Site icon Vistara News

ಡಿ.18ರಿಂದ ಪ್ರವಾಸಿಗರಿಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನಿರ್ಬಂಧ!

Himavad Gopalaswamy Hill closed due to road repair

ಚಾಮರಾಜನಗರ: ಕರ್ನಾಟಕದ ಕಾಶ್ಮೀರ ಎಂದೇ ಕರೆಯಲ್ಪಡುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ (Himavad Gopalaswamy Hill) ಪ್ರವಾಸಿಗರಿಗೆ ನಿರ್ಬಂಧ (Restrictions on tourists) ಹೇರಲಾಗಿದೆ. ಡಿ. 18ರಿಂದ ಮೂರು ದಿನಗಳು ಬೆಟ್ಟದ ದಾರಿಯು ಬಂದ್‌ ಆಗಲಿದೆ. ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದಲ್ಲಿ ರಸ್ತೆ ಕಾಮಗಾರಿಯನ್ನು ತಾಲೂಕು ಆಡಳಿತ ಕೈಗೆತ್ತಿಕೊಂಡಿದೆ.

ಗೋಪಾಲಸ್ವಾಮಿ ಬೆಟ್ಟವು ಅತಿ ಕಡಿದಾದ ರಸ್ತೆಯನ್ನು ಹೊಂದಿದೆ. ಹೀಗಾಗಿ ಡಿ.18ರಿಂದ 20ರವರೆಗೆ ಮೂರು‌ ದಿನ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ನಿರ್ಬಂಧ ಹೇರಿ ಗುಂಡ್ಲುಪೇಟೆ ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಹೀಗಾಗಿ ಗೋಪಾಲಸ್ವಾಮಿಯ ದರ್ಶನ ಭಾಗ್ಯವು ಮೂರು ದಿನ ಇರವುದಿಲ್ಲ.

ಪ್ರವಾಸಿಗರೇ.. ಡಿ.22ರಿಂದ ಚಿಕ್ಕಮಗಳೂರಿನ ಈ ಪ್ರವಾಸ ತಾಣಕ್ಕೆ ಹೋಗ್ಬೇಡಿ!

ಚಿಕ್ಕಮಗಳೂರು : ಕ್ರಿಸ್‌ಮಸ್‌ ರಜೆ ಇದೆ ಅಂತ ನೀವೆನಾದರೂ ಫ್ಯಾಮಿಲಿ, ಫ್ರೆಂಡ್ಸ್‌ ಜತೆಗೆ ಡಿ.22ರ ಬಳಿಕ ಚಿಕ್ಕಮಗಳೂರು (Chikkamagaluru News) ಟ್ರಿಪ್‌ಗೆ ಪ್ಲ್ಯಾನ್‌ ಮಾಡಿದರೆ ಅದು ಫ್ಲಾಪ್‌ ಆಗುವುದು ಪಕ್ಕಾ. ಯಾಕೆಂದರೆ ಚಿಕ್ಕಮಗಳೂರು ಪ್ರವಾಸಿ ತಾಣಗಳಿಗೆ (Chikkamagaluru Tourist Spot) ಜಿಲ್ಲಾಡಳಿತ ನಿರ್ಬಂಧ ಹೇರಿದೆ.

6 ದಿನಗಳ ಕಾಲ ಪಶ್ಚಿಮ ಘಟ್ಟಗಳ ಸಾಲಿನ ಪ್ರವಾಸಿ ತಾಣಗಳು ನಿರ್ಬಂಧವಾಗಲಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರಾ ಸೇರಿದಂತೆ ಎಲ್ಲ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗುತ್ತಿದೆ. ಡಿಸೆಂಬರ್‌ 22 ರಿಂದ 27ರವರೆಗೆ 6 ದಿನಗಳ ಕಾಲ ಗಿರಿಭಾಗಕ್ಕೆ ಟೂರಿಸ್ಟ್ ಬ್ಯಾನ್ ಮಾಡಲಾಗಿದೆ.

ಡಿಸೆಂಬರ್‌ 24, 25, 26ರಂದು ಕಾಫಿನಾಡು ಚಿಕ್ಕಮಗಳೂರಲ್ಲಿ ದತ್ತಪೀಠದಲ್ಲಿ ದತ್ತ ಜಯಂತಿ ಶುರುವಾಗಲಿದೆ. ಡಿ. 26ರಂದು 20 ಸಾವಿರಕ್ಕೂ ಅಧಿಕ ಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸುತ್ತಾರೆ. ಐ.ಡಿ ಪೀಠಕ್ಕೆ ತೆರಳುವ ರಸ್ತೆಯು ಕಿರಿದಾಗಿದ್ದು, ವಾಹನಗಳ ದಟ್ಟಣೆಯಾಗುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತವು ಪ್ರವಾಸಕ್ಕೆ ನಿರ್ಬಂಧ ಹೇರಿದೆ. ಜತೆಗೆ ಗಿರಿ ಭಾಗದಲ್ಲಿ ಕ್ರಿಸ್ ಮಸ್ ಸೆಲೆಬ್ರೇಷನ್ ಮಾಡುವುದಕ್ಕೂ ಬ್ರೇಕ್ ಹಾಕಲಾಗಿದೆ. 6 ದಿನಗಳ ಕಾಲ ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣಗಳಿಗೆ ಟೂರಿಸ್ಟ್ ವಿಸಿಟ್‌ ಬ್ಯಾನ್ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version