಳ ವಿರುದ್ಧ ರೈತ ಮಂಜು ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version