Site icon Vistara News

Tractor tragedy : ಟ್ರ್ಯಾಕ್ಟರ್ ಟೈರ್ ಬದಲಾಯಿಸುವಾಗ ಸ್ಲಿಪ್‌ ಆದ ಜಾಕ್ ; ಟ್ರಾಲಿ ಕೆಳಗೆ ಸಿಲುಕಿ ಇಬ್ಬರು ಮೃತ್ಯು

Tractor Accident

ಚಿಕ್ಕಮಗಳೂರು: ಇಲ್ಲಿನ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಟ್ರ್ಯಾಕ್ಟರ್ ಟ್ರಾಲಿ ಕೆಳಗೆ ಸಿಲುಕಿ ಇಬ್ಬರು ಮೃತಪಟ್ಟಿರುವ ದುರ್ಘಟನೆ (Tractor tragedy) ನಡೆದಿದೆ. ನಿಲುವಾಗಿಲು ಗ್ರಾಮದ ಸುಬ್ರಹ್ಮಣ್ಯ (30) ಹಾಗೂ ಸುನಿಲ್ (27) ಮೃತ ದುರ್ದೈವಿಗಳು.

ಸುಬ್ರಹ್ಮಣ್ಯ ಹಾಗೂ ಸುನಿಲ್‌ ಟ್ರ್ಯಾಕ್ಟರ್ ಟೈರ್ ಬದಲಾಯಿಸಲು ಮುಂದಾಗಿದ್ದರು. ಈ ವೇಳೆ ಜಾಕ್ ಸ್ಲಿಪ್ ಆಗಿದ್ದು, ಟ್ರ್ಯಾಕ್ಟರ್ ಟ್ರಾಲಿ ಕೆಳಗೆ ಸಿಲುಕಿದ್ದಾರೆ. ಹೊರಬರಲು ಆಗದೆ ಗಂಭೀರ ಗಾಯಗೊಂಡು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Night Robbery Case: ಮಧ್ಯರಾತ್ರಿ ದರೋಡೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್‌; ಬಂಧಿತರು ಸುಲಿಗೆಕೋರರಲ್ಲ?

Exit mobile version