ಈಗ ಒಂದು ರೀತಿಯಲ್ಲಿ ಪ್ರವಾಸದ ಸುಗ್ಗಿ ನಡೆಯುತ್ತಿದೆ. ಮಳೆಗಾಲದಲ್ಲಿ ಮೈ ತುಂಬಿಕೊಂಡಿರುವ ನಿಸರ್ಗ ಮಾತೆಯನ್ನು ಕಣ್ತುಂಬಿಕೊಳ್ಳಲೆಂದು ಎಲ್ಲರೂ ಪ್ರವಾಸದ ಮೋಜಿಗಿಳಿದಿದ್ದಾರೆ. ಆದರೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿರುವವರು ಎಲ್ಲಿ ಹೋಗುವುದು? ಸಿಗುವ ಒಂದೋ ಎರಡೋ ದಿನದ ರಜೆಯಲ್ಲಿ ದೂರದ ಊರಿಗೆ ಹೋಗಲಾಗುವುದಿಲ್ಲ ಅಂತಾದರೆ ಬೆಂಗಳೂರಿನಲ್ಲಿ ಎಲ್ಲಿ ಎಂಜಾಯ್ ಮಾಡಬಹುದು? ಬೆಂಗಳೂರಿನಲ್ಲಿರುವ ವಾಟರ್ ಪಾರ್ಕ್‌ಗಳು ಯಾವುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಾಟರ್ ವರ್ಲ್ಡ್
ಬೆಂಗಳೂರಿನಲ್ಲಿ ನೀರಿನಲ್ಲಿ ಆಟವಾಡಬೇಕು ಎನ್ನುವ ಮನಸ್ಸಿದ್ದರೆ ನೀವು ಫನ್ ವರ್ಲ್ಡ್‌ನಲ್ಲಿರುವ ವಾಟರ್ ವರ್ಲ್ಡ್‌ಗೆ ಭೇಟಿ ನೀಡಬಹುದು. ಇಲ್ಲಿ ಅನೇಕ ರೀತಿಯ ವಾಟರ್ ಗೇಮ್ಸ್‌ಗಳನ್ನು ನೀವು ಆಡಬಹುದಾಗಿದೆ. ಫೆಂಟಾಸ್ಟಿಕ್ ಫೋರ್, ಸೈಕ್ಲೋನ್, ಟೊರ್ನೊಡೊ, ಬೂಮ್‌ರ್ಯಾಂಗ್, ಲೇಜಿ ರಿವರ್, ಕಿಡ್ಡಿ ಪೂಲ್‌ನಂತಹ ಹಲವಾರು ಆಟಗಳನ್ನು ನೀವಿಲ್ಲಿ ಆಡಬಹುದು.
ಸಮಯ: ವಾರದ ಎಲ್ಲಾ ದಿನಗಳಲ್ಲಿ 11:00 AM -4:30 PM
ಪ್ರವೇಶ ಶುಲ್ಕ: ಪ್ರತಿ ವ್ಯಕ್ತಿಗೆ 750 ರೂ.
ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್
ಬೆಂಗಳೂರು ಮತ್ತು ಮೈಸೂರು ರಸ್ತೆಯ ಮಧ್ಯದಲ್ಲಿರುವವರಿಗೆ ಮೈಸೂರಿನಲ್ಲೂ ಕೂಡ ವಾಟರ್ ಗೇಮ್ಸ್ ಆಡಲು ಅವಕಾಶವಿದೆ. ಮೈಸೂರಿನ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್‌ಗೆ ಭೇಟಿ ನೀಡಿ ಎಲ್ಲ ರೀತಿಯ ವಾಟರ್ ಗೇಮ್ಸ್‌ಗಳನ್ನು ಆಡಬಹುದಾಗಿದೆ. ಹಾಗೆಯೇ ಬೆಂಗಳೂರಿಗರು ಕೂಡ ಎರಡು ತಾಸು ಪ್ರಯಾಣ ಮಾಡಿ ಈ ಫ್ಯಾಂಟಸಿ ಪಾರ್ಕ್‌ಗೆ ತಲುಪಬಹುದಾಗಿದೆ.
ಸಮಯ: ವಾರದ ದಿನಗಳಲ್ಲಿ 10:30 AM-6:00 PM. ಭಾನುವಾರದಂದು 10:30 AM-7:00 PM
ಪ್ರವೇಶ ಶುಲ್ಕ: ವಯಸ್ಕರಿಗೆ 645 ರೂ, ಮಕ್ಕಳಿಗೆ 550 ರೂ.
ವಂಡರ್‌ಲಾ
ಬೆಂಗಳೂರಿನಲ್ಲಿರುವ ಬೆಸ್ಟ್ ವಾಟರ್ ಪಾರ್ಕ್ ಎಂದರೆ ಅದು ವಂಡರ್‌ಲಾ ವಾಟರ್ ಪಾರ್ಕ್. ಇಲ್ಲಿ ಬರೀ ವಾಟರ್ ಗೇಮ್ಸ್ ಮಾತ್ರವಲ್ಲದೆ ಬೇರೆ ರೀತಿಯ ಹಲವಾರು ಗೇಮ್‌ಗಳೂ ಇವೆ. ರೈನ್ ಡಿಸ್ಕೋ ಹಾಗೆಯೇ ಅತಿ ಹೆಚ್ಚು ರೀತಿಯ ವಾಟರ್ ರೈಡ್‌ಗಳನ್ನು ನೀವಿಲ್ಲಿ ಮಾಡಬಹುದು. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ರಸ್ತೆಯಲ್ಲಿ ವಂಡರ್‌ಲಾ ಸಿಗುತ್ತದೆ.
ಸಮಯ: ಎಲ್ಲಾ ದಿನಗಳಲ್ಲಿ 11:00 AM – 6:00 PM (ಕೆಲವು ದಿನಗಳಲ್ಲಿ ಸಂಜೆ 7ರವರೆಗೆ ತೆರೆದಿರುತ್ತದೆ)
ಪ್ರವೇಶ ಶುಲ್ಕ: ವಯಸ್ಕರಿಗೆ 890 ರೂ., ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ 720 ರೂ. (ಸಾಮಾನ್ಯ ದಿನಗಳಲ್ಲಿ)
ವಯಸ್ಕರಿಗೆ 1,120, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ 890 (ಹೆಚ್ಚು ಜನರಿರುವ ದಿನ)
(ಇಲ್ಲಿ ತಿಳಿಸಿರುವ ಶುಲ್ಕ ತೆರಿಗೆಯನ್ನು ಹೊರತುಪಡಿಸಿದೆ)
ನೀಲಾದ್ರಿ ಅಮ್ಯೂಸ್ಮೆಂಟ್ ಮತ್ತು ವಾಟರ್ ಪಾರ್ಕ್ಸ್
ಬೆಂಗಳೂರಿನ ಹತ್ತಿರದಲ್ಲೇ ಇರುವ ಮತ್ತೊಂದು ವಾಟರ್ ಪಾರ್ಕ್ ಎಂದರೆ ಅದು ನೀಲಾದ್ರಿ ಅಮ್ಯೂಸ್ಮೆಂಟ್ ಮತ್ತು ವಾಟರ್ ಪಾರ್ಕ್. ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಈ ಪಾರ್ಕ್ ಇದೆ. ಇಲ್ಲಿ ಒಟ್ಟಾರೆಯಾಗಿ 45 ರೀತಿಯ ಆಟಗಳಿವೆ. ಸೈಕ್ಲೋನ್, ವಾಟರ್ ಛೂಟ್, ವಾಟರ್ ಸ್ಲೈಡ್ ಸೇರಿ ಅನೇಕ ರೀತಿಯ ವಾಟರ್ ಗೇಮ್‌ಗಳು ಈ ಪಾರ್ಕ್‌ನಲ್ಲಿವೆ.
ಸಮಯ: ಸೋಮವಾರದಿಂದ ಶುಕ್ರವಾರದವರೆಗೆ 11:00 AM-6:00 PM ವರೆಗೆ
ಶನಿವಾರ ಮತ್ತು ಭಾನುವಾರ 11:00 AM-7:00 PM
ಪ್ರವೇಶ ಶುಲ್ಕ: ವಯಸ್ಕರಿಗೆ 75 ರೂ. ಮತ್ತು ಮಕ್ಕಳಿಗೆ 60 ರೂ.
ಲುಂಬಿನಿ ಗಾರ್ಡನ್ಸ್
ಬರೀ ವಾಟರ್ ಗೇಮ್ಸ್ ಮಾತ್ರವಲ್ಲ, ನಿಮಗೆ ಎಲ್ಲ ರೀತಿಯ ಮನೋರಂಜನೆ ಬೇಕೆಂದರೆ ಲುಂಬಿನಿ ಗಾರ್ಡನ್ಸ್‌ಗೆ ಭೇಟಿ ನೀಡಿ. ಕುಟುಂಬದ ಜತೆ, ಸ್ನೇಹಿತರ ಜತೆ ಅಥವಾ ಸಹೋದ್ಯೋಗಿಗಳ ಜತೆ ಅರಾಮವಾಗಿ ದಿನ ಕಳೆಯಲು ಇದು ಹೇಳಿ ಮಾಡಿಸಿದ ಸ್ಥಳ. ವಾಟರ್ ಸ್ಲೈಡ್ಸ್, ಬೋಟಿಂಗ್‌ಮ ಟ್ರಾಂಪೊಲೈನ್ಸ್, ವೇವ್ ಪೂಲ್ಸ್ ಸೇರಿ ಅನೇಕ ರೀತಿಯ ಆಟಗಳು ಇಲ್ಲಿವೆ.
ಸಮಯ: ವಾರದ ಎಲ್ಲಾ ದಿನಗಳಲ್ಲಿ 11:00 AM-7:30 PM
ಪ್ರವೇಶ ಶುಲ್ಕಗಳು: 50 ರೂ, ವೇವ್ ಪೂಲ್‌ಗೆ 100 ರೂ.
ಕ್ರೇಜಿ ವಾಟರ್ಸ್
ಬೆಂಗಳೂರಿನ ಜೆಪಿ ನಗರದಲ್ಲಿರುವ ಈ ಪಾರ್ಕ್ ಎಲ್ಲ ವಯಸ್ಸಿನವರಿಗೂ ಇಷ್ಟವಾಗುವ ಸ್ಥಳ. ಇಲ್ಲಿ ವಾಟರ್ ಗೇಮ್ಸ್ ಮಾತ್ರವಲ್ಲದೆ ಹಲವಾರು ಫನ್ ಗೇಮ್‌ಗಳೂ ಇವೆ. ಈ ಪಾರ್ಕ್‌ಗ ಪರ್ಲ್ ವಾಟರ್ ಪಾರ್ಕ್ ಎನ್ನುವ ಹೆಸರೂ ಇದೆ. ವಾಟರ್ ಛೂಟ್, ಮಿನಿ ಟ್ವಿಸ್ಟರ್, ಫ್ಯಾಮಿಲಿ ಸ್ಲೈಡ್ಸ್, ಫಾರ್ಮುಲ 2, ಕೊಲಂಬಸ್ ಸೇರಿ ಅನೇಕ ರೀತಿಯ ಆಟಗಳು ಇಲ್ಲಿವೆ.
ಸಮಯ: 11:00 AM-6:00 PM
ಪ್ರವೇಶ ಶುಲ್ಕ: ಮಕ್ಕಳಿಗೆ 80 ರೂ. ಮತ್ತು ವಯಸ್ಕರಿಗೆ 100 ರೂ.
ಇನೋವೆಟಿವ್ ಫಿಲ್ಮ್ ಸಿಟಿ
ಇದೊಂದು ರೀತಿಯಲ್ಲಿ ಆಲ್ ಇನ್ ಒನ್ ಸ್ಥಳವಾಗಿದೆ. ಇಲ್ಲಿ ವ್ಯಾಕ್ಸ್ ಮ್ಯೂಸಿಯಂ, ಮಿನಿ ಗಾಲ್ಫ್, ಬಂಗೀ ಜಂಪಿಂಗ್, ಫಾಸಿಲ್ ಮ್ಯೂಸಿಯಂ ಸೇರಿ ಅನೇಕ ರೀತಿಯ ವಿಶೇಷತೆಗಳನ್ನು ನೀವಿಲ್ಲಿ ನೋಡಬಹುದು. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಮನೆ ಕೂಡ ಈ ಫಿಲ್ಮ್ ಸಿಟಿಯಲ್ಲೇ ಇದೆ. ಇಲ್ಲಿ ಹಲವಾರು ರೀತಿಯ ವಾಟರ್ ಗೇಮ್ಸ್‌ಗಳು ಕೂಡ ಇದ್ದು, ಒಂದು ದಿನವನ್ನು ಆಟೋಟದಲ್ಲಿ ಕಳೆಯಬಹುದಾಗಿದೆ.
ಸಮಯ: ವಾರದ ಎಲ್ಲಾ ದಿನಗಳಲ್ಲಿ 10:00 AM-7:00 PM
ಪ್ರವೇಶ ಶುಲ್ಕಗಳು: ಮಧ್ಯಾಹ್ನ 3:00 ಗಂಟೆಗೆ ಮೊದಲು ಪ್ರತಿ ವ್ಯಕ್ತಿಗೆ 599 ರೂ. 3:00 PM ನಂತರ 399 ರೂ.
ಸ್ನೋ ಸಿಟಿ
ಬೆಂಗಳೂರಿನಲ್ಲೇ ಇದ್ದುಕೊಂಡು ಹಿಮಾಲಯದ ಮಂಜಿನ ಅನುಭವವನ್ನು ಅನುಭವಿಸಬೇಕು ಎಂದರೆ ನೀವು ಸ್ನೋ ಸಿಟಿಗೆ ಹೋಗಬೇಕು. ಮಳೆಗಾಲವಾಗಲೀ, ಚಳಿಗಾಲವಾಗಲಿ ನೀವು ಯಾವುದೇ ಸಮಯದಲ್ಲಿ ಹೋದರೂ ಇಲ್ಲಿ ಮಂಜನ್ನು ನೋಡಬಹುದು. ಮಂಜುಗಡ್ಡೆಯೊಂದಿಗೆ ಮಕ್ಕಳಂತೆ ಆಟವಾಡಬಹುದು. ಬೆಂಗಳೂರಿಗರಿಗೆ ಇದೊಂದು ಬೆಸ್ಟ್ ಪಿಕ್ನಿಕ್ ತಾಣ ಎಂದೇ ಹೇಳಬಹುದು.
ಸಮಯ: ವಾರದ ಎಲ್ಲಾ ದಿನಗಳಲ್ಲಿ 10:00 AM-8:30 PM
ಪ್ರವೇಶ ಶುಲ್ಕಗಳು: ವಾರದ ದಿನಗಳಲ್ಲಿ ಪ್ರತಿ ವ್ಯಕ್ತಿಗೆ 390 ರೂ. ಮತ್ತು ವಾರಾಂತ್ಯದಲ್ಲಿ ಮತ್ತು ಪೀಕ್ ದಿನಗಳಲ್ಲಿ 490 ರೂ.
ಜವಾಹರ್ ಬಾಲ ಭವನ
ನಿಮಗೆ ನಿಮ್ಮ ಮಕ್ಕಳಿಗೆ ಒಂದೊಳ್ಳೆ ಪ್ರವಾಸ ಅನುಭವ ಮಾಡಿಸಬೇಕು ಎನ್ನುವ ಮನಸ್ಸಿದ್ದರೆ ಜವಾಹರ್ ಬಾಲ ಭವನಕ್ಕೆ ಭೇಟಿ ನೀಡಿ. ಇಲ್ಲಿ ಮಕ್ಕಳಿಗೆಂದೇ ವಿಶೇಷವಾದ ಆಟಗಳಿವೆ. ಫನ್ ಜೋಕಾಲಿಗಳು, ಟ್ರೀ ಹೌಸ್, ಟಾಯ್ ಟ್ರೈನ್, ಕುದುರೆ ಸವಾರಿ, ಗೊಂಬೆಗಳ ಮ್ಯೂಸಿಯಂ, ಬೋಟಿಂಗ್ ಸೇರಿ ಅನೇಕ ರೀತಿಯ ಆಟಗಳು ಇಲ್ಲಿವೆ. ಪರೀಕ್ಷೆಯ ಒತ್ತಡ ಅನುಭವಿಸಿದ ಮಕ್ಕಳಿಗೆ ಮನಸ್ಸಿಗೆ ಉಲ್ಲಾಸ ತರಿಸಲು ಇದು ಸೂಕ್ತ ಸ್ಥಳ.
ಸಮಯ: ಪ್ರತಿ ಸೋಮವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ 10:30 AM -6:00 PM
ಪ್ರವೇಶ ಶುಲ್ಕ: ಪ್ರತಿ ವ್ಯಕ್ತಿಗೆ 10 ರೂ.
ಸ್ಟಾರ್ ಸಿಟಿ
ಇದೂ ಕೂಡ ಮಕ್ಕಳಿಗೆ ಆಟವಾಡುವುದಕ್ಕೆ ಹೇಳಿ ಮಾಡಿಸಿದ ಸ್ಥಳ ಎನ್ನಬಹುದು. ಹಾಗೆಂದ ಮಾತ್ರಕ್ಕೆ ವಯಸ್ಕರಿಗೆ ಆಟೋಟಗಳು ಇಲ್ಲವೆಂದೇನಿಲ್ಲ. ಇಲ್ಲಿ ಅನೇಕ ರೀತಿಯ ಆಟಗಳು ವಯಸ್ಕರಿಗೂ ಇವೆ. ಹಲವಾರು ರೀತಿಯ ವಿಡಿಯೊ ಗೇಮ್ಸ್‌ಗಳು, ಬೌಲಿಂಗ್ ಆಟ ಕೂಡ ಇದೆ.
ಸಮಯ: ಪ್ರತಿದಿನ 11:00 AM-8:30 PM
ಎಕ್ಸ್‌ಟ್ರೀಮ್‌ಜೋನ್ ಗೆಟಾವೇಸ್
ಇದು ನೀವು ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಗೆಟ್ ಟುಗೇದರ್ ಮಾಡುವುದಕ್ಕೆ ಸೂಕ್ತ ಸ್ಥಳವಾಗಿದೆ. ಸಾವನದುರ್ಗ ಕಾಡಿನ ನಡುವೆ ಮಂಚನಬೆಲೆ ಕೆರೆಯ ದಡದಲ್ಲಿನ ಕ್ಯಾಂಪಿಂಗ್‌ನಲ್ಲಿ ಆರಾಮವಾಗಿ ಕಾಲ ಕಳೆಯಬಹುದು. ಇಲ್ಲಿ ಜಲ ಕ್ರೀಡೆಗಳಿಗೂ ಅವಕಾಶವಿದೆ. ಹಾಗೆಯೇ ಎಲ್ಲ ರೀತಿಯ ಸೌಕರ್ಯಗಳು, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉತ್ತಮ ರೀತಿಯಲ್ಲಿ ನಿರ್ವಹಣೆಗೊಂಡಿರುವ ಈ ಸ್ಥಳದಲ್ಲಿ ನೀವು ಪಾರ್ಟಿ ಯೋಜನೆ ಹಾಕಿಕೊಳ್ಳಬಹುದು.
ಸಮಯ: 9:30 AM – 6:00 PM
ಪ್ರವೇಶ ಶುಲ್ಕ: 1300-1500 ರೂ. + ತೆರಿಗೆಗಳು (ಆಹಾರ ಮತ್ತು ಚಟುವಟಿಕೆಗಳನ್ನು ಒಳಗೊಂಡಂತೆ)
ಫನ್ ವರ್ಲ್ಡ್
ಬೆಂಗಳೂರಿನಲ್ಲಿ ವಂಡರ್‌ಲಾ ನಂತರ ಕೇಳಿಬರುವ ಹೆಸರೆಂದರೆ ಅದು ಫನ್ ವರ್ಲ್ಡ್. ಇಲ್ಲಿ ಎಲ್ಲ ವಯಸ್ಸಿನವರಿಗೆ ಆಟೋಟಗಳು ಲಭ್ಯವಿವೆ. ವಾಟರ್ ವರ್ಲ್ಡ್, ಸ್ಟಾರ್ ಸಿಟಿ ಕೂಡ ಈ ವರ್ಲ್ಡ್‌ನ ಒಳಗಿವೆ. ಮಿನಿ ಪೈರೇಟ್ ಶಿಪ್, ಟಾಯ್ ಟ್ರೈನ್. ಫ್ಲೈಯಿಂಗ್ ಅಪ್ಪು, ಫ್ಲೈಯಿಂಗ್ ಟೈಗರ್, ಜಂಪಿಂಗ್ ಫ್ರಾಗ್ ಸೇರಿ ಅನೇಕ ರೀತಿಯ ಆಟಗಳು ಈ ವರ್ಲ್ಡ್‌ನಲ್ಲಿವೆ. ಒಂದು ದಿನದ ಮಟ್ಟಿಗೆ ಪೂರ್ತಿಯಾಗಿ ಎಂಜಾಯ್ ಮಾಡಲು ಇಲ್ಲಿಗೆ ಭೇಟಿ ನೀಡಬಹುದು.
ಸಮಯ: 11:00 AM -7:30 PM
ಪ್ರವೇಶ ಶುಲ್ಕ: ಪ್ರತಿ ವ್ಯಕ್ತಿಗೆ 750 ರೂ.