Site icon Vistara News

Tourist Spot : ಚಿಕ್ಕಮಗಳೂರು ಪ್ರವಾಸಿ ತಾಣಗಳಿಗೆ ಹೇರಿದ್ದ ನಿಷೇಧ ವಾಪಸ್

Kallattigiri Falls

ಚಿಕ್ಕಮಗಳೂರು: ಚಿಕ್ಕಮಗಳೂರಿನ (Chikkamagaluru News) ಪ್ರವಾಸಿ ತಾಣಗಳಿಗೆ (Tourist place) ಪ್ರವಾಸಿಗರ ಪ್ರವೇಶಕ್ಕೆ ಜಿಲ್ಲಾಡಳಿತ ತಾತ್ಕಾಲಿಕ ನಿಷೇಧವನ್ನು ಹಾಕಿತ್ತು. ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಕಳೆದೊಂದು ವಾರದಿಂದ ಭಾರಿ ಮಳೆಗೆ ಭೂ ಕುಸಿತ ಉಂಟಾಗಿತ್ತು. ಈ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಪ್ರವಾಸಿಗರಿಗೆ (Tourist Spot) ತಡೆ ನೀಡಿತ್ತು. ಇದೀಗ ನಿಷೇಧವನ್ನು ವಾಪಸ್‌ ಪಡೆಯಲಾಗಿದೆ.

ಈ ಸಂಬಂಧ ಸೋಮವಾರ ಸಭೆ ನಡೆಸಿರುವ ಚಿಕ್ಕಮಗಳೂರು ಜಿಲ್ಲಾಡಳಿತವು ಪ್ರವಾಸಿಗರಿಗೆ ಅನುಮತಿ ನೀಡಿದೆ. ಮುಳ್ಳನಗಿರಿ, ದತ್ತಪೀಠ, ಕಲ್ಲತ್ತಿಗಿರಿ ಜಲಪಾತ ಸೇರಿದಂತೆ ಹಲವು ತಾಣಗಳಿಗೆ ಪ್ರವೇಶ ನೀಡಲಾಗಿದೆ. ಭೂಕುಸಿತ ಆತಂಕ ಹಿನ್ನೆಲೆ ಪ್ರವಾಸಿಗರನ್ನು ನಿಷೇಧಿಸಲಾಗಿತ್ತು. ಆದರೆ ಇದೀಗ ಮಳೆ ಸಂಪೂರ್ಣ ಕಡಿಮೆಯಾದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾಡಳಿತ ನಿಷೇಧವನ್ನು ವಾಪಸ್ ಪಡೆದಿದೆ.

ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ ವ್ಯಾಪ್ತಿಯ ಗಿರಿಶ್ರೇಣಿಗಳಿಂದ ನೀರು ಧುಮ್ಮಿಕ್ಕುತ್ತಿತ್ತು. ಇದರಿಂದ ಹಳ್ಳಕೊಳ್ಳಗಳಲ್ಲಿ ನೀರಿನ ಅರಿವು ಹೆಚ್ಚಾಗಿರುವ ಕಾರಣ ಸಂಚಾರಕ್ಕೆ ತೊಂದರೆಯಾಗಿತ್ತು. ಹೀಗಾಗಿ ಪ್ರವಾಸಿ ತಾಣಗಳ ಚೆಕ್‌ಪೋಸ್ಟ್‌ನಲ್ಲೇ ನಿಷೇಧ ಹೇರಲಾಗಿತ್ತು. ಇದೀಗ ನಿಷೇಧ ಹಿಂಪಡೆದಿರುವುದರಿಂದ ಪ್ರವಾಸಿಗರು ಸಂತಸಗೊಂಡಿದ್ದು, ತಾಣಗಳಿಗೆ ಲಗ್ಗೆಯಿಡುತ್ತಿದ್ದಾರೆ.

ಶ್ರೀಕ್ಷೇತ್ರ ಕಲ್ಲತ್ತಿಗಿರಿ ಜಲಪಾತದ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಲಪಾತದ ಬಳಿಗೆ ಹೋಗಿ ವೀಕ್ಷಣೆ ಮಾಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಪ್ರವಾಸಿಗರು ಮತ್ತು ಭಕ್ತರು ಜಲಪಾತದ ಸಮೀಪ ಹೋಗುವ ಮೆಟ್ಟಿಲುಗಳ ಬಳಿಯ ಗೇಟ್‌ಗಳಿಗೆ ಬೀಗ ಹಾಕಲಾಗಿತ್ತು. ಜತೆಗೆ ನದಿ, ಝರಿ ಜಲಪಾತ, ಹೋಂ ಸ್ಟೇ, ರೆಸಾರ್ಟ್, ಟ್ರಕಿಂಗ್ ಸ್ಥಳಗಳಿಗೆ ನಿಷೇಧ ಹಾಕಲಾಗಿತ್ತು. ಗುಡ್ಡಗಾಡು ಪ್ರದೇಶಗಳಿಗೆ ಚಾರಣಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿತ್ತು. ಇದೀಗ ಮಳೆ ಅಬ್ಬರ ಕಡಿಮೆ ಆಗಿದೆ. ಹೀಗಾಗಿ ಪ್ರವಾಸಿಗರ ಭೇಟಿಗೆ ಅವಕಾಶ ಕೊಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version