Site icon Vistara News

Dharma Dangal | ಕದ್ರಿ ದೇವಸ್ಥಾನದ ಜಾತ್ರೆಯಲ್ಲೂ ಹಿಂದುಯೇತರ ವ್ಯಾಪಾರಿಗಳಿಗೆ ನಿಷೇಧ: ಕುಕ್ಕರ್‌ ಬ್ಲಾಸ್ಟ್‌ ಉಲ್ಲೇಖ

Kadri temple

ಮಂಗಳೂರು: ಕರಾವಳಿಯಲ್ಲಿ ವ್ಯಾಪಾರ ಕುರಿತ ಧರ್ಮ ದಂಗಲ್‌ (Dharma Dangal) ಮುಂದುವರಿದಿದೆ. ಇಲ್ಲಿನ ದೇವಸ್ಥಾನಗಳಲ್ಲೀಗ ಜಾತ್ರೆಯ ಋತುವಾಗಿದ್ದು, ವರ್ಷಾವಧಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಹಿಂದುಯೇತರರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂಬ ಕೂಗು ಜೋರಾಗಿದೆ.

ಮಂಗಳೂರಿನ ಪ್ರತಿಷ್ಠಿತ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಜಾತ್ರೆ ಜನವರಿ ೧೪ರಂದು ಆರಂಭಗೊಂಡಿದ್ದು, ೨೧ರವರೆಗೆ ನಡೆಯಲಿದೆ. ಈ ಜಾತ್ರೆಯ ಸಂದರ್ಭದಲ್ಲಿ ಹಿಂದುಯೇತರರಿಗೆ ವ್ಯಾಪಾರ ಮಾಡಲು ಅವಕಾಶವಿಲ್ಲ ಎಂದು ದೇವಸ್ಥಾನದ ಮುಂಭಾಗ ವ್ಯಾಪಾರ ನಿಷೇಧದ ಬ್ಯಾನರ್ ಹಾಕಲಾಗಿದೆ.

ಕುಕ್ಕರ್‌ ಬ್ಲಾಸ್ಟ್‌ ಉಲ್ಲೇಖ
ವಿಶ್ವ ಹಿಂದೂ ಪರಿಷತ್, ಭಜರಂಗದಳ ಶಿವಶಕ್ತಿ ಶಾಖೆ ಕದ್ರಿಯಿಂದ ಬ್ಯಾನರ್ ಅಳವಡಿಸಲಾಗಿದೆ. ಕದ್ರಿ ಮಂಜುನಾಥನ ಜಾತ್ರೆಯಲ್ಲಿ ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.

ಅದಕ್ಕಿಂತಲೂ ಹೆಚ್ಚಾಗಿ ಮಂಗಳೂರಿನಲ್ಲಿ ನವೆಂಬರ್‌ ೧೯ರಂದು ನಡೆದ ಕುಕ್ಕರ್‌ ಬಾಂಬ್‌ ಸ್ಫೋಟದ ಉಲ್ಲೇಖವನ್ನು ಮಾಡಲಾಗಿದೆ. ಶಿವಮೊಗ್ಗದ ತೀರ್ಥಹಳ್ಳಿಯ ಸೊಪ್ಪಿನಗುಡ್ಡೆಯ ನಿವಾಸಿಯಾಗಿರುವ ಮೊಹಮ್ಮದ್‌ ಶಾರಿಕ್‌ ಕುಕ್ಕರ್‌ ಬ್ಲಾಸ್ಟ್‌ ನಡೆಸಲು ಸನ್ನದ್ಧನಾಗಿದ್ದು, ಅವನ ಟಾರ್ಗೆಟ್‌ ಲಿಸ್ಟ್‌ನಲ್ಲಿ ಮೊದಲನೆಯದಾಗಿ ಇದ್ದಿದ್ದೇ ಕದ್ರಿ ದೇವಸ್ಥಾನ ಎಂದು ಬ್ಯಾನರ್‌ನಲ್ಲಿ ಉಲ್ಲೇಖಿಸಲಾಗಿದೆ. ಅಂತಹ ಮನಸ್ಥಿತಿ ಉಳ್ಳವರಿಗೆ ಮತ್ತು ವಿಗ್ರಹಾರಾಧನೆಯನ್ನು ಹರಮ್ ಎಂದು ನಂಬಿರುವ ಯಾರಿಗೂ ಇಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಅದರಲ್ಲಿ ಬರೆಯಲಾಗಿದೆ.

ಇದೇ ಸಂದರ್ಭದಲ್ಲಿ ಮಂಗಳೂರಿನ ಕಾವೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ವ್ಯಾಪಾರ ನಿಷೇಧದ ಬ್ಯಾನರ್‌ ಕಾಣಿಸಿಕೊಂಡಿದೆ. ಇದು ವಿಶ್ವ ಹಿಂದು ಪರಿಷತ್‌ ಮತ್ತು ಇತರ ಸಂಘ ಪರಿವಾರದ ಸಂಘಟನೆಗಳು ಹಾಕಿದ ಬ್ಯಾನರ್‌ ಆಗಿದೆ. ಬ್ಯಾನರ್‌ಗೆ ಸಂಬಂಧಿಸಿ ದೇವಸ್ಥಾನದ ಆಡಳಿತ ಮಂಡಳಿ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ಇದನ್ನೂ ಓದಿ | Dharma Dangal‌ : ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಧರ್ಮ ದಂಗಲ್‌ ಬಿಸಿ

Exit mobile version